ಆ್ಯಪ್​ನಲ್ಲಿ ಲೋನ್​ ಪಡೆಯುವ ಮುನ್ನ ಎಚ್ಚರ! ಹಣದ ದಾಹಕ್ಕೆ ಈ ಮಿಸ್ಟೇಕ್ ಮಾಡಿದ್ರೆ ಸಿಗುವ ಸಾಲವು ಸಿಗಲ್ಲ​ | Credit Hungry

ಮೊಬೈಲ್ ಆ್ಯಪ್​ನಲ್ಲಿ ಲೋನ್​ ಪಡೆಯುವ ಮುನ್ನ ಎಚ್ಚರ
ಮೊಬೈಲ್ ಆ್ಯಪ್​ನಲ್ಲಿ ಲೋನ್​ ಪಡೆಯುವ ಮುನ್ನ ಎಚ್ಚರ
Published on

ಪ್ರಮುಖ ಮುಖ್ಯಾಂಶಗಳು

  • ಯಾವುದೇ ವಸ್ತುವನ್ನು ಸಾಲದಲ್ಲಿ ಪಡೆಯಲು ಈಗ ಸಿಬಿಲ್ ಅಂಕಿ​ ತುಂಬಾ ಮುಖ್ಯ
  • ಪದೇ ಪದೇ ಸಿಬಿಲ್​ ಸ್ಕೋರ್​ ಚೆಕ್​ ಮಾಡಿದ್ರೆ ಪಾಯಿಂಟ್ಸ್​ ಕುಸಿಯುತ್ತಾ?
  • ಹಣದ ದಾಹಕ್ಕೆ ಮೊಬೈಲ್​ ಲೋನ್​ ಆ್ಯಪ್​ನಲ್ಲಿ ಎರಡೆರೆಡು ಕಡೆ ಅರ್ಜಿ ಹಾಕಿದ್ರೆ ಸಿಗಬೇಕಿದ್ದ ಸಾಲವು ಸಿಗೋದಿಲ್ಲ
CIBIL Score: ಡಿಜಿಟಲ್​ ಯುಗದಲ್ಲಿ ಕ್ರೆಡಿಟ್​, ಡೆಬಿಟ್​ ಕಾರ್ಡ್​​ ಬಳಸುವವರ ಸಂಖ್ಯೆಗೇನು ಕಡಿಮೆಯಿಲ್ಲ. 100ಕ್ಕೆ 70 ಜನರು ಇಂದು ಕ್ರೆಡಿಟ್​ ಕಾರ್ಡ್​ನಂತಹ ಸೇವೆಗಳನ್ನು ಚೆನ್ನಾಗಿಯೇ ಉಪಯೋಗಿಸುತ್ತಿದ್ದಾರೆ. ಹೋಟೆಲ್​ ಬಿಲ್​, ಶಾಪಿಂಗ್​, ಮದುವೆ ಹೀಗೆ ಹಲವು ವಸ್ತುಗಳ ಖರೀದಿಗೆ ಇದು ಬಳಕೆಯಾಗುತ್ತಿದೆ. ಇದೇ ರೀತಿ, ತಮ್ಮ ಕಷ್ಟಗಳಿಗೆ ಅಥವಾ ದುಂದು ವೆಚ್ಚ ಮಾಡಲು ಕೈಬೆರಳಿನಲ್ಲಿ ಸಿಗುವ ಮೊಬೈಲ್​ ಲೋನ್​ ಆ್ಯಪ್​ಗಳಲ್ಲಿ ಸಾಲಕ್ಕೆ ಅರ್ಜಿ ಹಾಕುವ ಮಂದಿ, ತಮ್ಮ ಕ್ರೆಡಿಟ್​ ಲಿಮಿಟ್​ ಹೆಚ್ಚಿದ್ದರೂ, ಕೆಲವು ಸಣ್ಣ ಮಿಸ್ಟೇಕ್​ಗಳಿಂದ ಅದನ್ನೂ ಕೆಲವೇ ಕ್ಷಣಗಳಲ್ಲಿ ಸುಲಭವಾಗಿ ಕಳೆದುಕೊಳ್ಳುತ್ತಾರೆ. 

