ಕಾಮೆಡ್ -ಕೆ ಯುಜಿಇಟಿ - 2020 ಪರೀಕ್ಷೆ ಮತ್ತೆ ಮುಂದೂಡಿಕೆ

Homework
Homework
Published on

ಬೆಂಗಳೂರು: ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟವು (COMDEK) COMEDK UGET 2020 ಪರೀಕ್ಷೆಯ ದಿನಾಂಕಗಳನ್ನು ಮತ್ತೆ ಮುಂದೂಡಿದೆ.

ಈ ಮೊದಲು ಪರೀಕ್ಷೆಯನ್ನು ಆಗಸ್ಟ್ 1 ರಂದು ಮರು ನಿಗದಿಪಡಿಸಲಾಗಿತ್ತು. ಆದರೆ ಕೋವಿಡ್ -19 ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಆರೋಗ್ಯದ ದೃಷ್ಟಿಯಿಂದ, ನಮ್ಮ ಸಹಾಯವಾಣಿ ಬಂದ್ ಆಗಿರುತ್ತದೆ. ಎಲ್ಲ ಪ್ರಶ್ನೆಗಳಿಗೆ ಇ-ಮೇಲ್ ಮೂಲಕ ಮಾತ್ರ ಉತ್ತರಿಸಲಾಗುವುದು. ನಿಮ್ಮ ಪ್ರಶ್ನೆಗಳನ್ನು studenthelpdesk@comedk.org ಗೆ ತಿಳಿಸಿ ಎಂದು COMDEK ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

COMEDK ಪರೀಕ್ಷೆಯ ಹೊಸ ದಿನಾಂಕವನ್ನು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.

ಅದಕ್ಕೂ ಮೊದಲು, ಒಕ್ಕೂಟವು ಜುಲೈ 25 ರಿಂದ ಆಗಸ್ಟ್ 1 ರ ರವರೆಗೆ ಪರೀಕ್ಷೆಗಳನ್ನು ಮರು ನಿಗದಿಪಡಿಸಿತ್ತು, ಅದನ್ನು ಈಗ ಮತ್ತಷ್ಟು ಮುಂದೂಡಲಾಗಿದೆ.

COMEDK UGET ಪರೀಕ್ಷೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ https://www.comedk.org/ ಗೆ ಭೇಟಿ ನೀಡಬೇಕೆಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net