ಟೆಸ್ಟ್​ ಕ್ರಿಕೆಟ್​ನಲ್ಲಿ ಆಕ್ರಮಣಕಾರಿ ಆಟ ಮುಂದುವರಿಸುವ ಸುಳಿವು ನೀಡಿದ ಕೋಚ್​ ಗೌತಮ್​ ಗಂಭೀರ್​!

web gam
Published on

ಬೆಂಗಳೂರು: ಭಾರತ ತಂಡದ ಬ್ಯಾಟರ್​ಗಳು ದೊಡ್ಡ ರಿಸ್ಕ್​ ತೆಗೆದುಕೊಳ್ಳುವುದನ್ನು ನಾನು ತಡೆಯುವುದಿಲ್ಲ. ಯಾಕೆಂದರೆ ದೊಡ್ಡ ರಿಸ್ಕ್​ಗಳನ್ನು ತೆಗೆದುಕೊಂಡಾಗ, ಪ್ರತಿಲವೂ ದೊಡ್ಡದಾಗಿರುತ್ತವೆ ಎಂದು ಗಂಭೀರ್​ ಹೇಳಿದರು. ಈ ಮೂಲಕ ಬಾಂಗ್ಲಾ ವಿರುದ್ಧದ ಕಾನ್ಪುರ ಟೆಸ್ಟ್​ನಲ್ಲಿ ಭಾರತ ತಂಡ ಆಡಿದ ಆಕ್ರಮಣಕಾರಿ ಆಟವನ್ನು ಮುಂದುವರಿಸುವ ಸುಳಿವು ನೀಡಿದರು.

"ಒಂದೇ ದಿನದಲ್ಲಿ 400-450 ರನ್​ ಗಳಿಸುವ ತಂಡ ನಮ್ಮದಾಗಬೇಕೆಂದು ಬಯಸುತ್ತೇವೆ. ಅದೇ ರೀತಿ ಡ್ರಾ ಸಾಧಿಸುವ ಅಗತ್ಯಬಿದ್ದರೆ 2 ದಿನಗಳ ಕಾಲ ಬ್ಯಾಟಿಂಗ್​ ನಡೆಸಬಲ್ಲ ತಂಡವೂ ನಮ್ಮದಾಗಬೇಕು. ಪರಿಸ್ಥಿತಿಗೆ ತಕ್ಕಂತೆ ಒಗ್ಗಿಕೊಳ್ಳುವುದು ಮುಖ್ಯ. ನಾವು ರಿಸ್ಕ್​ ತೆಗೆದುಕೊಂಡೇ ಆಡುವಾಗ ವೈಲ್ಯಗಳ ಅಪಾಯವೂ ಇದ್ದೇ ಇರುತ್ತದೆ. ನಾವು ಕೆಲವೊಮ್ಮೆ 100 ರನ್​ಗಳಿಗೆ ಆಲೌಟ್​ ಆಗಿಬಿಡಬಹುದು. ಅದನ್ನೂ ಒಪ್ಪಿಕೊಳ್ಳುವೆವು. ಆದರೆ ದೊಡ್ಡ ರಿಸ್ಕ್​ ತೆಗೆದುಕೊಂಡು ಆಡುವ ಆಟಗಾರರಿಗೆ ನಮ್ಮ ಬೆಂಬಲ ಇದ್ದೇ ಇರುತ್ತದೆ. ಯಾವುದೇ ಪರಿಸ್ಥಿತಿಯಲ್ಲಾದರೂ ಲಿತಾಂಶ ಪಡೆದುಕೊಳ್ಳುವುದು ನಮ್ಮ ಗುರಿ' ಎಂದು ಗಂಭೀರ್​ ತಿಳಿಸಿದರು.

