2020 ಹೊಸವರ್ಷ: ಗೋಲ್ಡನ್ ಲೈಫಿಗೆ ಸೂಪರ್ ಐಡಿಯಾ ಕೊಟ್ಟಿದ್ದಾರೆ ತೇಜಸ್ವಿನಿ ಅನಂತಕುಮಾರ್...

Tejaswini vvani
Published on
ಒಂದೊಳ್ಳೆ ಲೈಫು, ಚಿಕ್ಕದಾದ್ರೂ ಚೊಕ್ಕ ಕೆಲಸ. ಅದ್ದೂರಿ ಅಲ್ಲದಿದ್ರೂ ಗೌರವವಾಗಿ ಬದುಕಿ, ಸ್ವಲ್ಪ ಉಳಿಸಿ ಕೂಡಿಡುವಷ್ಟು
ಆದಾಯ…. ಇಂತಹ ಸಣ್ಣ ಸಣ್ಣ ಕನಸುಗಳನ್ನು ಹೊತ್ತ ಎಷ್ಟೋ ಜೀವಗಳು ಇವುಗಳ ನನಸಿನ ಬಗ್ಗೆ ಪ್ರತಿನಿತ್ಯ ಕನವರಿಸುತ್ತಿರುತ್ತವೆ. ತೋಳಲ್ಲಿ ಶಕ್ತಿ ಇದ್ದರೂ ಏನು ಮಾಡಬೇಕೆಂಬ ಗೊಂದಲ, ಗೋಜಲು. ಏನು ಮಾಡಿದರೆ ಅದೇನು ಆಗುವುದೋ ಎಂಬ ಭಯ, ದುಗುಡ. ಈ ಆತಂಕ, ಭಯವನ್ನು ಗಂಟು ಮೂಟೆ ಕಟ್ಟಿ ಪಕ್ಕಕ್ಕಿಟ್ಟು ಮುನ್ನಡೆದ ಅದೆಷ್ಟೋ ಮಂದಿ ಕೇವಲ ಆತ್ಮವಿಶ್ವಾಸ ಎಂಬ ಬಂಡವಾಳ ಹೂಡಿ ಕೋಟಿ ಕೋಟಿ ಗಳಿಸುತ್ತಿದ್ದಾರೆ. ಇಂತಹ ಹಲವು ಸ್ಪೂರ್ತಿದಾಯಕರ ಜತೆಗೆ ವಿಜಯವಾಣಿಯ ಅಪಾರ ಓದುಗರು ನ್ಯಾಯಮಾರ್ಗದಿಂದ ದುಡಿಮೆ ದುಪ್ಪಟ್ಟು ಮಾಡುವ ಬಗ್ಗೆ ತಮ್ಮ ಅನುಭವ, ಸಲಹೆಗಳನ್ನು ಧಾರೆ ಎರೆದಿದ್ದಾರೆ. ಹೊಸ ವರ್ಷದ ದಿನ ನೀವು ಓದುವ ಈ ಆತ್ಮವಿಶ್ವಾಸದ ಸೂತ್ರಗಳು ನಿಮ್ಮ ಜೀವನಕ್ಕೆ ಹೊಸ ದಾರಿಯಾಗಲಿ ಎಂಬುದು ವಿಜಯವಾಣಿ ಆಶಯ, ಕಳಕಳಿ.
ಟೇಬಲ್​ಟಾಪ್ ವ್ಯವಸಾಯ!
ಟೇಬಲ್ ಟಾಪ್ ಆರ್ಗ್ಯಾನಿಕ್ ಫಾರ್ವಿುಂಗ್ ಇಸ್ರೇಲ್​ನಲ್ಲಿ ಚಾಲ್ತಿಯಲ್ಲಿದೆ. ಟೊಮ್ಯಾಟೋವನ್ನು ತೋಟದಲ್ಲಿ ಬೆಳೆದು ಮಾರುವುದಕ್ಕಿಂತ, ಗಿಡವನ್ನೇ ಬೆಳೆಸಿ ಮಾರುವುದು ಸುಲಭ ಅಲ್ಲವೇ? ತರಕಾರಿಗಳನ್ನು ಪಾಟ್​ಗಳಲ್ಲೂ ಬೆಳೆಯಬಹುದು. ಇದರಿಂದ ಮನೆಯ ಅಗತ್ಯ ನೀಗುತ್ತದೆ ಅಲ್ಲದೆ ಮಾರಾಟವನ್ನೂ ಮಾಡಬಹುದು. ತರಕಾರಿ ಗಿಡ ಮಾರಿಯೂ ಸಂಪಾದಿಸಬಹುದು. ಸಾವಯವ ತರಕಾರಿಗಳಿಗೆ ಒಳ್ಳೆಯ ಮಾರುಕಟ್ಟೆ ಇದೆ. ದೊಡ್ಡ ಶಹರಗಳ ಸಮೀಪದ ಹಳ್ಳಿಗಳ ಯುವಕರು ಟೇಬಲ್ ಟಾಪ್ ಆರ್ಗ್ಯಾನಿಕ್ ಫಾರ್ವಿುಂಗ್ ಅಳವಡಿಸಿಕೊಳ್ಳಬಹುದು.

| ತೇಜಸ್ವಿನಿ ಅನಂತಕುಮಾರ್ ಸಮಾಜಸೇವಕರು, ಅದಮ್ಯ ಚೇತನ ಮುಖ್ಯಸ್ಥರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net