ಷೇರುಪೇಟೆಯಲ್ಲಿ ನಿಲ್ಲದ ಕರಡಿ ಕುಣಿತ; 3 ದಿನದಲ್ಲಿ 15.72 ಲಕ್ಷ ಕೋಟಿ ರೂ. ನಷ್ಟ

Sensex 15 Dec 19
Published on

ಮುಂಬೈ: ಕರೊನಾ ಸೋಂಕಿನ ಆರ್ಭಟ, ಕಚ್ಚಾ ತೈಲ ಮಾರುಕಟ್ಟೆಯಲ್ಲಿನ ದರ ಇಳಿಕೆ, ಆತಂಕಗೊಂಡಿರುವ ಹೂಡಿಕೆದಾರಿಂದ ಷೇರು ಮಾರಾಟ ಹಿನ್ನೆಲೆಯಲ್ಲಿ ಬುಧವಾರ ಕೂಡ ಸೆನ್ಸೆಕ್ಸ್ 1,709.58 (ಶೇ. 5.59) ಅಂಶ ಕುಸಿತವಾಗಿದೆ. 3 ದಿನಗಳಲ್ಲಿ ಹೂಡಿಕೆದಾರ -ಠಿ; 15.72 ಲಕ್ಷ ಕೋಟಿ ಸಂಪತ್ತು ಕರಗಿದೆ. ಷೇರುಪೇಟೆ ಸಂಕಷ್ಟ ನಿವಾರಿಸಲು ಆರ್​ಬಿಐ -ಠಿ;10 ಸಾವಿರ ಕೋಟಿ ಮೌಲ್ಯದ ಸರ್ಕಾರಿ ಬಾಂಡ್​ಗಳನ್ನು ಖರೀದಿಸಲು ನಿರ್ಧರಿಸಿದೆ.

ಬುಧವಾರ ವಹಿವಾಟು ಆರಂಭದಿಂದಲೇ ಸೆನ್ಸೆಕ್ಸ್ ಕುಸಿತಕಂಡು ಹೂಡಿಕೆದಾರರಲ್ಲಿ ಆತಂಕ ಹೆಚ್ಚಿಸಿತ್ತು. ನಿಫ್ಟಿ 560 ಅಂಕ ಇಳಿಕೆ ಕಂಡಿದೆ. 2017ರ ಜನವರಿಯ ನಂತರ ಸೂಚ್ಯಂಕ ಇಷ್ಟು ಕನಿಷ್ಠ ಹಂತಕ್ಕೆ ತಲುಪಿದೆ. ಬಹುತೇಕ ಎಲ್ಲ ವಲಯದ ಕಂಪನಿಗಳ ಷೇರು ಇಳಿಕೆ ಕಂಡವು. ಇಂಡಸ್​ಇಂಡ್ ಬ್ಯಾಂಕ್ ಷೇರು ಮೌಲ್ಯ ಶೇ.23.90 ಇಳಿಕೆಯಾಗಿ ಗರಿಷ್ಠ ನಷ್ಟ ಅನುಭವಿಸಿದೆ. ಪವರ್​ಗ್ರಿಡ್, ಕೊಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್​ಡಿಎಫ್​ಸಿ ಬ್ಯಾಂಕ್, ಎನ್​ಟಿಪಿಸಿಗಳು ಷೇರು ಕುಸಿತ ಕಂಡವು. ದೂರಸಂಪರ್ಕ ಕಂಪನಿಗಳ ಷೇರುಗಳು ಕೂಡ ಅಪಮೌಲ್ಯಗೊಂಡಿವೆ. ಒಎನ್​ಜಿಸಿ, ಐಟಿಸಿ, ಯೆಸ್ ಬ್ಯಾಂಕ್, ಎಸ್​ಬಿಐ, ಟಿಸಿಎಸ್​ಗಳ ಷೇರು ವೃದ್ಧಿ ದಾಖಲಿಸಿವೆ. 2020ರಲ್ಲಿ ಭಾರತ ಆರ್ಥಿಕ ಬೆಳವಣಿಗೆ ದರ ಶೇ.5.2 ಇರಲಿದೆ ಎಂದು ಎಸ್​ಆಂಡ್​ಪಿ ಜಾಗತಿಕ ರೇಟಿಂಗ್ ಸಂಸ್ಥೆ ಅಂದಾಜಿಸಿದೆ.

ಬಂಗಾರ ಬಲು ದುಬಾರಿ

ಚಿನಿವಾರ ಪೇಟೆಯಲ್ಲಿ ಬಂಗಾರದ ದರ  311 ರೂ. ಹೆಚ್ಚಳವಾಗಿದ್ದು, 10 ಗ್ರಾಂ ಶುದ್ಧ ಚಿನ್ನದ ಬೆಲೆ  40,241 ರೂ.ಗೆ ತಲುಪಿದೆ. ಆದರೆ, ಬೆಳ್ಳಿ ದರ  ರೂ. 468 ಕುಸಿದಿದ್ದು, ಪ್ರತಿ ಕೆ.ಜಿ.ಗೆ ರೂ. 35,948ಕ್ಕೆ ಇಳಿದಿದೆ. ಡಾಲರ್ ಎದುರು ರೂ. ಅಲ್ಪ ಕುಸಿತ ಕಂಡು ರೂ. 74.26ಕ್ಕೆ ಸ್ಥಿರಗೊಂಡಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಶೇ. 3.48 ಇಳಿಕೆಯಾಗಿ ಪ್ರತಿ ಬ್ಯಾರೆಲ್ ಬ್ರೆಂಟ್ ತೈಲ ದರ 27.73ಕ್ಕೆ ಇಳಿದಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net