ಆಗಸ್ಟ್ 9ರಂದು ವಿಕ್ರಮ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೋತಿಯೊಂದಿಗಿನ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಈ ಸಂಬಂಧ ಮಾಧ್ಯಮ ವರದಿಗಳು ಹೊರಬಿದ್ದ ಬೆನ್ನಲ್ಲೇ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಆದರೂ, ಮಾಧ್ಯಮಗಳಲ್ಲಿ ಸಾಕಷ್ಟು ವರದಿಯಾಗಿದ್ದು, ಇದು ಪ್ರಾಣಿ ಪ್ರಿಯಯ ಆಕ್ರೋಶಕ್ಕೆ ಗುರಿಯಾಗಿದೆ. ವೈರಲ್ ವಿಡಿಯೋ ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ವಿಕ್ರಮ್ ಅವರ ಮಗಳ ಮಾವನ ವಿರುದ್ಧ ತನಿಖೆ ಆರಂಭಿಸಿದೆ.