ಎಲ್ಲದಕ್ಕೂ ಸಾಲದ ಮೊರೆ

ಇತ್ತೀಚಿನ ದಿನಗಳಲ್ಲಿ ಎಲ್ಲರ ಕಣ್ಣು ಮೊದಲು ನೋಡುವುದೇ ಒಂದೊಳ್ಳೆ ಸ್ಮಾರ್ಟ್​ಫೋನ್ ಎಂಬ ನಂಬಿಕೆಯಲ್ಲಿ ದುಬಾರಿ ಫೋನ್​ಗಳನ್ನು ಖರೀದಿಸಲು ಸಾಲದ ಮೊರೆ ಹೋಗುವ ಜನರು, 700ಕ್ಕೂ ಹೆಚ್ಚಿರುವ ತಮ್ಮ ಕ್ರೆಡಿಟ್​/ ಸಿಬಿಲ್​ ಸ್ಕೋರ್​ ಮುಂದಿಟ್ಟು ಸಾಲಕ್ಕೆ ಕೈಹಾಕುತ್ತಾರೆ. ಆದರೆ, ಬಹುತೇಕರ ಸಿಬಿಲ್​ ಅಂಕಿ ಕುಸಿದಿರುವ ಕಾರಣಕ್ಕೆ ಕೆಲವೆಡೆ ಸಾಲ ಲಭ್ಯವಾಗುವುದಿಲ್ಲ. ಇದು ಹೇಗೆ ಸಾಧ್ಯ? ನಾನೆಲ್ಲೂ ಕ್ರೆಡಿಟ್ ಅಂಕಿ ಪರಿಶೀಲಿಸಿಲ್ಲ. ಆದರೂ ಹೇಗೆ ಕಡಿಮೆಯಾಯಿತು ಎಂಬ ಪ್ರಶ್ನೆ ತೀರ ಗೊಂದಲ ಸೃಷ್ಟಿಸುತ್ತೆ. ಇದು ಯಾರೋ ಒಬ್ಬರ ಪ್ರಶ್ನೆಯಲ್ಲ, ಹಲವರದ್ದಾಗಿದೆ.

ಪದೇ ಪದೇ ಚೆಕ್​! 

ಕುತೂಹಲಕ್ಕೋ ಅಥವಾ ಸಾಲ ಪಡೆಯಲು ನಾನು ಅರ್ಹನೇ ಎಂದು ತಿಳಿಯಲು ಬಹುತೇಕರು ಪದೇ ಪದೇ ಇತರೆ ವೆಬ್​ಸೈಟ್​ ಸೇರಿದಂತೆ ಲಿಂಕ್​ಗಳಲ್ಲಿ ತಮ್ಮ ಕ್ರೆಡಿಟ್​ ಸ್ಕೋರ್​ ಚೆಕ್ ಮಾಡುತ್ತಿರುತ್ತಾರೆ. ಇದೇ  ಕುಸಿಯಲು ಕಾರಣ ಎಂದು ಹಲವರು ಅಭಿಪ್ರಾಯಿಸುತ್ತಾರೆ. ಈ ಕುರಿತು ಕೆಲವರು ಇದೆಲ್ಲ ಸುಳ್ಳು, ಆ ರೀತಿ ಏನಿಲ್ಲ ಎಂದರೆ, ಇನ್ನೂ ಕೆಲವರು ಹೌದು. ಆಗಾಗ್ಗೆ ಚೆಕ್ ಮಾಡುವುದರಿಂದ ಅಂಕಿಗಳು ಕುಸಿಯುತ್ತೆ ಎನ್ನುತ್ತಾರೆ. ಅಸಲಿಗೆ ಇದರಲ್ಲಿ ಯಾವುದು ನಿಜ? ಎಂಬುದರ ವಿವರ ಹೀಗಿದೆ ನೋಡಿ.

ಇದು ಸುಳ್ಳು

ವಾಸ್ತವವಾಗಿ, ಇದು ಸತ್ಯವಲ್ಲ. ಪದೇ ಪದೇ ಚೆಕ್ ಮಾಡುವುದರಿಂದ ಅಂಕಿ ಇಳಿಯುವುದಿಲ್ಲ. ಬದಲಿಗೆ ನಿಮ್ಮ ಕ್ರೆಡಿಟ್ ಸ್ಕೋರ್ ಕುಸಿಯಲು ಕೆಲವು ವಿಷಯಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ನಿಮಗೆ ತಿಳಿದಿದ್ದರೆ, ಯಾವುದೇ ಸಮಸ್ಯೆ ಇರುವುದಿಲ್ಲ. ಸಾಲದ ಸಲುವಾಗಿ ನಿಮ್ಮ ಹತ್ತಿರದ ಬ್ಯಾಂಕ್​ಗಳಲ್ಲಿ ವಿಚಾರಣೆ ನಡೆಸಿದಾಗ, ಅವರೇನಾದರೂ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿದ್ದರೆ ಅದು ನಿಮ್ಮ ಸ್ಕೋರ್​ ಮೇಲೆ ಪರಿಣಾಮ ಬೀರುತ್ತದೆ. ಇದು ಒಂದಕ್ಕಿಂತ ಹೆಚ್ಚು ಬಾರಿಯಾದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕುಸಿಯುವ ಸಾಧ್ಯತೆ ಹೆಚ್ಚಿರುತ್ತದೆ. ಇದು ತಾತ್ಕಾಲಿಕ ಎಂಬುದು ನಿಮಗೆ ನೆನಪಿರಲಿ. 

ಒಂದೇ ಸಮಯದಲ್ಲಿ ಎರಡೆರೆಡು ಕಡೆ ಲೋನ್​!

