ಬೆಂಗಳೂರು: ಬಜಾಜ್ ಚೇತಕ್ ಎಂದರೆ ಸಾಕು ಹಲವರ ಕಿವಿ ನೆಟ್ಟಗಾಗುವುದು ಗ್ಯಾರೆಂಟಿ. ಅಷ್ಟು ಜನಪ್ರಿಯವಾಗಿತ್ತು ಈ ಸ್ಕೂಟರ್ ಆ ಕಾಲದಲ್ಲಿ! ಕಾಲಕ್ಕೆ ತಕ್ಕಂತೆ ಬದಲಾಗಿರುವ ಬಜಾಜ್ ಚೇತಕ್ ಈಗ ಹೊಚ್ಚ ಹೊಸ ಅವತಾರದಲ್ಲಿ ಗಮನಸೆಳೆಯುತ್ತಿದೆ.
ಜಗತ್ತು ವಿದ್ಯುತ್ಚಾಲಿತ ವಾಹನಗಳ ಕಡೆಗೆ ಹೊರಳುತ್ತಿರುವಂತೆಯೇ ಎಲ್ಲ ವಾಹನ ಉತ್ಪಾದಕರೂ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಇದೇ ರೀತಿ ಒಂದು ಕಾಲದ ಜನಪ್ರಿಯ ಸ್ಕೂಟರ್ಗೂ ಹೊಸತನದ ಸ್ಪರ್ಶ ಸಿಕ್ಕಿದೆ. ಹೊಸ ಅವತಾರದಲ್ಲಿ ಚೇತಕ್ ಕಾಣಿಸಿಕೊಂಡಿದೆ. ಇವಿ ಸ್ಕೂಟರ್ ಆಗಿರುವ ಚೇತಕ್, ಭಾರತೀಯ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸುವ ನಿರೀಕ್ಷೆಯಲ್ಲಿದೆ. ಉಳಿದವುಗಳಿಗೆ ಇದು ಮಾದರಿಯಾಗಬಲ್ಲದೇ ಎಂಬ ಕುತೂಹಲವೂ ಇದೆ.
ಹದಿನೈದು ವರ್ಷಗಳ ನಂತರದ ಕಂಬ್ಯಾಕ್ ಇದಾಗಿದ್ದು, ಇವಿ ಸ್ಕೂಟರ್ನ ಮಾರಾಟ ಮೊದಲ ಹಂತದಲ್ಲಿ ಪುಣೆ ಮತ್ತು ಬೆಂಗಳೂರಿನಲ್ಲೇ ಆರಂಭವಾಗಿದೆ. ನಂತರ ಹಂತ ಹಂತವಾಗಿ ದೇಶಾದ್ಯಂತ ಮಾರುಕಟ್ಟೆ ವಿಸ್ತರಿಸುವ ಯೋಚನೆಯಲ್ಲಿದೆ ಕಂಪನಿ.
ಆರು ಬಣ್ಣಗಳಲ್ಲಿ ಲಭ್ಯವಿರುವ ಚೇತಕ್ ಇವಿ ಸ್ಕೂಟರ್ಗಳು ಕೆಟಿಎಂ ಡೀಲರ್ಶಿಪ್ಗಳ ಮೂಲಕ ಗ್ರಾಹಕರಿಗೆ ಸಿಗಲಿದೆ. ದ ಬಜಾಜ್ ಚೇತಕ್ ಇಲೆಕ್ಟ್ರಿಕ್ ಸ್ಕೂಟರ್ ಬಜಾಜ್ ಚೇತಕ್ ಅರ್ಬನ್, ಬಜಾಜ್ ಚೇತಕ್ ಪ್ರೀಮಿಯಂ ಎಂಬ ಎರಡು ಮಾದರಿಯಲ್ಲಿ ಲಭ್ಯವಿದೆ. ಇದರ ವೆಚ್ಚ ಅನುಕ್ರಮವಾಗಿ 1 ಲಕ್ಷ ರೂಪಾಯಿ ಮತ್ತು 1.15 ಲಕ್ಷ ರೂಪಾಯಿ.
4kW motor ಇದರಲ್ಲಿದ್ದು, 15 amp ವಿದ್ಯುತ್ ಔಟ್ಲೆಟ್ ಮೂಲಕ ಇದರ ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ. ಒಮ್ಮೆ ಪೂರ್ಣ ಪ್ರಮಾಣದ ಚಾರ್ಜ್ ಆಗಲು 5 ಗಂಟೆ ಬೇಕಾಗುತ್ತದೆ. ಒಂದು ಗಂಟೆಯಲ್ಲಿ ಅಂದಾಜು 25 % ಚಾರ್ಜ್ ಆಗುತ್ತದೆ. ಬ್ಯಾಟರಿ ಬಾಳ್ವಿಕೆ 70,000 ಕಿ.ಮೀ. ಆಗಿದೆ. ಇಕೋ ಮೋಡ್ನಲ್ಲಿ ಗಾಡಿಯನ್ನು 95 ಕಿ.ಮೀಟರ್ ವೇಗದಲ್ಲೂ, ಸ್ಪೋರ್ಟ್ ಮೋಡ್ನಲ್ಲಿ 85 ಕಿ.ಮೀ. ವೇಗದಲ್ಲೂ ಚಲಾಯಿಸಬಹುದಾಗಿದೆ.
ಬಜಾಜ್ ಈ ಸ್ಕೂಟರ್ಗೆ 3 ವರ್ಷಗಳ ಅಥವಾ 50,000 ಕಿ.ಮೀ. ವಾರೆಂಟಿ ನೀಡುತ್ತಿದೆ. ಹೊಸ ಗಾಡಿಯನ್ನು ವರ್ಷದೊಳಗೆ ಅಥವಾ 12,000 ಕಿ.ಮೀ. ಯಾವುದು ಮೊದಲಾಗುತ್ತದೋ ಆಗ ಸರ್ವೀಸ್ ಮಾಡಿಸಬೇಕು. ಮೂರು ಉಚಿತ ಸರ್ವೀಸ್ ಲಭ್ಯವಿದೆ. ಈ ಸ್ಕೂಟರ್ಗೆ 12 ಇಂಚಿನ ಅಲ್ಲೋಯ್ ಚಕ್ರಗಳಿದ್ದು, ಡಿಸ್ಕ್ ಬ್ರೇಕ್ ಅಳವಡಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ. (ಏಜೆನ್ಸೀಸ್)