ಮುಂಬೈ ಏರ್​ಪೋರ್ಟ್​ನ ಶೇಕಡ 74 ಷೇರು ಅದಾನಿ ಗ್ರೂಪ್ ಪಾಲು?

MIAL
Published on

ನವದೆಹಲಿ: ಮುಂಬೈ ಇಂಟರ್​ನ್ಯಾಷನಲ್ ಏರ್​ಪೋರ್ಟ್​ ನ ಶೇಕಡ 74 ಷೇರುಗಳು ಅದಾನಿ ಗ್ರೂಪ್ ಪಾಲಾಗಿದೆ. ಈ ಸಂಬಂಧ ಜಿವಿಕೆ ಗ್ರೂಪ್​ ಮತ್ತು ಮುಂಬೈ ಇಂಟರ್​ನ್ಯಾಷನಲ್ ಏರ್​ಪೋರ್ಟ್​ ಲಿಮಿಟೆಡ್(ಎಂಐಎಎಲ್​) ಜತೆಗೆ ಈ ಸಂಬಂಧ ಒಪ್ಪಂದ ಏರ್ಪಟ್ಟಿದೆ ಎಂದು ಶತಕೋಟ್ಯಧಿಪತಿ ಗೌತಮ್ ಅದಾನಿಯವರ ಅದಾನಿ ಗ್ರೂಪ್ ಸೋಮವಾರ ತಿಳಿಸಿದೆ.

ಜಿವಿಕೆ ಏರ್​ಪೋರ್ಟ್​ ಡೆವಲಪರ್ಸ್​ನ ಸಾಲವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಸಲುವಾಗಿಯೂ ಅದಾನಿ ಏರ್​ಪೋರ್ಟ್​ ಹೋಲ್ಡಿಂಗ್ಸ್​ ಒಪ್ಪಂದ ಮಾಡಿಕೊಂಡಿದೆ. ಎಂಐಎಎಲ್​ನಲ್ಲಿ ಜಿವಿಕೆ ಗ್ರೂಪ್​ 50.50 ಶೇಕಡ ಈಕ್ವಿಟಿ ಷೇರುಗಳನ್ನು ಹೊಂದಿದೆ. ಈಗ ಸಾಲ ಈಕ್ವಿಟಿಯಾಗಿ ಬದಲಾಗಲಿದೆ ಎಂದು ಅದಾನಿ ಎಂಟರ್​ಪ್ರೈಸಸ್ ರೆಗ್ಯುಲೇಟರಿ ಫೈಲಿಂಗ್​​​ನಲ್ಲಿ ಹೇಳಿದೆ.

ಇದೇ ರೀತಿ, ಏರ್​ಪೋರ್ಟ್ಸ್ ಕಂಪನಿ ಆಫ್ ಸೌತ್ ಆಫ್ರಿಕಾ ಹೊಂದಿರುವ ಶೇಕಡ 23.5 ಈಕ್ವಿಟಿ ಷೇರುಗಳನ್ನೂ ಅದಾನಿ ಗ್ರೂಪ್​ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದು, ಕಾಂಪಿಟೀಶನ್ ಕಮಿನಷ್​ ಆಫ್ ಇಂಡಿಯಾದ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಿದೆ. ಈ ಎರಡೂ ಪಾಲುಗಳು ಸೇರಿದರೆ ಎಂಐಎಎಲ್​ನ ಶೇಕಡ 74 ಪಾಲು ಅದಾನಿ ಗ್ರೂಪ್​ಗೆ ಸೇರಿದಂತಾಗುತ್ತದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net