ಬದಿಯಡ್ಕ: ಪೆರ್ಲ ಕೃಷ್ಣ ಭಟ್ಟ ಅಂಥವರ ಸಂಸ್ಮರಣೆ ಕಾರ್ಯಕ್ರಮ ಓಣಂ ಹಬ್ಬದ ಜತೆಗೆ ಆಯೋಜಿಸರುವುದು ಸಂತಸ ನೀಡಿದೆ ಎಂದು ಕರ್ನಾಟಕ ಸರ್ಕಾರದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು.
ಬಳ್ಳಪದವಿನ ವೀಣಾವಾದಿನಿ ಸಂಗೀತ ವಿದ್ಯಾಲಯ ನಾರಾಯಣೀಯಂನಲ್ಲಿ ಭಾನುವಾರ ಓಣಂ ಹಬ್ಬ-ಪೆರ್ಲ ಕೃಷ್ಣ ಭಟ್ ಸಂಸ್ಮರಣೆ ಉದ್ಘಾಟಿಸಿ ಮಾತನಾಡಿದರು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮುಖ್ಯ ಅತಿಥಿಯಾಗಿದ್ದರು. ಡಾ.ಬೇ.ಸೀ.ಗೋಪಾಲಕೃಷ್ಣ ಭಟ್ ಸಂಸ್ಮರಣಾ ಭಾಷಣ ಮಾಡಿದರು.
ವಿಶ್ವಾಸ್ ಜೈನ್ ಪದ್ಯಾರಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಕುಂಬ್ಡಾಜೆ ಗ್ರಾಪಂ ಅಧ್ಯಕ್ಷ ಹಮೀದ್ ಪೊಸೊಳಿಗೆ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎ.ಆರ್.ಸುಬ್ಬಯ್ಯಕಟ್ಟೆ, ಉದ್ಯಮಿ ನಿತ್ಯಾನಂದ ಶೆಣೈ, ಆನಂದ ಕೆ.ಮವ್ವಾರು, ಶ್ರೀನಿವಾಸ ಭಟ್ ಚಂದುಕೂಡ್ಲು,ಪೆರ್ಲ ಕೃಷ್ಣ ಭಟ್ ಅವರ ಪುತ್ರ ರಾಜಾರಾಂ ಪೆರ್ಲ, ಕರ್ನಾಟಕ ಬ್ಯಾಂಕ್ ಪ್ರಧಾನ ಪ್ರಬಂಧಕ ವಿನಯ್ ಭಟ್, ಪ್ರೊ.ಎ.ಶ್ರೀನಾಥ್, ಪೈವಳಿಕೆ ಗ್ರಾಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಜೆಡ್.ಎ.ಕಯ್ಯರ್, ಅಶ್ವತ್ ಲಾಲ್ಭಾಗ್, ಲತೀಫ್ ಉಪಸ್ಥಿತರಿದ್ದರು.
ಯೋಗೀಶ್ ಶರ್ಮ ಬಳ್ಳಪದವು ಪ್ರಸ್ತಾಪಿಸಿದರು. ರವೀಂದ್ರ ಸ್ವಾಮಿ ವಂದಿಸಿದರು. ಪತ್ರಕರ್ತ ಅಖಿಲೇಶ್ ನಗಮುಗಂ ಕಾರ್ಯಕ್ರಮ ನಿರೂಪಿಸಿದರು. ವೀಣಾವಾದಿನಿಯ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರನ್ನು ಗೌರವಿಸಲಾಯಿತು. ತಿರುವಾದಿರಕಳಿ, ಓಣಂ ಹಬ್ಬದ ಅಂಗವಾಗಿ ವಿಶೇಷ ಆಟಗಳು ನಡೆದವು.