ಹಣದ ವಿಚಾರವಾಗಿ ಬೆದರಿಕೆ ಹಾಕಿ ಕೆಟ್ಟದಾಗಿ ನಿಂದನೆ: ಹಾಸ್ಯ ಕಲಾವಿದೆ ನಯನಾ ವಿರುದ್ಧ ದೂರು ದಾಖಲು

Nayana
Published on

ಬೆಂಗಳೂರು: ಕಾಮಿಡಿ ಕಿಲಾಡಿಗಳು (Comedy Khiladigalu) ಖ್ಯಾತಿಯ ಹಾಸ್ಯ ಕಲಾವಿದೆ ನಯನಾ (Nayana) ವಿರುದ್ಧ ಜೀವ ಬೆದರಿಕೆ ಮತ್ತು ನಿಂದನೆ ಆರೋಪದಡಿಯಲ್ಲಿ ಕಾಮಿಡಿ ಕಿಲಾಡಿ ಗ್ಯಾಂಗ್​ನ ಹಾಸ್ಯ ಕಲಾವಿದ ಸೋಮಶೇಖರ್​ ದೂರು ದಾಖಲಿಸಿದ್ದಾರೆ. ಹಣದ ಹಂಚಿಕೆ ವಿಚಾರಕ್ಕೆ ನಯನಾ ಬೆದರಿಕೆ (Threat Call) ಹಾಕಿದ್ದಾರೆಂದು ಆರೋಪಿಸಿದ್ದಾರೆ.

ಖಾಸಗಿ ಚಾನಲ್​​ನಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಗ್ಯಾಂಗ್ಸ್‌ ಕಾರ್ಯಕ್ರಮ (TV Program) ದಲ್ಲಿ ಪಿಯುಸಿ ತಂಡ ದ್ವಿತೀಯ ಬಹುಮಾನ ಪಡೆದಿತ್ತು. ಬಹುಮಾನವಾಗಿ 3 ಲಕ್ಷ ರೂ. ಹಣ (Prize Money) ಬಂದಿತ್ತು. ಅದರಲ್ಲಿ 30% ಕಟ್ ಆಗಿ ತಲಾ 70 ಸಾವಿರ ಬಂದಿತ್ತು. PUC ತಂಡದಲ್ಲಿ ನಟಿಸಿದ್ದ ಸೋಮಶೇಖರ್‌ ಸೇರಿ ಇನ್ನೂ ಮೂವರು ಇದ್ದರು.

ಮೂವರಿಗೆ ಜೂನಿಯರ್ ಆರ್ಟಿಸ್ಟ್​ ಅಂತಾನೆ ಹಣ ನೀಡಲಾಗುತ್ತದೆ. ಆ ತಂಡದಲ್ಲಿ ಇನ್ನೂ ಇಬ್ಬರು ಸೀನಿಯರ್​ಗಳಿಗೆ ತಿಂಗಳ ಸಂಬಳ ಇರ್ತಿತ್ತು. ಅನೀಶ್ ಮತ್ತು ಚಿದಾನಂದ್ PUC ತಂಡದಲ್ಲಿ ಸೀನಿಯರ್​ಗಳಾಗಿದ್ದರು. ಇಬ್ಬರು ಸೀನಿಯರ್​ಗಳಿಗೆ ಹಣ ನೀಡುವಂತೆ ಇದೀಗ ನಯನಾ ಅವಾಜ್‌ ಹಾಕಿದ್ದಾರೆ. ಚಪ್ ಚಪ್ಲಿಲಿ ಹೊಡಿಬೇಕು ಬೋ....ಮಗ ಎಂದೆಲ್ಲ ಬೈದಿದ್ದಾರೆ. ನೀನು ಹಣ ಕೊಟ್ರೆ ಸರಿ, ಇಲ್ಲ ಅಂದ್ರೆ ಸರಿ ಇರಲ್ಲ. ನೀನು ಹಣ ಕೊಟ್ಟಿಲ್ಲ ಅಂದ್ರೆ ನಾವು ಏನು ಮಾಡೋಕು ಯೋಚಿಸಲ್ಲ. ಮುಂದಿನ ಬಾರಿ ನಿನ್ನನ್ನು ಪೊಲೀಸರು ಬಂದು ಅರೆಸ್ಟ್ ಮಾಡ್ತಾರೆ. ನಾನು ಸ್ಟೇಷನ್​ನಲ್ಲೇ ಇದೀನಿ ಎಂದು ನಯನಾ ಅವಾಜ್​ ಹಾಕಿರುವ ಆಡಿಯೋ ವೈರಲ್​ ಆಗಿದೆ.

ಇನ್ನು ಸೋಮಶೇಖರ್​ ಹೇಳುವ ಪ್ರಕಾರ ಸೀನಿಯರ್​ಗಳಿಗೆ ಹಣ ಕೊಡಲು ಚಾನಲ್ ಹೇಳಿಲ್ಲವಂತೆ. ಇಷ್ಟ ಇದ್ರೆ ಮಾತ್ರ ಕೊಡಬಹುದು ಆದರೆ, ಅವರು ಕೇಳುವಂತಿಲ್ಲ ಎಂದು ಚಾನಲ್​ ಹೇಳಿತ್ತಂತೆ. ಆದರೂ ಹಣದ ವಿಚಾರಕ್ಕೆ ನಯನಾ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಸೋಮಶೇಖರ್​ ಆರೋಪ ಮಾಡಿದ್ದು, ಈ ಸಂಬಂಧ ಆರ್​ಆರ್​ ನಗರ (RR Nagar) ಪೊಲೀಸ್ ಠಾಣೆಯಲ್ಲಿ ಎನ್​ಸಿಆರ್​ ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net