

ಬೆಂಗಳೂರು: ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಎಟಿಎಂಗಳಲ್ಲಿ ನಡೆಸುವ ವಹಿವಾಟಿಗೆ ಜೂ.30ರವರೆಗೆ ಸೇವಾ ಶುಲ್ಕ ವಿಧಿಸದಿರಲು ಎಸ್ಬಿಐ ಮತ್ತು ಇತರ ಕೆಲ ಬ್ಯಾಂಕ್ಗಳು ನಿರ್ಧರಿಸಿವೆ.
ಎಸ್ಬಿಐ ಈ ಹಿಂದೆ ಗ್ರಾಹಕರಿಗೆ ಆರು ಮೆಟ್ರೋ ಕೇಂದ್ರಗಳಲ್ಲಿ (ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್) ಮೂರು ಉಚಿತ ವಹಿವಾಟು ಮತ್ತು ಇತರ ಕೇಂದ್ರಗಳಲ್ಲಿ ಐದು ಉಚಿತ ವಹಿವಾಟುಗಳಿಗೆ ಅನುಮತಿ ನೀಡಿತ್ತು. ಉಳಿದ ಬ್ಯಾಂಕ್ಗಳೂ ತಂತಮ್ಮ ಆಡಳಿತ ಮಂಡಳಿ ನಿರ್ಣಯಕ್ಕೆ ಅನುಗುಣವಾಗಿ ಕೇಂದ್ರದ ನಿರ್ಧಾರವನ್ನು ಪಾಲನೆ ಮಾಡುವ ಸಾಧ್ಯತೆಯಿದೆ. ಮೂರು ತಿಂಗಳವರೆಗೆ ಯಾವುದೇ ಬ್ಯಾಂಕ್ನ ಎಟಿಎಂನಿಂದ ಹಣ ತೆಗೆದರೂ ಗ್ರಾಹಕರಿಗೆ ಶುಲ್ಕ ವಿಧಿಸುವುದಿಲ್ಲ ಎಂದು ಮಾ.24 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೊಷಿಸಿದ್ದರು.