'ಚಿರು 11ನೇ ದಿನದ ಪುಣ್ಯತಿಥಿಗೆ ಬನ್ನಿ, ಆದರೆ....': ನಟ ಅರ್ಜುನ್​ ಸರ್ಜಾ ಮಾಡಿದ್ದಾರೊಂದು ಮನವಿ

Arjun Sarja 15 June 20
Published on

ಬೆಂಗಳೂರು: ನಟ ಚಿರಂಜೀವಿ ಜೂ.7ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಕುಟುಂಬದವರೆಲ್ಲ ತೀವ್ರ ದುಃಖಿತರಾಗಿದ್ದಾರೆ. ಚಿರು ಅಂತ್ಯಕ್ರಿಯೆ ಮರುದಿನ ಹಾಲು-ತುಪ್ಪ ಕಾರ್ಯಕ್ರಮ ನಡೆದಿತ್ತು. ಇದೀಗ 11ನೇ ದಿನದ ಪುಣ್ಯತಿಥಿಯ ಸಿದ್ಧತೆ ನಡೆಯುತ್ತಿದೆ.

ಈ ಬಗ್ಗೆ ಚಿರು ಮಾವ, ನಟ ಅರ್ಜುನ್​ ಸರ್ಜಾ ತಿಳಿಸಿದ್ದಾರೆ. ಜೂ.17ರಂದು ಕನಕಪುರ ರಸ್ತೆಯ ಬೃಂದಾವನ ಫಾರಂ ಹೌಸ್​ನಲ್ಲಿ ನಡೆಯಲಿರುವ ಚಿರು ಪುಣ್ಯತಿಥಿಗೆ ಮಾಧ್ಯಮದವರಿಗೂ ಆಹ್ವಾನ ನೀಡಿರುವ ಅವರು ಚಿಕ್ಕ ಮನವಿಯೊಂದನ್ನೂ ಮಾಡಿದ್ದಾರೆ.

ವಿಧಿಯಾಟದ ಮುಂದೆ ಏನೂ ಇಲ್ಲ ಎಂಬುದು ನಮ್ಮ ಚಿರಂಜೀವಿ ಸರ್ಜಾ ಅಕಾಲಿಕ ಮರಣದಿಂದ ಮತ್ತಷ್ಟು ಮನದಟ್ಟಾಗಿದೆ. ನಮ್ಮ ಕುಟುಂಬದಲ್ಲಿ ಇಂಥ ಒಂದು ಸಂದರ್ಭ ಬರುತ್ತದೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ನಮ್ಮ ಸುಖ ಹಾಗೂ ಕಷ್ಟ ಎರಡರಲ್ಲೂ ತಾವು ಮಾಧ್ಯಮದವರು ನಮ್ಮ ಜತೆಗಿದ್ದೀರಿ. ಇದನ್ನೂ ಓದಿ: 2019ರ ಜೂನ್​ 7ರಂದು ಮೇಘನಾ ಹಾಕಿದ್ದ ಇನ್ಸ್ಟಾಗ್ರಾಂ ಪೋಸ್ಟ್​ನ್ನು ಈ ಜೂ.7ರಂದು ಕ್ರೂರ ವಿಧಿ ನಿಜ ಮಾಡಿತು…

ಜೂನ್‌ 17 ರ ಬುಧವಾರ ಬೆ.10.30ಕ್ಕೆ ಕನಕಪುರ ರಸ್ತೆಯ ಬೃಂದಾವನ ಫಾರಂ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಹನ್ನೊಂದನೇ ದಿನದ ಪುಣ್ಯತಿಥಿಯನ್ನು ಹಮ್ಮಿಕೊಂಡಿದ್ದೇವೆ. ಅಂದು ತಾವು ಆಗಮಿಸಬೇಕೆಂದು ವಿನಂತಿ.. ನಾವು, ನೀವು ಸೇರಿ ಚಿರು ಆತ್ಮಕ್ಕೆ ಸದ್ಗತಿ ದೊರೆಯಲೆಂದು‌ ಪ್ರಾರ್ಥಿಸೋಣ ಇದು ಕುಟುಂಬದ ಖಾಸಗಿ ಕಾರ್ಯಕ್ರಮ ಆಗಿರುವುದರಿಂದ ಕ್ಯಾಮರಾಗಳಿಗೆ ಪ್ರವೇಶ ಇಲ್ಲ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net