1999ರಲ್ಲಿ ಪೂವೆಲ್ಲಾಮ್ ಕೇಟ್ಟುಪಾರುಸಿನಿಮಾದಲ್ಲಿ ಜ್ಯೋತಿಕಾ ಹಾಗೂ ಸೂರ್ಯ ಒಟ್ಟಾಗಿ ನಟಿಸಿದರು. ಆ ಮೂಲಕ ಇಬ್ಬರಿಗೂ ಪರಿಚಯವಾಯ್ತು. ಉಯಿರಿಲೇ ಕಲದಂಧು, ಕಾಕ ಕಾಕ, ಪೇರಳಗನ್, ಮಾಯಾವಿ, ಸಿಲ್ಲನು ಒರು ಕಾದಲ್, ಪೋರಾಟಮ್, ಉಯಿರಿಲೆ ಕಲಂಥತ್ತು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿ ಹಿಟ್ ಕೊಟ್ಟಿದ್ದರು. ಪ್ರೇಕ್ಷಕರಿಗೆ ಈ ಜೋಡಿ ಸಿಕ್ಕಾಪಟ್ಟೆ ಇಷ್ಟವಾಗಿತ್ತು.