

ಬೆಂಗಳೂರು: ಅನ್ನಭಾಗ್ಯಕ್ಕೆ ಬೇಕಾದ ಹೆಚ್ಚುವರಿ ಅಕ್ಕಿ ರಾಜ್ಯದಲ್ಲಿ ಲಭ್ಯವಿದ್ದರೆ ಟೆಂಡರ್ ಮುಖೇನ ಖರೀದಿಸಲಾಗುವುದು. ರಾಜ್ಯದ ರೈತರಿಗೆ ನೆರವಾಗಬೇಕು ಎಂಬ ಉದ್ದೇಶವಿದೆ. ಆದರೆ ರಾಜ್ಯದಲ್ಲಿ ಪಡಿತರದಾರರಿಗೆ ವಿತರಿಸಲು ಅಗತ್ಯವಿರುವ ಅಕ್ಕಿ ಕೊರತೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎಷ್ಟೇ ತೊಂದರೆ ಕೊಟ್ಟರೂ ಭರವಸೆ ಪ್ರಕಾರ ಬಡವರಿಗೆ ಅಕ್ಕಿ ವಿತರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದರು.
ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆಗೆ ರಾಜ್ಯದ ಮುಖ್ಯಕಾರ್ಯದರ್ಶಿ ಸಂಪರ್ಕಿಸಿದಾಗ ಅಕ್ಕಿ ಇಲ್ಲವೆಂದು ಹೇಳಿದ್ದಾರೆ. ಪಂಜಾಬ್ ನಿಂದ ಕೊಡಿಸಲು ಸಿದ್ಧವೆಂದು ಆಮ್ ಆದ್ಮಿ ಪಾರ್ಟಿಯವರು ಹೇಳಿದ್ದಾರೆ ಎಂದಾದರೆ ನಾನೇ ಮತ್ತೊಮ್ಮೆ ಪಂಜಾಬ್ ಸಿಎಂ ಜತೆಗೆ ಮಾತನಾಡುವೆ ಎಂದು ಸಿದ್ದರಾಮಯ್ಯ ಉತ್ತರಿಸಿದರು.
ಅಕ್ಕಿ ಬದಲಿಗೆ ರಾಗಿ, ಜೋಳ ವಿತರಿಸಲು ಕೆಲವರು ಸಲಹೆ ನೀಡಿದ್ದಾರೆ. ಆರು ತಿಂಗಳಿಗೆ ತಲಾ ಎರಡು ಕೆಜಿ ವಿತರಿಸಲು ಬೇಕಾದ ದಾಸ್ತಾನಿದ್ದು, ಇನ್ನೂ ಮೂರು ಕೆಜಿ ಕೊರತೆ ಬೀಳುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಏಜೆನ್ಸಿಗಳಾದ ಎನ್ ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರದಿಂದ ಕೊಟೇಷನ್ ಪಡೆಯಲು ತೀರ್ಮಾನಿಸಿರುವೆ. ಎಷ್ಟು ಸ್ಟಾಕ್ ಇದೆ, ದರವೆಷ್ಟು ಎಂದು ತಿಳಿದು ಮುಂದಿನ ಹೆಜ್ಜೆಯಿಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಗಿ, ಜೋಳ ಇಲ್ಲ :