ಮಾತೃಭಾಷೆ ತಮಿಳು ನಿರರ್ಗಳವಾಗಿ ಮಾತನಾಡಲು ಬರದೇ ಇರುವುದು ಹೆಮ್ಮೆಯಲ್ಲ, ಅವಮಾನ : ನಟ ಧನುಷ್​​..Dhanush on Tamil

Dhanush urges students to prioritise Tamil as mother tongue
Dhanush urges students to prioritise Tamil as mother tongue
Published on

ಪ್ರಮುಖ ಮುಖ್ಯಾಂಶಗಳು

  • ಇಂಗ್ಲಿಷ್​ ಬೋನಸ್​ ಭಾಷೆ, ತಮಿಳು ಓದಲು ಬರೆಯಲು ಬರಬೇಕು ಎಂದ ಧನುಷ್​.
  • ತಮಿಳು ಮಾತನಾಡಲು ಕಲಿಯಿರಿ ಎಂದು ಮನವಿ ಮಾಡಿಕೊಂಡ ನಟ ಧನುಷ್.
  • ಧನುಷ್​ ರಾಜಕೀಯಕ್ಕೆ ಎಂಟ್ರಿ ಮಧ್ಯೆ ತಮಿಳು ಭಾಷಾ ಕಲಿಕೆ ಬಗ್ಗೆ ರಾಜಕೀಯ ಚರ್ಚೆ ಹೆಚ್ಚಳ.
ಚೆನ್ನೈ: 'ನಾನು ಸಣ್ಣವನಿದ್ದಾಗ ತಮಿಳು ಓದಲು, ಬರಿಯಲು ಬರುತ್ತಿತ್ತು. ಆದರೆ, ಇಂದಿನ ಕಾಲಘಟ್ಟಕ್ಕೆ ಎಲ್ಲವೂ ಬದಲಾಗಿದೆ. ನಾನು ದಿನಕ್ಕೆ 8-10 ಜನರನ್ನು ಭೇಟಿಯಾಗುತ್ತೇನೆ ಕೆಲವರಿಗೆ ಇಂಗ್ಲಿಷ್ ಚೆನ್ನಾಗಿ ಮಾತನಾಡಲು, ಓದಲು ಬರುತ್ತದೆ. ಆದರೆ, ತಮಿಳು ಬರೋದಿಲ್ಲ. ಎಲ್ಲಕ್ಕಿಂತ ಮೊದಲು ಮಾತೃಭಾಷೆ ನಿರರ್ಗಳವಾಗಿ ಮಾತನಾಡಲು ಬರಬೇಕು. ನಮ್ಮ ಮಾತೃಭಾಷೆ ಮಾತನಾಡಲು ಬಾರದಿರುವುದು ಹೆಮ್ಮೆಯ ವಿಷಯವಲ್ಲ, ಅದೊಂದು ಅವಮಾನ' ಹೀಗೆಂದು ಕಾರ್ಯಕ್ರಮವೊಂದರಲ್ಲಿ ಬೇಸರ ವ್ಯಕ್ತಪಡಿಸಿದ್ದು ಕಾಲಿವುಡ್​ ನಟ ಧನುಷ್.

ತಮಿಳುನಾಡಿನಲ್ಲಿ ಸಿಎಂ ವಿಜಯ್​ ಅವರ ನಂತರ ಧನುಷ್​ ಅವರು ರಾಜಕೀಯಕ್ಕೆ ಎಂಟ್ರಿ ಕೊಡ್ತಾರ ಎನ್ನುವ ಗಾಸೊಪ್ಸ್​ಗಳು ಎದ್ದಿರುವ ಮಧ್ಯೆ ಯುವಜನರಲ್ಲಿ ತಮಿಳು ಭಾಷೆಯ ಬಳಕೆಯು ಕಡಿಮೆಯಾಗುತ್ತಿರುವುದಕ್ಕೆ ನಟ ಧನುಷ್ ಕಳವಳ ವ್ಯಕ್ತಪಡಿಸಿದ್ದಾರೆ.

