

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೆಲವು ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಉಚಿತವಾಗಿ ನೀಡುತ್ತೇವೆಂದು ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ಅದರಂತೆ ಇದೀಗ ಗ್ಯಾಂರಟಿಯನ್ನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.
ಶಕ್ತಿ ಯೋಜನೆ ನನ್ನ ಹೆಂಡತಿಗೂ ಅನ್ವಯ ಅಂದ ಸಿಎಂ ಸಿದ್ದರಾಮಯ್ಯ:
ಸಚಿವ ಸಂಪುಟದ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮತನಾಡಿದ್ದು, ಶಕ್ತಿ ಯೋಜನೆ ಅಡಿಯಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿನಿಯರು ಸೇರಿ ಎಲ್ಲಾ ಮಹಿಳೆಯರಿಗೆ ‘ಶಕ್ತಿ’ ಯೋಜನೆ ಅನ್ವಯವಾಗಲಿದೆ. ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಶಕ್ತಿ ಯೋಜನೆ ನನ್ನ ಹೆಂಡತಿಗೂ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
ಶೇ. ೫೦% ಮಹಿಳೆಯರು ಸಮಾಜದಲ್ಲಿ ಇದ್ದಾರೆ. ಸ್ಟೂಡೆಂಟ್ ಸೇರಿ ಎಲ್ಲರಿಗೂ ಉಚಿತ ಬಸ್ ಪಾಸ್ ನೀಡಲಾಗುತ್ತದೆ. ಈ ತಿಂಗಳ ೧೧ ರಂದು ಈ ಯೋಜನೆ ಲಾಂಚ್ ