ಕಚ್ಚಿದ ನಾಗರ ಹಾವು ಸತ್ತೇಹೋಯ್ತು..ಕಚ್ಚಿಸಿಕೊಂಡ ವ್ಯಕ್ತಿ ಬದುಕಿದ..! ಕಾರಣವಿದೇ ನೋಡಿ..

snakes
Published on

ಭೋಪಾಲ್​: ನಾಗರ ಹಾವು ಕಚ್ಚಿ ಮನುಷ್ಯ ಸತ್ತಿರುವುದನ್ನು ಕಂಡಿದ್ದೇವೆ. ಆದರೆ ಮನುಷ್ಯ ಮನುಷ್ಯ ಬದುಕಿಕೊಂಡು ಹಾವು ಸತ್ತಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸದ್ಯಕ್ಕೆ ಇದರ ವೀಡಿಯೋ ವೈರಲ್​ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದೆ . ಮಧ್ಯಪ್ರದೇಶದ ಸಾಗರ್‌ನ ನಾರ್ಯವಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳೀಯ ಚಂದ್ರಕುಮಾರ್ ಎಂಬ ವ್ಯಕ್ತಿ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಗಳಿಗೆ ಬಿಡುತ್ತಾರೆ. ಜುಲೈ 18ರಂದು ಅವರಿಗೆ ದೂರವಾಣಿ ಕರೆ ಬಂದಿತ್ತು. ನಾರ್ಯವಲ್ಲಿ ಮುಖ್ಯರಸ್ತೆಯಲ್ಲಿ ಹಾವು ಇದೆ ಎಂದು ಸ್ಥಳೀಯರು ಕರೆ ಮಾಡಿದ್ದಾರೆ. ಚಂದ್ರಕುಮಾರ್ ಕೂಡಲೇ ಸ್ಥಳಕ್ಕೆ ಆಗಮಿಸಿದ್ದು, ಸುಮಾರು 5 ಅಡಿ ಉದ್ದದ ನಾಗರಹಾವನ್ನು ಗುರುತಿಸಿದ್ದಾರೆ. ಅಂತಿಮವಾಗಿ ಅದನ್ನು ಹಿಡಿಯುವಲ್ಲಿ ಯಶಸ್ವಿಯೂ ಆಗಿದ್ದಾರೆ. ಆದರೆ ಹಾವನ್ನು ಹಿಡಿಯುವಾಗ ಅದು ಅವರ ಬೆರಳಿಗೆ ಕಚ್ಚಿದೆ.

ಸ್ಥಳೀಯರು ಚಂದ್ರಕುಮಾರ್ ಅವರನ್ನು ಕೂಡಲೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಪಡೆದಿರುವ ಚಂದ್ರಕುಮಾರ್ ಸಂಪೂರ್ಣ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಕಚ್ಚಿದ ಹಾವು ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದು ನಿಜವೇ ಎಂದು ನೋಡಿದರೆ, ಹಾವನ್ನು ಹಿಡಿದರೂ ಗಾಳಿಯಾಡದ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಇಟ್ಟಿದ್ದರು. ಸ್ವಲ್ಪ ಸಮಯದ ನಂತರ ಆಮ್ಲಜನಕದ ಕೊರತೆಯಿಂದ ಹಾವು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಈ ಸುದ್ದಿ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲೂ ಇದರ ವೀಡಿಯೋ ವೈರಲ್ ಆಗಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net