ನಿಯಮ ಸರಳೀಕರಣ; 10 ವರ್ಷಗಳಲ್ಲಿ ತೆರಿಗೆ ಸಂಗ್ರಹ 3 ಪಟ್ಟು ಹೆಚ್ಚಳ

Tax
Published on

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ವೈಯಕ್ತಿಕ ಆದಾಯ ಮತ್ತು ಕಾರ್ಪೊರೇಟ್​ ತೆರಿಗೆ ಸಂಗ್ರಹ 19 ಲ ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಆರ್ಥಿಕ ಪ್ರಗತಿ, ಜನಸ್ನೇಹಿ ತೆರಿಗೆ ಕ್ರಮಗಳನ್ನು ಕೈಗೊಂಡಿರುವ ಕಾರಣ ಈ ಏರಿಕೆ ಕಂಡುಬಂದಿದೆ ಎಂದು ತಜ್ಞರು ಹೇಳಿದ್ದಾರೆ.

ಆದಾಯ ತೆರಿಗೆ ಮತ್ತು ನಿವ್ವಳ ನೇರ ತೆರಿಗೆ ಸಂಗ್ರಹ 2013&14ರಲ್ಲಿ 6.38 ಲ ಕೋಟಿ ರೂ. ಆಗಿತ್ತು. 2022&23ರಲ್ಲಿ ಇದು 16.61 ಲ ಕೋಟಿ ರೂ. ಗಳಿಗೆ ಏರಿಕೆಯಾಗಿದೆ. ಪ್ರಧಾನಿ ಮೋದಿ ಅವರ ಪ್ರಸಕ್ತ ಅಧಿಕಾರಾವಧಿ ಇನ್ನು ಕೆಲ ತಿಂಗಳು ಬಾಕಿ ಇದೆ. ನಿವ್ವಳ ನೇರ ತೆರಿಗೆಗಳಿಂದ ಸಂಗ್ರಹಣೆ, ವೈಯಕ್ತಿಕ ಆದಾಯ ತೆರಿಗೆ ಮತ್ತು ಕಾರ್ಪೊರೇಟ್​ ತೆರಿಗೆ ಸಂಗ್ರಹ ಇದುವರೆಗೆ ಶೇ. 20 ಈ ವೇಗದಲ್ಲಿ ಬೆಳವಣಿಕೆ ಕಂಡಿದೆ. ಇದೇ ವೇಗ ಮುಂದಿನ 2024ರ ಮಾರ್ಚ್​ 31ರ ವರೆಗೆ ಮುಂದುವರಿದರೆ ಸುಮಾರು 19 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ ಆಗುವ ನಿರೀಕ್ಷೆ ಇದೆ.

2023&24ರ ಬಜೆಟ್​ನಲ್ಲಿ ಅಂದಾಜಿಸಲಾದ 18.23 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹ ಗುರಿಯನ್ನು ಇದು ಮೀರಿಸುತ್ತದೆ. 2023&24ರ ಬಜೆಟ್​ನಲ್ಲಿ ತೆರಿಗೆ ಸ್ಲ್ಯಾಬ್​ಗಳನ್ನು ತರ್ಕಬದ್ಧಗೊಳಿಸಿ, ಮೂಲ ವಿನಾಯಿತಿ ಮಿತಿಯನ್ನು 3 ಲ ರೂ.ಗೆ ಹೆಚ್ಚಿಸಲಾಗಿದೆ. 50,000 ರೂ. ಸ್ಟ್ಯಾಂಡರ್ಡ್ ಡಿಡನ್​ ಸೇರಿ ಹೊಸ ಆದಾಯ ತೆರಿಗೆಯನ್ನು ಹೆಚ್ಚು ಆಕರ್ಷಕವಾಗಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net