ಜುಲೈನಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ಗಳಿಗೆ ವಿಶೇಷವಾಗಿ ಯಾವುದೇ ರಜಾ ದಿನಗಳಿಲ್ಲ
ಬ್ಯಾಂಕ್ ರಜೆ ಘೋಷಣೆಯಾಗಿದ್ದರೂ ನೆಟ್ ಬ್ಯಾಂಕಿಂಗ್ ಮೂಲಕ ಕಾರ್ಯಾಚರಣೆ ಲಭ್ಯ
ಪ್ರಾದೇಶಿಕ ಹಬ್ಬದ ಕಾರಣ ಕೆಲವು ರಾಜ್ಯದಲ್ಲಿರುವ ಬ್ಯಾಂಕ್ಗೆ ರಜೆ ಘೋಷಣೆ
Holidays:
2026 ಜುಲೈ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸಾಮಾನ್ಯವಾಗಿ ಜನರಿಗೆ ನಿತ್ಯವು ಬ್ಯಾಂಕ್ನಲ್ಲಿ ಏನಾದರೂ ಕೆಲಸ ಇದ್ದೇ ಇರುತ್ತದೆ. ಅದರಂತೆ ಜುಲೈನಲ್ಲಿ ಯಾವುದೇ ಹಬ್ಬವಿಲ್ಲ. ಆದರೆ, ಬ್ಯಾಂಕ್ಗೆ ಸರ್ಕಾರಿ ರಜೆ ಇರೋಲ್ಲ ಅಂತೇನಿಲ್ಲ. 2026ರ ಜುಲೈನಲ್ಲಿ ಬ್ಯಾಂಕ್ಗೆ ಒಟ್ಟು 13 ರಜಾದಿನಗಳಿದೆ.
2026 ಜುಲೈನಲ್ಲಿ ಕರ್ನಾಟಕದ ಬ್ಯಾಂಕ್ ರಜಾ ದಿನ
ಕರ್ನಾಟಕದಲ್ಲಿ ಯಾವುದೇ ಹಬ್ಬಗಳಿಲ್ಲ. ಜೊತೆಗೆ ಸಾಂಸ್ಕೃತಿಕ ಆಚರಣೆಗಳೂ ಇಲ್ಲ. ಆದರೂ ಈ ತಿಂಗಳಲ್ಲಿ ಒಟ್ಟು ಆರು ದಿನ ಬ್ಯಾಂಕ್ ಕಾರ್ಯಾಚರಣೆ ಇರೋದಿಲ್ಲ. ಅವು ಶನಿವಾರ ಮತ್ತು ಭಾನುವಾರದ ರೆಗ್ಯೂಲರ್ ರಜಾದಿನವಾಗಿದೆ ಎನ್ನಲಾಗಿದೆ.
ಜುಲೈ 5: ಭಾನುವಾರದ ರಜೆ
ಜುಲೈ 11: ಎರಡನೇ ಶನಿವಾರದ ರಜೆ
ಜುಲೈ 12: ಭಾನುವಾರದ ರಜೆ
ಜುಲೈ 19: ಭಾನುವಾರದ ರಜೆ
ಜುಲೈ 25: ನಾಲ್ಕನೇ ಶನಿವಾರದ ರಜೆ
ಜುಲೈ 26: ಭಾನುವಾರದ ರಜೆ
ದೇಶಾದ್ಯಂತ ಬ್ಯಾಂಕ್ಗಳಿಗೆ ಯಾವ್ಯಾವ ದಿನ ರಜೆ ಇದೆ?
ಜುಲೈ 5 ಭಾನುವಾರದ ರಜೆ
ಜುಲೈ 6 ಬ್ಯಾಂಕ್ ರಜೆ(ಮಿಜೋ ಹ್ಮೆಚೆ ಇನ್ಸುಯಿಖಾಮ್ ಪೌಲ್ ದಿನವಾದ ಕಾರಣ ಮಿಜೋರಾಂನಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.)