ಮುಖ್ಯವಾಗಿ, ಮೊಬೈಲ್​ ಲೋನ್​ ಆ್ಯಪ್​ಗಳಲ್ಲಿ ಸಾಲಕ್ಕೆ ಅರ್ಜಿ ಹಾಕುವವರ ಸಂಖ್ಯೆ ದಿನದಿಂದ ದಿನಕ್ಕೆ ವೇಗವಾಗಿ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣವೇ, ಕುಳಿತ ಜಾಗದಿಂದ ಯಾವುದೇ ಬ್ಯಾಂಕ್​ಗೆ ಅಲೆದಾಡದೆ, ಕೇವಲ ಅವರು ಕೇಳುವ ಸಿಂಪಲ್​ ಪ್ರಕ್ರಿಯೆಗಳನ್ನು ಪೂರೈಸಿದರೆ ಸಾಕು, ಕೆಲವೇ ಕೆಲವು ನಿಮಿಷಗಳಲ್ಲಿ ನೀವು ಕೇಳಿದಷ್ಟು ಹಣ ಕೊಡಲು ಸಾಧ್ಯವಾಗದಿದ್ದರೂ ನಿಮ್ಮ ಸಿಬಿಲ್ ಅಂಕಿಯ ಆಧಾರದ ಮೇಲೆ ಕನಿಷ್ಠ ಸಾಲವನ್ನಾದರೂ ಕೊಡುತ್ತಾರೆ. ಆದ್ರೆ, ಇಲ್ಲಿ ಹಣ ಪಡೆದವರು, ಸರಿಯಾದ ಸಮಯಕ್ಕೆ ಕಟ್ಟದೆ, ಒಂದೇ ಒಂದು ಕಂತು ಮಿಸ್​ ಮಾಡಿದ್ರೆ ಮುಗಿತು ಸಿಬಿಲ್​ ಅಂಕಿ ದಿಢೀರ್ ಡ್ರಾಪ್​. ಜತೆಗೆ ಮುಂದೆ ಲೋನ್​ ಕೊಡಲು ಹಿಂದೇಟು ಹಾಕುತ್ತಾರೆ. ಇದೆಲ್ಲದಕ್ಕಿಂತ ಇನ್ನೊಂದು ವಿಚಾರ ನಿಮಗೆ ಗೊತ್ತಿರಲಿ.
ಒಂದು ಆ್ಯಪ್​ನಲ್ಲಿ ಪರ್ಸನಲ್​ ಲೋನ್​ ಅಪ್ಲೈ ಮಾಡಿ, ಅದಾಗಲೇ ಸಾಲು ಪಡೆದುಕೊಂಡಿದ್ದಲ್ಲದೇ, ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ಲೋನ್ ಆ್ಯಪ್​ನಲ್ಲಿ ಸಾಲದ ಮೊರೆ ಹೋದರೆ ಅಲ್ಲಿಗೆ ನಿಮ್ಮ ಹಣದ ದಾಹ ಅಥವಾ ದುಡ್ಡಿನ ಹಸಿವನ್ನು (Credit Hunger) ಆಯಾ ಲೋನ್​ ಆ್ಯಪ್​ ಸಂಸ್ಥೆಯವರು ಸೂಕ್ಷ್ಮವಾಗಿ ಕೆಲವೇ ನಿಮಿಷಗಳಲ್ಲಿ ಕ್ಯಾಚ್​ ಮಾಡುತ್ತಾರೆ. ಇದರ ಆಧಾರದ ಮೇಲೆ, ನಿಮಗೆ ಅಂದರೆ ನಿಮ್ಮ ಕ್ರೆಡಿಟ್ ಸ್ಕೋರ್​ನಲ್ಲಿ 40 ಸಾವಿರ ರೂ.ಗೆ ಅರ್ಹರಿದ್ದರೂ, ಅದರ ಬದಲಿಗೆ ಕಡಿಮೆ ಮೊತ್ತಕ್ಕೆ ಕೊಡುತ್ತಾರೆ. 
ಇಲ್ಲವೇ, ಮುಂದಿನ ಬಾರಿ ಪ್ರಯತ್ನಿಸಿ ಎಂದು ಹೇಳಿ ತಾತ್ಕಾಲಿಕವಾಗಿ ನಿಮಗೆ ಬಾಗಿಲು ಮುಚ್ಚುತ್ತವೆ. ಇದರಿಂದ ನಿಮ್ಮ ಸಿಬಿಲ್​ ಡ್ರಾಪ್​ ಜತೆ ಸಿಗಬೇಕಿದ್ದ ಹಣವು ರಿಜೆಕ್ಟ್​ ಆಗುವುದರಿಂದ ಸಿಗೋದಿಲ್ಲ. ಹೀಗಾಗಿ, ಒಂದು ಆ್ಯಪ್​ನಲ್ಲಿ ಅದಾಗಲೇ ತೆಗೆದುಕೊಂಡಿರುವ ಸಾಲದ ಕಂತುಗಳನ್ನು ಕಟ್ಟಿ, ಮುಗಿಯುವ ಹಂತದಲ್ಲಿ ಅಥವಾ ಪೂರ್ಣಗೊಂಡ ಬಳಿಕ ಮತ್ತೊಂದು ಅಥವಾ ಹೆಚ್ಚಿನ ಮೊತ್ತಕ್ಕೆ ಕೈಹಾಕುವುದು ಸೂಕ್ತ,(ಏಜೆನ್ಸೀಸ್). ​    
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net