ಸಾಲದ ಮಾರುಕಟ್ಟೆಯಲ್ಲಿ ಹೊಸ ಬೆಳವಣಿಗೆ: 'ಟ್ರಿಲಿಯನ್ ಲೋನ್ಸ್' ಇನ್ಮುಂದೆ 'ಭಾರತ್‌ಪೇ ಕ್ಯಾಪಿಟಲ್'..BharatPe Loan

BharatPe Loan
BharatPe Loan
Published on
ಬೆಂಗಳೂರು: ದೇಶದ ಪ್ರಮುಖ ಫಿನ್‌ಟೆಕ್ ಸಂಸ್ಥೆ ಭಾರತ್‌ಪೇ ತನ್ನ ಡಿಜಿಟಲ್ ಸಾಲ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಆರ್‌ಬಿಐ ಮಾನ್ಯತೆ ಪಡೆದ ತನ್ನ ಎನ್‌ಬಿಎಫ್‌ಸಿ ಸಂಸ್ಥೆಯಾದ 'ಟ್ರಿಲಿಯನ್ ಲೋನ್ಸ್' ಹೆಸರನ್ನು ಇದೀಗ 'ಭಾರತ್‌ಪೇ ಕ್ಯಾಪಿಟಲ್' ಎಂದು ಅಧಿಕೃತವಾಗಿ ಮರುನಾಮಕರಣ ಮಾಡಿದೆ.
ವ್ಯಾಪಾರಿಗಳು, ಎಂಎಸ್‌ಎಂಇ, ಉದ್ಯಮಗಳು ಹಾಗೂ ಸಾಮಾನ್ಯ ಗ್ರಾಹಕರಿಗೆ ಅತ್ಯಂತ ವೇಗವಾಗಿ, ಸ್ಮಾರ್ಟ್ ಆಗಿ ಮತ್ತು ಸುಲಭವಾಗಿ ಸಾಲ ಸೌಲಭ್ಯ ಒದಗಿಸುವ ಭಾರತ್‌ಪೇನ ದೀರ್ಘಕಾಲೀನ ಕಾರ್ಯತಂತ್ರದ ಪ್ರಮುಖ ಹೆಜ್ಜೆ ಇದಾಗಿದೆ.