ಜುಲೈ 9 (ಬೆಹ್ ದೀಂಕ್ಲಾಮ್ ಹಿನ್ನೆಲೆ ಮೇಘಾಲಯದಲ್ಲಿ ಬ್ಯಾಂಕ್ ರಜೆ ಇದರಲಿದೆ. ಮೇಘಾಲಯದಲ್ಲಿ ಬುಡಕಟ್ಟು ಜನಾಂಗದವರು ಆಚರಿಸುವ ಅತ್ಯಂತ ಪ್ರಮುಖ ವಾರ್ಷಿಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬವಾಗಿದೆ)
ಜುಲೈ 11 ಎರಡನೇ ಶನಿವಾರ ಹಿನ್ನೆಲೆ ರಜೆ
ಜುಲೈ 12: ಭಾನುವಾರದ ರಜೆ
ಜುಲೈ 16(ರಥ ಯಾತ್ರೆ ಹರೇಲಾ ಹಬ್ಬಗಳಿರುವ ಹಿನ್ನೆಲೆ ಒಡಿಶಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಬ್ಯಾಂಕ್ ರಜೆ ಇರಲಿದೆ.)
ಜುಲೈ 17 (ತಿರೋಟ್ ಸಿಂಗ್ ಅವರ ಪುಣ್ಯತಿಥಿಯ ಸ್ಮರಣಾರ್ಥ ಮೇಘಾಲಯದಲ್ಲಿ ಬ್ಯಾಂಕ್ ರಜೆ ಇರಲಿದೆ.)
ಜುಲೈ 18 (ಭಾರತದ ಸಾರನಾಥದಲ್ಲಿರುವ ಜಿಂಕೆ ಉದ್ಯಾನವನದಲ್ಲಿ ಭಗವಾನ್ ಬುದ್ಧ ತನ್ನ ಐದು ಶಿಷ್ಯರಿಗೆ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ದಿನದ ಸ್ಮರಣಾರ್ಥ ಆಚರಿಸಲಾಗುವ ಶುಭ ಬೌದ್ಧ ಹಬ್ಬ ಹಿನ್ನೆಲೆ ರಜೆ)
ಜುಲೈ 19 ಭಾನುವಾರ ರಜೆ
ಜುಲೈ 22 (ಖಾರ್ಚಿ ಪೂಜಾ ಹಬ್ಬಕ್ಕಾಗಿ ತ್ರಿಪುರದಲ್ಲಿ ಬ್ಯಾಂಕ್ ಗಳಿಗೆ ರಜೆ ಇರಲಿದೆ).
ಜುಲೈ 25 ನಾಲ್ಕನೇ ಶನಿವಾರ ಹಿನ್ನೆಲೆ ರಜೆ
ಜುಲೈ 26 ಭಾನುವಾರದ ಹಿನ್ನೆಲೆ ರಜೆ
ಇತ್ತೀಚೆಗೆ ಬ್ಯಾಂಕ್ ಚಟುವಟಿಕೆಯನ್ನು ಆನ್ಲೈನ್ ಮೂಲಕವೂ ನಡೆಸುವುದರಿಂದ ಅಷ್ಟಾಗಿ ಖಾತೆದಾರರ ಮೇಲೆ ಪರಿಣಾಮ ಬೀರೋದಿಲ್ಲ. ನಗದು ಬೇಕೆಂದರೆ ಹತ್ತಿರದಲ್ಲಿನ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ. ಅಥವಾ ಯುಪಿಐ ಪಾವತಿ ಮೂಲಕ ಹಣ ವಹಿವಾಟು ನಡೆಸಬಹುದಾಗಿದೆ. ಖುದ್ದಾಗಿ ಬ್ಯಾಂಕ್ಗೆ ತೆರಳಿ ನಿಮ್ಮ ಕೆಲಸ ಮುಗಿಸಿಕೊಳ್ಳುವ ಅನಿವಾರ್ಯತೆ ಇದ್ದರೆ, ಬ್ಯಾಂಕ್ ರಜೆಯ ಹಿಂದಿನ ದಿನ ನಿಮ್ಮ ಕೆಲಸವನ್ನು ಮುಗಿಸಿಕೊಳ್ಳಲು ಸಮಯ ಸೆಟ್ ಮಾಡಿಕೊಳ್ಳಿ.