ತಮಿಳು ಮೊದಲು ನಂತರ ಎಲ್ಲವು

'ನಾನು ಫ್ರೆಂಚ್​ ಪ್ರೊಡಕ್ಷನ್​ನಡಿ ಒಂದು ಸಿನಿಮಾ ಮಾಡಿದ್ದೆ, ಬೆಲ್ಜಿಯಂನಲ್ಲಿ ಶೂಟಿಂಗ್​ ಇತ್ತು. ಆಗ ಒಬ್ಬರು ನಿಮಗೆ ಇಂಗ್ಲಿಷ್​​ ಮಾತನಾಡಲು ಬರುತ್ತಾ ಎಂದು ಕೇಳಿದರು. ನಾನು ಹೌದು ಸರ್ ಎಂದೆ. ಅವರು ತುಂಬಾನೆ ಅಚ್ಚರಿಪಟ್ಟರು. ಯಾಕೆ ನೀವು ಇಷ್ಟೊಂದ ಆಶ್ಚರ್ಯಪಟ್ಟಿದ್ದು ಎಂದು ನಾನು ಕೇಳಿದೆ. ಅಲ್ಲ ನಿಮಗೆ ನಿಮ್ಮ ಮಾತೃಭಾಷೆಯಲ್ವಾ ಮೊದಲು ಗೊತ್ತಿರಬೇಕು. ಇಂಗ್ಲಿಷ್​ವೊಂದು ಬೋನಸ್​ ಭಾಷೆಯಲ್ವಾ? ಎಂದರು. ನಿಮ್ಮ ಮಾತೃಭಾಷೆ ನಿಮಗೆ ಮೊದಲು ಗೊತ್ತಿರಬೇಕು. ನಿರರ್ಗಳವಾಗಿ ಮಾತನಾಡಲು, ಬರೆಯಲು ಬರಬೇಕು' ಎಂದು ನಟ ಧನುಷ್ ವಿದ್ಯಾರ್ಥಿಗಳಿಗೆ ಸಲಹೆ ಕೊಟ್ಟರು.

ಬರೆಯಲು ಬರ್ಲೇ ಬೇಕು

'ತಮಿಳು ಮಾತನಾಡಲು ಬರದೇ ಇರುವುದು ಹೆಮ್ಮೆಯ ವಿಚಾರ ಅಲ್ವೇ ಅಲ್ಲ. ಅದೊಂದು ಭಾಷೆಗೆ ಮಾಡುವ ಅವಮಾನ. ಇಂತಹ ವಿಚಾರದಲ್ಲಿ ನಾನು ನನ್ನ ಶಾಲಾ ದಿನದ ಟೀಚರ್​ ಅನ್ನು ಎಂದಿಗೂ ನೆನಪು ಮಾಡಿಕೊಳ್ಳುತ್ತೇನೆ. ನೀವು ಎಷ್ಟೇ ಎತ್ತರಕ್ಕೆ ಹೋದರು ಸಹ ದಯವಿಟ್ಟು ತಮಿಳನ್ನು ಮರೆಯಬೇಡಿ' ಎಂದು ಧನುಷ್​ ಹೇಳಿದರು.

ಹಿಂದಿ ಹೇರಿಕೆ ವಿರುದ್ಧ ಐತಿಹಾಸಿಕ ಹೋರಾಟ

1937 ಮತ್ತು 1965ರಲ್ಲಿ ಹಿಂದಿ ಹೇರಿಕೆ ವಿರುದ್ಧ ಐತಿಹಾಸಿಕ ಆಂದೋಲನ ನಡೆಸಿದ್ದು ತಮಿಳುನಾಡು. ಸಿ ರಾಜಗೋಪಾಲಾಚಾರ್ಯರು ಇದಕ್ಕೆ ನೇತೃತ್ವವಹಿಸಿದವರು. ಮದ್ರಾಸ್​ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಹಿಂದಿ ಕಡ್ಡಾಯಗೊಳಿಸಿದಾಗ ಈ ಹೋರಾಟ ಶುರುವಾಗಿ ಹಿಂಸಾಚಾರಕ್ಕೆ ತಿರುಗಿತ್ತು. ಇಂದಿಗೂ ಇಲ್ಲಿನ ಜನ ಸಂಸ್ಕೃತಿ ಹಾಗೂ ಭಾಷೆಯ ಆಸ್ಮಿತೆಯನ್ನು ಬಿಟ್ಟುಕೊಡೋದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net