Vishwanath And Sons OTT Release; ಸೂರ್ಯ ನಟನೆಯ ಸಿನಿಮಾ ಯಾವ OTT ಫ್ಲಾಟ್​ಫಾರ್ಮ್​ನಲ್ಲಿ ರಿಲೀಸ್ ಆಗಲಿದೆ?

'Vishwanath And Sons' OTT release date
'Vishwanath And Sons' OTT release date
Published on

ಪ್ರಮುಖ ಮುಖ್ಯಾಂಶಗಳು

  • ಕಾಲಿವುಡ್​ ನಟ ಸೂರ್ಯ ನಟನೆಯ ವಿಶ್ವನಾಥ್ ಅಂಡ್ ಸನ್ಸ್ ರಿಲೀಸ್.
  • ಸೆಪ್ಟೆಂಬರ್ ಅಥವಾ ಅಕ್ಟೋಬರ್​ನಲ್ಲಿ ಒಟಿಟಿಗೆ ಸಿನಿಮಾ ಲಗ್ಗೆ.
  • ವಿಶ್ವನಾಥ್ ಅಂಡ್ ಸನ್ಸ್ ಒಟಿಟಿ ಸ್ಟ್ರೀಮಿಂಗ್​ ಹಕ್ಕನ್ನು ನೆಟ್​ಫ್ಲಿಕ್ಸ್ ಪಡೆದುಕೊಂಡಿದೆ.
'Vishwanath And Sons' OTT release date: ಕಾಲಿವುಡ್​ ನಟ ಸೂರ್ಯ ನಟನೆಯ ವಿಶ್ವನಾಥ್ ಅಂಡ್ ಸನ್ಸ್  ಆಗಸ್ಟ್​ 14ರಂದು ರಿಲೀಸ್​ ಆಗಿದ್ದು,  

ಒಂದೇ ದಿನದಲ್ಲಿ

 ಸಾಕಷ್ಟು ಮೆಚ್ಚುಗೆ  ವ್ಯಕ್ತವಾಗುತ್ತಿದೆ. ಸೂರ್ಯ ಸಹೋದರ ನಟ ಕಾರ್ತಿ​ ಸಹ ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ. ಈ ಹೊತ್ತಲ್ಲೇ...ಚಿತ್ರ ಯಾವ ಓಟಿಟಿ ಫ್ಲಾಟ್​ಫಾರ್ಮ್​ನಲ್ಲಿ ಬರಲಿದೆ ಎನ್ನುವ ಮಾಹಿತಿ ಸಿಕ್ಕಿದೆ. 

ವಿಶ್ವ

ವೆಂಕಿ ಅಟ್ಲೂರಿ  ನಿರ್ದೇಶನದ ಸೂರ್ಯ ಮತ್ತು ಮಾಲಿವುಡ್​ ನಟಿ ಮಮಿತಾ ಬೈಜು, ರವೀನಾ ಟಂಟನ್​, ರಾಧಿಕಾ ಶರತ್​ ಕುಮಾರ್​​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಭಾವನಾತ್ಮಕ ಮತ್ತು ಕೌಟುಂಬಿಕ, ಪ್ರೀತಿ, ಮದುವೆ ಒತ್ತಡ, ನಲವತ್ತರ ಪ್ರಾಯ ಹಾಗೂ ಪಿತೃತ್ವ ಸಂಬಂಧಗಳ  ಸುತ್ತ ಈ ಸಿನಿಮಾದ ಕತೆ ಸುತ್ತಲಿದೆ. ಈಗಾಗಲೇ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಪಾಸಿಟಿವ್​ ರಿವ್ಯೂವ್​ಗಳನ್ನು ಪಡೆದುಕೊಳ್ಳುತ್ತಿದೆ.

ಓಟಿಟಿಗೆ ಕಾಲಿಡೋದು ಯಾವಾಗ?