ವರ್ಷಕ್ಕೆ 3,500 ಕೋಟಿ ರೂ. ಸಾಲ ವಿತರಣೆ

ಭಾರತದ ಆರ್ಥಿಕ ವಲಯದಲ್ಲಿ ಭಾರತ್‌ಪೇ ವಿಶಿಷ್ಟ ಸ್ಥಾನ ಹೊಂದಿದ್ದು, ಆರ್‌ಬಿಐನ ಎನ್‌ಬಿಎಫ್‌ಸಿ ಲೈಸೆನ್ಸ್, 'ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್'ನಲ್ಲಿ ಪಾಲುದಾರಿಕೆ ಹಾಗೂ ಆನ್‌ಲೈನ್ ಪೇಮೆಂಟ್ ಅಗ್ರಿಗೇಟರ್ ಲೈಸೆನ್ಸ್ ಹೊಂದಿರುವ ದೇಶದ ಏಕೈಕ ಫಿನ್‌ಟೆಕ್ ಸಂಸ್ಥೆಯಗಿದೆ.
'ಭಾರತ್‌ಪೇ ಕ್ಯಾಪಿಟಲ್' ಪ್ರಸ್ತುತ 1,750 ಕೋಟಿ ರೂ.ಗೂ ಅಧಿಕ ಸಾಲ ನೀಡಿದ್ದು, ಪ್ರತಿ ವರ್ಷ ಸುಮಾರು 3,500 ಕೋಟಿ ರೂ. ಸಾಲ ವಿತರಣೆ ಮಾಡುತ್ತಿದೆ. ಸಾಲ ವಿತರಣೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ. 30ರಷ್ಟು ಅದ್ಭುತ ಬೆಳವಣಿಗೆ ಸಾಧಿಸುತ್ತಿದೆ.
ಅಷ್ಟೇ ಅಲ್ಲ, ಪ್ರತೀ ವರ್ಷ ಹೊಸದಾಗಿ 5 ಲಕ್ಷ ಗ್ರಾಹಕರು ಈ ಸಂಸ್ಥೆಯಿಂದ ಸಾಲ ಪಡೆಯುತ್ತಿದ್ದು, ದೇಶದ 400ಕ್ಕೂ ಹೆಚ್ಚು ನಗರಗಳಲ್ಲಿರುವ 1 ಕೋಟಿಗೂ ಅಧಿಕ ವ್ಯಾಪಾರಿಗಳ ಬೃಹತ್ ಜಾಲವನ್ನು ಭಾರತ್‌ಪೇ ಹೊಂದಿದೆ.
  • ಯಾವೆಲ್ಲಾ ಸಾಲ ಸೌಲಭ್ಯಗಳು ಲಭ್ಯ?
  • ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಈ ಕೆಳಗಿನ ಸಾಲಗಳನ್ನು ಸಂಸ್ಥೆ ಒದಗಿಸುತ್ತಿದೆ:
  • ಮರ್ಚೆಂಟ್ ಲೋನ್ಸ್ (ವ್ಯಾಪಾರಿಗಳ ಸಾಲ) : ದೈನಂದಿನ ಯುಪಿಐ ವಹಿವಾಟುಗಳ ಆಧಾರದ ಮೇಲೆ ವ್ಯಾಪಾರಿಗಳಿಗೆ ಹಣಕಾಸಿನ ನೆರವು ನೀಡುತ್ತದೆ.
  • ಎಂಎಸ್‌ಎಂಇ & ಬ್ಯುಸಿನೆಸ್ ಲೋನ್ಸ್ : ವ್ಯಾಪಾರದ ಬಂಡವಾಳಕ್ಕಾಗಿ ಸುಲಭವಾದ, ಯಾವುದೇ ಭದ್ರತೆ ಇಲ್ಲದ ಟರ್ಮ್ ಲೋನ್‌ಗಳನ್ನು ಸಂಸ್ಥೆ ನೀಡುತ್ತಿದೆ.
  • ಸಪ್ಲೈ ಚೈನ್ ಫೈನಾನ್ಸ್ : ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಿಗಳ ವರ್ಕಿಂಗ್ ಕ್ಯಾಪಿಟಲ್ (ದುಡಿಯುವ ಬಂಡವಾಳ) ಪರಿಹಾರಗಳನ್ನೂ ಭಾರತ್‌ಪೇ ಕ್ಯಾಪಿಟಲ್‌ ಒದಗಿಸುತ್ತಿದೆ.
  • ಗ್ರಾಹಕ ಸಾಲ : ವೇಗವಾಗಿ ಮತ್ತು ಸುಲಭವಾಗಿ ಸಿಗುವ ಡಿಜಿಟಲ್ ಪರ್ಸನಲ್ ಲೋನ್.
  • ಎಂಬೆಡೆಡ್ ಫೈನಾನ್ಸ್ : ಗ್ರಾಹಕರು ವಸ್ತುಗಳನ್ನು ಖರೀದಿಸುವಾಗಲೇ ಸುಲಭವಾಗಿ ಸಾಲ ಪಡೆಯುವ ವ್ಯವಸ್ಥೆಯನ್ನೂ ಸಂಸ್ಥೆ ಹೊಂದಿದೆ.

ಎಐ ತಂತ್ರಜ್ಞಾನ ಬಳಕೆ

ಸಾಂಪ್ರದಾಯಿಕ ಸಿಬಿಲ್ ಸ್ಕೋರ್‌ಗಳಿಗಿಂತ ಭಿನ್ನವಾಗಿ, 'ಭಾರತ್‌ಪೇ ಕ್ಯಾಪಿಟಲ್' ಕೃತಕ ಬುದ್ಧಿಮತ್ತೆ, ಸುಧಾರಿತ ಅನಾಲಿಟಿಕ್ಸ್ ಮತ್ತು ವಹಿವಾಟಿನ ಡೇಟಾವನ್ನು ಬಳಸಿಕೊಂಡು ಗ್ರಾಹಕರ ಸಾಲ ಮರುಪಾವತಿ ಸಾಮರ್ಥ್ಯವನ್ನು ಅಳೆಯುತ್ತದೆ. ಇದರಿಂದಾಗಿ ಹೆಚ್ಚಿನ ಸಾಲದ ಇತಿಹಾಸ ಇಲ್ಲದವರಿಗೂ ಸುಲಭವಾಗಿ ಸಾಲ ನೀಡಲು ಸಾಧ್ಯವಾಗುತ್ತಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net