*ನ್ಯೂಜಿಲೆಂಡ್​ ಎದುರು ನಮಗೆ ಸಂಪೂರ್ಣ ಭಿನ್ನ ಸವಾಲು ಎದುರಾಗಲಿದೆ. ಅವರಲ್ಲೂ ಉತ್ತಮ ತಂಡವಿದೆ, ಗುಣಮಟ್ಟದ ಆಟಗಾರರು ಇದ್ದಾರೆ. ಮುಂಬರುವ ಮೂರು ಟೆಸ್ಟ್​ಗಳು ಅತ್ಯಂತ ಸವಾಲಿನಿಂದ ಕೂಡಿರಲಿವೆ. ನಾವು ಎದುರಾಳಿಯನ್ನು ಗೌರವಿಸುತ್ತೇವೆ. ಆದರೆ ಯಾರಿಗೂ ಭಯ ಪಡುವುದಿಲ್ಲ. ನಾವು ದೇಶಕ್ಕಾಗಿ ಪ್ರತಿ ಪಂದ್ಯವನ್ನೂ ಗೆಲ್ಲಲು ಪ್ರಯತ್ನಿಸುತ್ತೇವೆ.

| ಗೌತಮ್​ ಗಂಭೀರ್​, ಟೀಮ್​ ಇಂಡಿಯಾ ಕೋಚ್​

ಕೊಹ್ಲಿ ಪರ ಗಂಭೀರ್​ ಬ್ಯಾಟಿಂಗ್​

ಇತ್ತೀಚೆಗೆ ಬಾಂಗ್ಲಾ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಲಯ ಕಂಡುಕೊಳ್ಳಲು ಪರದಾಡಿದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಪರ ನಿಂತಿರುವ ಕೋಚ್​ ಗೌತಮ್​ ಗಂಭೀರ್​, ಪದಾರ್ಪಣೆಯ ವೇಳೆ ಹೊಂದಿದ್ದ ರನ್​ ಹಸಿವನ್ನೇ ಕೊಹ್ಲಿ ಈಗಲೂ ಉಳಿಸಿಕೊಂಡಿದ್ದಾರೆ. ಅವರೊಬ್ಬ ವಿಶ್ವ ದರ್ಜೆಯ ಕ್ರಿಕೆಟಿಗ. ಪ್ರತಿ ಪಂದ್ಯದ ಬಳಿಕ ಅವರ ನಿರ್ವಹಣೆಯನ್ನು ಅಳೆಯುವ ಅಗತ್ಯವಿಲ್ಲ ಎಂದು ಹೇಳಿದರು. ಕಿವೀಸ್​ ವಿರುದ್ಧ ಟೆಸ್ಟ್​ ಸರಣಿಗೆ ಪೂರ್ವಭಾವಿಯಾಗಿ ಭಾರತ ತಂಡದ ಅಭ್ಯಾಸದ ನಡುವೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್​, ಕಿವೀಸ್​ ವಿರುದ್ಧದ 3 ಟೆಸ್ಟ್​ಗಳಲ್ಲಿ, ನಂತರ ಆಸ್ಟ್ರೆಲಿಯಾದಲ್ಲಿ ಕೊಹ್ಲಿ ಮಿಂಚುವ ವಿಶ್ವಾಸ ವ್ಯಕ್ತಪಡಿಸಿದರು. "ಕ್ರೀಡೆ ಎಂದ ಮೇಲೆ ವೈಲ್ಯಗಳೂ ಇದ್ದೇ ಇರುತ್ತವೆ. ಪ್ರತಿದಿನವೂ ಅತ್ಯುತ್ತಮವಾಗಿರುವುದಿಲ್ಲ. ಆಟಗಾರರನ್ನು ಬೆಂಬಲಿಸುತ್ತಿರುವುದು ನನ್ನ ಕೆಲಸ. ಅತ್ಯುತ್ತಮ ಆಡುವ 11ರ ಬಳಗವನ್ನು ಆರಿಸಲು ನಾವು ಪ್ರಯತ್ನಿಸುತ್ತೇವೆ. ಯಾರನ್ನೂ ಕೈಬಿಡುವುದು ನನ್ನ ಕೆಲಸವಲ್ಲ. ಮುಂಬರುವ 8 ಟೆಸ್ಟ್​ಗಳಲ್ಲಿ ಉತ್ತಮ ನಿರ್ವಹಣೆ ತೋರುವ ತುಡಿತ ಎಲ್ಲರಲ್ಲೂ ಇದೆ' ಎಂದು ಗಂಭೀರ್​ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net