'ಕೆಫೆ ಅಕಾಸಾ' ಮೂಲಕ ರುಚಿಕರವಾದ ಹಾಗೂ ಆರೋಗ್ಯಕರ ಊಟ, ಹಬ್ಬದ ವಿಶೇಷ ಮೆನುಗಳು ಮತ್ತು 'ಕೊಂಬುಚಾ'ದಂತಹ ವಿಶೇಷ ಪಾನೀಯಗಳನ್ನು ಆಕಾಶದಲ್ಲೇ ಸವಿಯುವ ಅವಕಾಶವಿದೆ. ಜೊತೆಗೆ 25ಕ್ಕೂ ಹೆಚ್ಚು ಕಸ್ಟಮೈಸ್ಡ್ ಸೇವೆಗಳನ್ನು ಸಹ ಪ್ರಯಾಣಿಕರು ಪಡೆಯಬಹುದು. ಬೆಂಗಳೂರು, ದೆಹಲಿ, ಅಯೋಧ್ಯೆ ಸೇರಿದಂತೆ ಭಾರತದ 28 ನಗರಗಳು ಹಾಗೂ ದೋಹಾ, ಅಬುಧಾಬಿ ಮುಂತಾದ 7 ಅಂತಾರಾಷ್ಟ್ರೀಯ ತಾಣಗಳಿಗೆ ಸಂಸ್ಥೆಯು ವಿಮಾನ ಕಾರ್ಯಾಚರಣೆಯನ್ನು ನಡೆಸುತ್ತಿದೆ, (ಏಜೆನ್ಸೀಸ್).