ವಿಶ್ವನಾಥ್ ಅಂಡ್ ಸನ್ಸ್  ಸಿನಿಮಾ ಈ ದಿನವಷ್ಟೇ ರಿಲೀಸ್ ಆಗಿರುವ ಕಾರಣ ಅಕ್ಟೋಬರ್​ ಅಥವಾ ಸೆಪ್ಟೆಂಬರ್​ ಕೊನೇ ವಾರದಲ್ಲಿ  ಒಟಿಟಿಗೆ ಕಾಲಿಡಲಿದೆ. ಈಗಾಗಲೇ ನೆಟ್​​ಫ್ಲಿಕ್ಸ್​ ಈ ಸಿನಿಮಾದ ಒಟಿಟಿ ಸ್ಟ್ರೀಮಿಂಗ್​ ಹಕ್ಕುಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.  ಆದರೆ, ಇನ್ನೂ ಯಾವ ದಿನ, ಯಾವ ತಿಂಗಳು ಸಿನಿಮಾ ನೋಡಬಹುದು ಎನ್ನುವ ಬಗ್ಗೆ ಸಂಸ್ಥೆ ಮಾಹಿತಿ ಹಂಚಿಕೊಂಡಿಲ್ಲ.

ಸೂರ್ಯ ಸಹೋದರ ಹೇಳಿದ್ದಿಷ್ಟು

ವೆಂಕಿ ಅಟ್ಲೂರಿಯವರನ್ನು ಟ್ಯಾಗ್​ ಮಾಡಿ

 '

ಸುಂದರ ಪಾತ್ರಗಳು ಮತ್ತು ಅದ್ಭುತ ಅಭಿನಯ.ಮುಕ್ತವಾಗಿ ನಗಿಸುವ ಮತ್ತು  ಹೃದಯವನ್ನು ಪ್ರೀತಿಯಿಂದ ತುಂಬುವ ಆರೋಗ್ಯಕರ ಚಿತ್ರ. ಮತ್ತೊಮ್ಮೆ ನೋಡಲು ಇಷ್ಟಪಡುತ್ತೇನೆ ಎಂದು ನಟ ಕಾರ್ತಿ ​ ಬರೆದುಕೊಂಡಿದ್ದಾರೆ.

ಜ್ಯೋತಿಕಾ-ಸೂರ್ಯ ಇಂಟರ್​ವ್ಯೂ

ಹಾಲಿವುಡ್​ ರಿಪೋರ್ಟರ್​ ಇಂಡಿಯಾ ಸಂದರ್ಶಿಸಿತ್ತು. ಈ ವೇಳೆ ಇಬ್ಬರು ತಮ್ಮ ಸಿನಿ ಪ್ರಯಾಣ ಹಾಗೂ  ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದರು. ಜ್ಯೋತಿಕಾ ಅವರು ಸೂರ್ಯ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಬಗ್ಗೆ  ಹಾಗೂ ಈಗ ಅದು ದುಪ್ಪಟ್ಟು ಕಡಿಮೆಯಾದ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.

 ಇಬ್ಬರು ಎಂದಿಗೂ ಈ ಕೆಲಸ ನೀವೆ ಮಾಡಬೇಕು ಎಂದು ಭಾವಿಸಿಲ್ಲ. ಸಮಾನಾಗಿ ಎಲ್ಲವನ್ನೂ ಮಾಡಿದ್ದೇವೆ. ಸಂಭಾವನೆಯನ್ನು ಸಂಭ್ರಮಿಸಿದ್ದೇವೆ. ಯಾರಿಗೇ ಪ್ರಶಸ್ತಿ ಸಿಕ್ಕರೂ ಒಬ್ಬರಿಗೊಬ್ಬರು ನೆಚ್ಚಿಕೊಂಡಿದ್ದೇವೆ ಎಂದು ಹೇಳಿದ್ದರು.

ಈ ಸಿನಿಮಾದಲ್ಲಿ ನಟನೆ

ಸೂರ್ಯ ಮತ್ತು ಜ್ಯೋತಿಕಾ ಅವರು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿ, ಹಿಟ್​ ಜೋಡಿ ಎನಿಸಿಕೊಂಡಿದ್ದಾರೆ. ಕಾಕಾ-ಕಾಕಾ, ಪೇರಳಗನ್, ಮಾಯಾವಿ, ಸಿಲ್ಲುನು ಒರಿ ಕಾದಲ್, ಪೋರಾಟಮ್ ಉಯಿರಿಲೇ ಕಲಂದಂಧು ಸಿನಿಮಾಗಳಲ್ಲಿ ಮಿಂಚಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net