More

    ರೈತರ ಕೃಷಿ ಉತ್ಪನ್ನಗಳನ್ನು ನೇರವಾಗಿ ಖರೀದಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

    ಬೆಂಗಳೂರು: ಲಾಕ್​ಡೌನ್​ನಿಂದ ರೈತರ ಬೆಳೆಗಳು ಮಾರಾಟವಾಗದ ಹಿನ್ನೆಲೆಯಲ್ಲಿ ಸರ್ಕಾರವೇ ನೇರವಾಗಿ ರೈತರಿಂದ ಉತ್ಪನ್ನ ಖರೀದಿಸಿ ಅದನ್ನು ಶೈತ್ಯಾಗಾರದಲ್ಲಿ ಸಂಗ್ರಹಿಸಿ ನಂತರ ಮಾರಾಟ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಅದಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.
    ಅಧಿಕ ದಿನ ಸಂಗ್ರಹಿಸಲು ಸಾಧ್ಯವಾಗದ ಹಣ್ಣು, ಹೂ ಹಾಗೂ ತರಕಾರಿಯನ್ನು ಖರೀದಿಸಿ ನೆರೆ ರಾಜ್ಯ ಹಾಗೂ ವಿದೇಶಗಳಿಗೆ ರವಾನಿಸಬೇಕು.

    ಕುಡಿಯುವ ನೀರು ತೊಂದರೆ ಇರುವ ಪ್ರದೇಶಗಳಿಗೆ ತುರ್ತಾಗಿ ಉತ್ತಮ ಗುಣಮಟ್ಟದ ಶುದ್ಧವಾದ ನೀರು ಪೂರೈಸಬೇಕು. ಕರೊನಾ ವೈರಸ್​ ಹಾವಳಿ ಹಿನ್ನೆಲೆಯಲ್ಲಿ ಗುಣಮಟ್ಟದ ಹಾಗೂ ಶುದ್ಧ ನೀರನ್ನೇ ಪೂರೈಸಬೇಕು. ಕುಡಿಯುವ ನೀರು ಪೂರೈಕೆಗಾಗಿ ಗ್ರಾಮಮಟ್ಟದಲ್ಲಿ ರಚನೆಯಾಗಿರುವ ಟಾಸ್ಕ್​ಪೋರ್ಸ್​ ಚುರುಕಿನಿಂದ ಕೆಲಸ ಮಾಡಬೇಕು ಎಂದು ಅವರು ಸೂಚನೆ ನೀಡಿದರು.

    ಬಳಸಿಕೊಳ್ಳದ ಸರ್ಕಾರಿ ಜಾಗವನ್ನು ಹಿಂದಕ್ಕೆ ಪಡೆಯಿರಿ: ನಗರಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಸರ್ಕಾರಿ ಜಾಗವನ್ನು ಗುತ್ತಿಗೆ ಪಡೆದು ಗುತ್ತಿಗೆ ನಿಯಮ ಉಲ್ಲಂಘಿಸಿದ್ದರೇ ಅವುಗಳನ್ನು ಹಿಂದಕ್ಕೆ ಪಡೆಯಿರಿ ಎಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ದೇಶಿಯ ಪ್ರವಾಸಿಗರನ್ನು ಆಕರ್ಷಿಸಿ: ಕರೊನಾ ವೈರಸ್​ ಹಾವಳಿ ಹಿನ್ನೆಲೆಯಲ್ಲಿ ವಿದೇಶಿ ಪ್ರವಾಸಿಗರ ಭೇಟಿ ಕ್ಷೀಣವಾಗಿರುವುದರಿಂದ ಪ್ರವಾಸಿ ಕ್ಷೇತ್ರಗಳಲ್ಲಿ ವೈರಸ್​ ಹಾವಳಿ ಇಲ್ಲದಿರುವುದನ್ನು ಹೆಚ್ಚು ಪ್ರಚಾರ ಮಾಡಿ ದೇಶಿಯ ಪ್ರವಾಸಿಗರನ್ನು ಆಕರ್ಷಣೆ ಮಾಡಬೇಕು.

    ಸಾರಿಗೆ ಸಂಸ್ಥೆ ಬಸ್​ಗಳನ್ನು ಸರಕು ಸಾಗಣೆಗೆ ಬಳಸಿಕೊಂಡು ಆದಾಯ ಬರುವಂತೆ ನೋಡಿಕೊಳ್ಳಿ. ಖಾಸಗಿ ಸಂಸ್ಥೆಗಳಿಗೆ ಬಸ್​ಗಳನ್ನು ಬಾಡಿಗೆ ನೀಡಿ, ಅಣೆಕಟ್ಟೆಗಳಲ್ಲಿ ಅಧಿಕ ನೀರು ಸಂಗ್ರಹವಾಗಿದ್ದರೆ ಕೃಷಿ ಹಾಗೂ ಕುಡಿಯುವ ನೀರಿಗೆ ಬಳಸಿಕೊಳ್ಳಿ. ಕರೊನಾ ವೈರಸ್​ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಗುತ್ತಿಗೆ ವೈದ್ಯರ ಸಂಬಳ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದೇ ವೇಳೆ ತಿಳಿಸಿದರು.

    ಪತ್ರಕರ್ತ ಅರ್ನಬ್​ ಹಲ್ಲೆಗೆ ಯತ್ನಿಸಿದ ಆರೋಪಿಗಳಿಬ್ಬರನ್ನು ಬಂಧಿಸಿದ ಮುಂಬೈ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts