ಬೆಂಗಳೂರು: ಇಂದಿನ ವೇಗದ ಜೀವನಶೈಲಿ, ಏರುತ್ತಿರುವ ಹಣದುಬ್ಬರ ಮತ್ತು ಅನಿರೀಕ್ಷಿತ ಖರ್ಚುಗಳ(Financial Tips) ನಡುವೆ ಸಾಮಾನ್ಯ ಜನರ ಬದುಕು ಹೈರಾಣಾಗಿದೆ. ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗಿ, ಮುಂದಿನ ದಿನಗಳನ್ನು ತಳ್ಳುವುದು ಹೇಗೆ ಎಂಬ ಆತಂಕ ಅನೇಕರನ್ನು ಕಾಡುತ್ತಿದೆ. ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳು ಅಥವಾ ಸಾಲದ ಸುಳಿ ಮನುಷ್ಯನನ್ನು ಮಾನಸಿಕ ಒತ್ತಡಕ್ಕೆ ದೂಡುವುದು ಸಹಜ.