ಸೂಪರ್​ ಹಿಟ್​ ಗಿಲ್ಲಿ ಚಿತ್ರದಲ್ಲಿ ವಿಜಯ್ ತಂಗಿಯಾಗಿ ನಟಿಸಿದ್ದ ನಟಿ ನ್ಯಾನ್ಸಿ ಜೆನಿಫರ್​ ಅದ್ಧೂರಿ ಮದುವೆ..! Actress Nancy

ನ್ಯಾನ್ಸಿ ಜೆನಿಫರ್ ಅವರು ಕಾರ್ತಿಕ್ ಎಂಬುವವರೊಂದಿಗೆ ಸಪ್ತಪದಿ ತುಳಿದಿದ್ದು, ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ (ECR) ಸುಂದರ ಬೀಚ್ ರೆಸಾರ್ಟ್‌ವೊಂದರಲ್ಲಿ ಈ ವಿವಾಹ ಸಮಾರಂಭವು ಅತ್ಯಂತ ಖಾಸಗಿಯಾಗಿ ನೆರವೇರಿದೆ.
Actress Nancy
ಸೂಪರ್​ ಹಿಟ್​ ಗಿಲ್ಲಿ ಚಿತ್ರದಲ್ಲಿ ವಿಜಯ್ ತಂಗಿಯಾಗಿ ನಟಿಸಿದ್ದ ನಟಿ ನ್ಯಾನ್ಸಿ ಜೆನಿಫರ್​ ಅದ್ಧೂರಿ ಮದುವೆ..!
Published on: 

ಚೆನ್ನೈ: ತಮಿಳು ಚಿತ್ರರಂಗದ ಸಾರ್ವಕಾಲಿಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ ದಳಪತಿ ವಿಜಯ್ ಅಭಿನಯದ 'ಗಿಲ್ಲಿ' (Ghilli) ಚಿತ್ರವನ್ನು ಸಿನಿಪ್ರಿಯರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಚಿತ್ರದಲ್ಲಿ ವಿಜಯ್ ಅವರ ತಂಗಿ 'ಭುವನಾ' ಪಾತ್ರದಲ್ಲಿ ನಟಿಸಿ ಕನ್ನಡಿಗರು, ತಮಿಳರು ಹಾಗೂ ಮಲಯಾಳಿ ಪ್ರೇಕ್ಷಕರ ಮನೆಮಾತಾಗಿದ್ದ ನಟಿ ನ್ಯಾನ್ಸಿ ಜೆನಿಫರ್ ( Actress Nancy ) ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಸಹಜ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ನ್ಯಾನ್ಸಿ ಅವರ ಮದುವೆ ಸುದ್ದಿ ಹೊರಬೀಳುತ್ತಿದ್ದಂತೆಯೇ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ನವಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ನ್ಯಾನ್ಸಿ ಜೆನಿಫರ್ ಅವರು ಕಾರ್ತಿಕ್ ಎಂಬುವವರೊಂದಿಗೆ ಸಪ್ತಪದಿ ತುಳಿದಿದ್ದು, ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ (ECR) ಸುಂದರ ಬೀಚ್ ರೆಸಾರ್ಟ್‌ವೊಂದರಲ್ಲಿ ಈ ವಿವಾಹ ಸಮಾರಂಭವು ಅತ್ಯಂತ ಖಾಸಗಿಯಾಗಿ ನೆರವೇರಿದೆ.

Also Read
ದಕ್ಷಿಣ ಕೊರಿಯಾದ ಯುವತಿ ಜತೆ ಮಹೇಶ್​ ಬಾಬು ಸೋದಳಿಯನ ನಿಶ್ಚಿತಾರ್ಥ: ಆದ್ರೆ ಸ್ಟಾರ್​ ನಟ ಭಾಗಿಯಾಗಿಲ್ಲ ಏಕೆ? Mahesh Babu Nephew
Actress Nancy

ಕೇವಲ ಕುಟುಂಬದ ಆಪ್ತರು, ಸಂಬಂಧಿಕರು ಮತ್ತು ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ ಈ ಶುಭ ಕಾರ್ಯ ನಡೆದಿದೆ. ಸದ್ಯ ನವದಂಪತಿಯ ಮದುವೆಯ ಸುಂದರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿರುವ ನ್ಯಾನ್ಸಿ ಅವರ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನ್ಯಾನ್ಸಿ ಜೆನಿಫರ್, ತಮಿಳಿನ ಸ್ಟಾರ್ ನಟರಾದ ದಳಪತಿ ವಿಜಯ್ ಮತ್ತು ಸೂರ್ಯ ಒಟ್ಟಿಗೆ ನಟಿಸಿದ್ದ 'ನೇರುಕ್ಕು ನೇರ್' (Nerukku Ner) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಬಾಲ್ಯದಿಂದಲೇ ತಮ್ಮ ಪ್ರತಿಭೆಯಿಂದ ಗಮನ ಸೆಳೆದಿದ್ದ ಅವರಿಗೆ 2004ರಲ್ಲಿ ತೆರೆಕಂಡ 'ಗಿಲ್ಲಿ' ಸಿನಿಮಾ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟಿತು. ಈ ಚಿತ್ರದಲ್ಲಿ ವಿಜಯ್ ಮತ್ತು ನ್ಯಾನ್ಸಿ ನಡುವಿನ ಅಣ್ಣ-ತಂಗಿಯ ಬಾಂಧವ್ಯದ ದೃಶ್ಯಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದವು.

ಕೇವಲ 'ಗಿಲ್ಲಿ' ಮಾತ್ರವಲ್ಲದೆ, ನ್ಯಾನ್ಸಿ ಅವರು ತಮಿಳು ಚಿತ್ರರಂಗದ ಹಲವು ಜನಪ್ರಿಯ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. 'ತೋಳಾ' (Thozha), 'ಉನಕ್ಕುಮ್ ಎನಕ್ಕುಮ್' (Unakkum Enakkum), 'ಫೆಬ್ರವರಿ 14', 'ಜಾಂಬವಾನ್' ಮತ್ತು 'ತೀಯಾ ವೇಲೈ ಸೆಯ್ಯನುಮ್ ಕುಮಾರು' ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

Also Read
ಮೂವರು ಅಮಾಯಕರ ಪ್ರಾಣ ತೆಗೆದು ದೌಲತ್ತಿನ ಮಾತುಗಳನ್ನಾಡಿದವನಿಗೆ ಕೇವಲ 36 ದಿನಗಳಲ್ಲೇ ಜಾಮೀನು! Mini Cooper accident
Actress Nancy

ಇದೀಗ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿರುವ ನಟಿ ನ್ಯಾನ್ಸಿ ಮತ್ತು ಕಾರ್ತಿಕ್ ದಂಪತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸುಖಮಯ ದಾಂಪತ್ಯ ಜೀವನಕ್ಕೆ ಶುಭ ಹಾರೈಸುತ್ತಿದ್ದಾರೆ, (ಏಜೆನ್ಸೀಸ್​).