ತುಟ್ಟಿಯಾಯ್ತು ಆಟೋ ಗ್ಯಾಸ್, ಎಲ್ಪಿಜಿ

LPG Cooking GAs
Published on

ಬೆಂಗಳೂರು: ವಾಣಿಜ್ಯ ಬಳಕೆಯ 19.2 ಕೆಜಿ ಎಲ್ಪಿಜಿ ಸಿಲಿಂಡರ್ ದರ ಒಂದೇ ದಿನ ಬರೋಬ್ಬರಿ 227 ರೂ. ಏರಿಕೆಯಾಗಿದೆ. ಮತ್ತೊಂದೆಡೆ ಆಟೋ ಗ್ಯಾಸ್ ದರ ಕೂಡ 8 ರೂ. ಹೆಚ್ಚಳವಾಗಿದೆ. ಇದರಿಂದಾಗಿ ಹೋಟೆಲ್ ಉದ್ಯಮದವರು ಹಾಗೂ ಆಟೋ ಚಾಲಕರು ಕಂಗಾಲಾಗಿದ್ದಾರೆ.

ವಾಣಿಜ್ಯ ಬಳಕೆಯ 19.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 1,298 ರೂ. ಇದ್ದುದು ಈಗ 1,525 ರೂ.ಗೆ ಏರಿಕೆಯಾಗಿದೆ. ಶುಕ್ರವಾರ 42.20 ರೂ. ಇದ್ದ ಪ್ರತಿ ಲೀಟರ್ ಆಟೋಗ್ಯಾಸ್ ಬೆಲೆ ಶನಿವಾರ ಮುಂಜಾನೆ 50. 20 ರೂ.ಗೆ ಏರಿದೆ. ಗ್ಯಾಸ್ ಭರ್ತಿ ಮಾಡಿಸಲು ಬಂಕ್​ಗೆ ತೆರಳಿದ ಚಾಲಕರು ಹೊಸ ದರ ಏರಿಕೆ ಸುದ್ದಿ ಕೇಳಿ ಅಸಮಾಧಾನ ವ್ಯಕ್ತಪಡಿಸಿದರು.

ಗೃಹ ಬಳಕೆಗೆ ತಟ್ಟದ ಬಿಸಿ...

14.2 ಕೆಜಿ ಕೆಜಿ ತೂಕದ ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್​ಗಳ ಬೆಲೆಯನ್ನು ಸತತ 5 ತಿಂಗಳು ಏರಿಕೆ ಮಾಡಿದ್ದ ಐಒಸಿ, ಈ ಬಾರಿ ಬೆಲೆ ಏರಿಕೆ ಮಾಡಿಲ್ಲ. ಆದರೆ, ಆಗಸ್ಟ್​ನಿಂದ ಪ್ರತಿ ತಿಂಗಳು ಎಲ್ಪಿಜಿ ಸಿಲಿಂಡರ್ ದರದಲ್ಲಿ ಏರಿಕೆಯಾಗಿತ್ತು. ಈವರೆಗೆ ಒಟ್ಟಾರೆ 140 ರೂ.ಏರಿಕೆಯಾಗಿದೆ. ಸದ್ಯ 14.2 ಕೆಜಿಯ ಎಲ್ಪಿಜಿ ಸಿಲಿಂಡರ್ ದರ 717 ರೂ. ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net