ಸಿಎಂ ಯಡಿಯೂರಪ್ಪ ಸಿಟಿ ರೌಂಡ್ಸ್! ಎಲ್ಲೆಲ್ಲಿಗೆ ಭೇಟಿ - ಇಲ್ಲಿದೆ ವಿವರ

yeddi
ಆನಂದ್​ರಾವ್ ವೃತ್ತದಲ್ಲಿ ರೋಡ್ ಟ್ಯಾಪಿಂಗ್ ಕಾಮಗಾರಿ ವೀಕ್ಷಣೆ
Published on

ಬೆಂಗಳೂರು : ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಚಿವರುಗಳೊಂದಿಗೆ ಸಿಟಿ ರೌಂಡ್ಸ್​ ನಡೆಸಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ್ದಾರೆ. ಸಚಿವರು ಮತ್ತು ಶಾಸಕರೊಂದಿಗೆ ವೋಲ್ವೊ ಬಸ್ಸಿನಲ್ಲಿ, ಬೆಂಗಳೂರಿನ ವಿವಿಧೆಡೆಗೆ ಭೇಟಿ ನೀಡುತ್ತಿದ್ದಾರೆ.

ಮೊದಲಿಗೆ ಆನಂದ್​ ರಾವ್ ವೃತ್ತದಲ್ಲಿ ನಡೆಯುತ್ತಿರುವ ರೋಡ್ ಟ್ಯಾಪಿಂಗ್ ಕಾಮಗಾರಿಯನ್ನು ಅವರು ವೀಕ್ಷಿಸಿದರು. ನಂತರ ನಾಯಂಡಹಳ್ಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ಆರ್.ಅಶೋಕ, ಅರವಿಂದ ಲಿಂಬಾವಳಿ, ಭೈರತಿ ಬಸವರಾಜ್, ಕೆ.ಗೋಪಾಲಯ್ಯ ಹಾಗೂ ಬಿಬಿಎಂಪಿ ಅಧಿಕಾರಿಗಳು ಸಿಎಂಗೆ ಸಾಥ್ ನೀಡುತ್ತಿದ್ದಾರೆ.

ಮಳೆಯಲ್ಲಿಯೇ ಶಿವಾಜಿನಗರ ಕಮರ್ಷಿಯಲ್ ಸ್ಟ್ರೀಟ್ ವಿಸಿಟ್
ಮಳೆಯಲ್ಲಿಯೇ ಶಿವಾಜಿನಗರ ಕಮರ್ಷಿಯಲ್ ಸ್ಟ್ರೀಟ್ ವಿಸಿಟ್

ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ಹಾಗೂ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿರುವ ಸಿಎಂ ಬಿಎಸ್​ವೈ ಅವರ ಬೆಂಗಳೂರು ರೌಂಡ್ಸ್​ನ ರೂಟ್ ಮ್ಯಾಪ್ ಹೀಗಿದೆ:-

* ಕೃಷ್ಣದಿಂದ ಆನಂದ್ ರಾವ್ ಸರ್ಕಲ್ - ಆನಂದ್ ರಾವ್ ಸರ್ಕಲ್​ನಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಟೀಲ್ ಬ್ರಿಡ್ಜ್ ವೀಕ್ಷಣೆ

* ಆನಂದ್ ರಾವ್ ಸರ್ಕಲ್​​ನಿಂದ ಗಾಂಧಿನಗರ - ಗಾಂಧಿನಗರದಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ವೀಕ್ಷಣೆ

* ಗಾಂಧಿನಗರದಿಂದ ಕೆ.ಜಿ.ರೋಡ್, ಗುಬ್ಬಿ ತೋಟದಪ್ಪ ರೋಡ್ ಮ‌ೂಲಕ ನಾಯಂಡಹಳ್ಳಿ ಜಂಕ್ಷನ್ - ನಾಯಂಡಹಳ್ಳಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ವೀಕ್ಷಣೆ

* ನಾಯಂಡಹಳ್ಳಿಯಿಂದ ಔಟರ್ ರಿಂಗ್ ರೋಡ್, ರಾಜಕುಮಾರ್ ಮೆಮೋರಿಯಲ್, ಯಶವಂತಪುರ, ಮೇಕ್ರಿ ಸರ್ಕಲ್, ಹೈಗ್ರೌಂಡ್ಸ್ ಮೂಲಕ ಪ್ಲಾನಟೋರಿಯಂ ರಸ್ತೆ - ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ಲಾನಟೋರಿಯಂ ಹಾಗೂ ಇನ್ಫಾಟ್ರಿ ರಸ್ತೆ ವೀಕ್ಷಣೆ

* ಇನ್ಫಾಂಟ್ರಿ ರಸ್ತೆಯಿಂದ ಕಮರ್ಷಿಯಲ್ ಸ್ಟ್ರೀಟ್​ - ಕಮರ್ಶಿಯಲ್ ಸ್ಟ್ರೀಟ್ ಸ್ಟಾರ್ಟ್ ಸಿಟಿ ಯೋಜನೆ ವೀಕ್ಷಣೆ

* ಕಮರ್ಷಿಯಲ್ ಸ್ಟ್ರೀಟಿನಿಂದ ಸರ್ ಸಿ.ವಿ.‌ರಾಮನ್ ಹಾಸ್ಪಿಟಲ್ ರೋಡ್ - 1.90 ಕಿಲೋ ಮೀಟರ್ ಸಿವಿ ರಾಮನ್ ಹಾಸ್ಪಿಟಲ್ ರಸ್ತೆಯ ವೈಟ್ ಟಾಪಿಂಗ್ ವರ್ಕ್ ವೀಕ್ಷಣೆ

* ಸರ್ ಸಿ.ವಿ.ರಾಮನ್ ಹಾಸ್ಪಿಟಲ್ ರಸ್ತೆಯಿಂದ ಬ್ರಿಗೇಡ್ ರಸ್ತೆ - ಸ್ಟಾರ್ಟ್ ಸಿಟಿ ಯೋಜನೆಯಡಿಯ ಬ್ರಿಗೇಡ್ ರಸ್ತೆ ಕಾಮಗಾರಿ ವೀಕ್ಷಣೆ

* ಬ್ರಿಗೇಡ್ ರಸ್ತೆಯಿಂದ ಶಾಂತಿನಗರ ಬಿಎಂಟಿಸಿ ಬಸ್ ಸ್ಟಾಪ್ - ಶಾಂತಿನಗರದಲ್ಲಿ ನಡೆಯುತ್ತಿರುವ ವಾಟರ್ ವೇ ಪ್ರಾಜೆಕ್ಟ್ ವೀಕ್ಷಣೆ

* ಶಾಂತಿನಗರದಿಂದ ರಾಜಾರಾಂ ಮೋಹನ್ ರಾಯ್ ರಸ್ತೆ ಮೂಲಕ ಕಸ್ತೂರ್ಬಾ ರಸ್ತೆ - ಕಸ್ತೂರ್ಬಾ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ವರ್ಕ್ ವೀಕ್ಷಣೆ

* ಕಸ್ತೂರ್ಬಾ ರಸ್ತೆಯಿಂದ ರಾಜಭವನ ರೋಡ್, ಪ್ಯಾಲೇಸ್ ರಸ್ತೆ, ಕಾರ್ಮಲ್ ಕಾಲೇಜ್ ಮಾರ್ಗದ ಮೂಲಕ ಕೃಷ್ಣ ಗೆ ವಾಪಸ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net