

ಮಂಗಳೂರು : ಸ್ಯಾಂಡಿಸ್ ಕಂಪನಿ ವತಿಯಿಂದ ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲ್ಮ್ ಅವಾರ್ಡ್- 2025 ಕಾರ್ಯಕ್ರಮ ಜೂ. 22ರಂದು ಮಧ್ಯಾಹ್ನ 3ಕ್ಕೆ ಮೂಲ್ಕಿ ಕೊಳ್ನಾಡ್‌ನ ಸುಂದರರಾಮ ಶೆಟ್ಟಿ ಕನ್ವೆನ್ಶನಲ್ ಸೆಂಟರ್‌ನಲ್ಲಿ ನಡೆಯಲಿದೆ.
2024 ಜನವರಿಯಿಂದ ಡಿಸೆಂಬರ್‌ವರೆಗೆ ತೆರೆಕಂಡಿರುವ ಒಟ್ಟು 8 ಸಿನಿಮಾಗಳು ಸ್ಪರ್ಧೆಗೆ ಬಂದಿವೆ. ಒಟ್ಟು 30 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಹಿರಿಯ ನಟಿ ರೋಹಿಣಿ ಜಗರಾಮ್ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಲಾಗುವುದು ಎಂದು ಕಾರ್ಯಕ್ರಮದ ಆಯೋಜಕ ಸಂದೇಶ್‌ರಾಜ್ ಬಂಗೇರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಗೀತ ನಿರ್ದೇಶಕ ಗುರುಕಿರಣ್, ಕನ್ನಡ ಸಿನಿಮಾ ತಾರೆಯರಾದ ರಚನಾ ರೈ, ವೃಂದಾ ಆಚಾರ್ಯ, ರೂಪೇಶ್ ಶೆಟ್ಟಿ, ಪೃಥ್ವಿ ಅಂಬರ್, ಸೋನಲ್ ಮೊಂತೆರೊ ಹಾಗೂ ತುಳು ಚಿತ್ರರಂಗದ ನಿರ್ಮಾಪಕರು, ನಟ ನಟಿಯರು, ಗಣ್ಯರು ಭಾಗವಹಿಸಲಿದ್ದಾರೆ. ನೃತ್ಯ, ರಸಮಂಜರಿ ಹಾಗೂ ಕಾಮಿಡಿ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಅವರು ತಿಳಿಸಿದರು.
ನಟ ವಿನೀತ್‌ಕುಮಾರ್. ಸಂಘಟಕರಾದ ಯಶ್‌ರಾಜ್, ಉದಯ ಬಳ್ಳಾಲ್, ಪ್ರೀತಮ್, ಸಾತ್ವಿಕ್ ಪೂಜಾರಿ ಉಪಸ್ಥಿತರಿದ್ದರು.