

ಬಹುಭಾಷಾ ನಟ ಕಮಲ್ ಹಾಸನ್ ಶನಿವಾರ (ನ. 7) 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಮುಂದಿನ ಸಿನಿಮಾದ ಟೈಟಲ್ ಅನೌನ್ಸ್ ಮಾಡುವ ಮೂಲಕ ಹಿರಿಯ ನಟನಿಗೆ ಬರ್ತ್ಡೇ ಗ್ಟಿ ನೀಡಲಾಗಿದೆ. ಕೆಲ ತಿಂಗಳ ಹಿಂದೆ ‘ಚಿತ್ತಾ’, ‘ಸೇತುಪತಿ’ ಖ್ಯಾತಿಯ ಎಸ್.ಯು.ಅರುಣ್ ಕುಮಾರ್ ಮತ್ತು ಕಮಲ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಘೋಷಿಸಲಾಗಿತ್ತು. ಇದೀಗ ಸ್ಟ್ ಲುಕ್ ರಿವೀಲ್ ಮಾಡುವ ಮೂಲಕ ಟೈಟಲ್ ಅನೌನ್ಸ್ ಮಾಡಲಾಗಿದ್ದು, ‘ಸಂಡಿಯಾರ್’ ಎಂದು ಹೆಸರಿಡಲಾಗಿದೆ. ಇನ್ನು ಸ್ವತಃ ಕಮಲ್ ಹಾಸನ್ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ನಲ್ಲಿ ಕಮಲ್ ಹಾಸನ್ ರಗಡ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಪಿಸ್ತೂಲ್ ಹಿಡಿದು, ಕಾರಿನ ಕಿಟಕಿಯಿಂದ ತಮ್ಮದೇ ಖಡಕ್ ನೋಟ ಬೀರಿದ್ದಾರೆ. ಇನ್ನೊಂದು ಪೋಸ್ಟರ್ನಲ್ಲಿ ಗನ್ ಹಿಡಿದು ನಿಂತಿದ್ದಾರೆ. ಈ ಎರಡು ಪೋಸ್ಟರ್ಗಳು ಸಿನಿಮಾ ಕುರಿತಂತೆ ಕುತೂಹಲ ಕೆರಳಿಸಿವೆ. ‘ಸಂಡಿಯಾರ್’ ಎಂದರೆ ಸಮಸ್ಯೆ ಸೃಷ್ಟಿಸುವಾತ ಎಂಬ ಅರ್ಥ ನೀಡುತ್ತದೆ. ಈಗಾಗಲೇ ಚಿತ್ರೀಕರಣ ಆರಂಭಗೊಂಡಿದ್ದು, ಕಮಲ್ಗೆ ಇಲ್ಲಿ ಯಾರು ಜೋಡಿಯಾಗಲಿದ್ದಾರೆ ಎಂಬುದನ್ನು ಚಿತ್ರತಂಡ ಸದ್ಯ ಗುಟ್ಟಾಗಿಟ್ಟಿದೆ. ಅನಿರುದ್ಧ್ ರವಿಚಂದರ್ ಸಂಗೀತ, ಅನ್ಬರಿವ್ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ. 2027ಕ್ಕೆ ‘ಸಂಡಿಯಾರ್’ ತೆರೆಗೆ ಬರಲಿದೆ. ಇನ್ನು ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 3’ ರಿಲೀಸ್ಗೆ ಸಿದ್ಧವಾಗಿದೆ. ಹಾಗೆಯೇ, ರಜಿನಿಕಾಂತ್ ಜತೆಗೆ ಕಮಲ್ ಅಭಿನಯಿಸಲಿರುವ ಚಿತ್ರ ಇನ್ನಷ್ಟೇ ಸೆಟ್ಟೇರಬೇಕಿದೆ. - ಏಜೆನ್ಸೀಸ್