ಬಜಾಜ್ ಕಂಪನಿಯ ಬಿಎಸ್6 ಬೈಕ್ ಮಾರುಕಟ್ಟೆಗೆ

Bazaz 29 Jan 20
Published on

ಬೆಂಗಳೂರು: ಬಜಾಜ್ ಆಟೋ ಕಂಪನಿಯು ಬಿಎಸ್6 ಬೈಕ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಸಿಟಿ ಮತ್ತು ಪ್ಲಾಟಿನಾ ಬೈಕ್ ಎಲೆಕ್ಟ್ರಾನಿಕ್ ಇಂಜೆಕ್ಷನ್(ಇಐ) ವ್ಯವಸ್ಥೆ ಹೊಂದಿದೆ. ಪ್ರಮುಖ ಘಟಕ ಪಾಲುದಾರರೊಂದಿಗೆ ಅತ್ಯಾಧುನಿಕ ಆರ್ ಆಂಡ್ ಡಿ ಕೇಂದ್ರವು ಇಐ ವ್ಯವಸ್ಥೆ ವಿನ್ಯಾಸಗೊಳಿಸಿದ್ದು, ಇದು ಉತ್ತಮ ಮೈಲೇಜ್ ಕಾಪಾಡಿಕೊಳ್ಳಲು ಹಾಗೂ ಸುಗಮವಾಗಿ ಇಂಜಿನ್ ಚಲಿಸಲು ಸಹಾಯ ಮಾಡುತ್ತದೆ. ಇಐ ವ್ಯವಸ್ಥೆಯನ್ನು ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ರೂಪಿಸಿದ್ದು, ನಿರ್ವಹಣೆ ಸುಲಭ ಎಂದು ಕಂಪನಿ ತಿಳಿಸಿದೆ.

ಸಿಟಿ ಬೈಕ್: ಸಿಟಿ ಬಿಎಸ್ 6 ಶ್ರೇಣಿಯ 100 ಸಿಸಿ ಮತ್ತು 110 ಸಿಸಿ ಎಂಬ ಎರಡು ಇಂಜಿನ್ ಆಯ್ಕೆ ಇದೆ. ಸಿಟಿ110 ಎಲ್​ಇಡಿ ಡಿಆರ್​ಎಲ್ ಹೊಂದಿದೆ. ಹೊಸ ‘ಕಡಕ್’ ಬ್ಯಾಷ್ ಪ್ಲೇಟ್ ಒರಟು ಭೂ ಪ್ರದೇಶಗಳಲ್ಲಿ ಇಂಜಿನ್ ರಕ್ಷಿಸುತ್ತದೆ. ಸಿಟಿ ಶ್ರೇಣಿಯ ಬೈಕ್ ಬೆಲೆ ದೆಹಲಿಯ ಎಕ್ಸ್ ಶೋರೂಂನಲ್ಲಿ 40,794 ರೂ.ನಿಂದ ಪ್ರಾರಂಭವಾಗಲಿದೆ. ಈವರೆಗೆ ಪರಿಚಯಿಸಲಾದ ದೇಶದ ಅತ್ಯಂತ ಗುಣಮಟ್ಟದ ಬಿಎಸ್6 ಶ್ರೇಣಿಯ ಬೈಕ್ ಇದಾಗಿದೆ.

ಪ್ಲಾಟಿನಾ ಬೈಕ್: ಪ್ಲಾಟಿನಾ ಶ್ರೇಣಿಯಲ್ಲಿ 100 ಸಿಸಿ ಮತ್ತು 110 ಸಿಸಿ ಎಚ್ ಗೇರ್ ಎಂಬ ಎರಡು ವಿಧದ ಬೈಕ್​ಗಳಿವೆ. ಪ್ಲಾಟಿನಾ ಶ್ರೇಣಿಯ ಬೈಕ್​ನ ಬೆಲೆ 47,264 ರೂ., ಪ್ಲಾಟಿನಾ 100 ಎಲೆಕ್ಟ್ರಿಕ್ ಸ್ಟಾರ್ಟ್​ನ ಬಿಎಸ್6ನ ಬೆಲೆ 54,797 ಇದೆ.ಮುಂದಿನ ದಿನಗಳಲ್ಲಿ ಬಿಎಸ್ 6 ಬೈಕ್​ಗಳು ಇತರ ಮಾದರಿಗಳಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ಅಧ್ಯಕ್ಷ ಸರಂಗ್ ಕನಡೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net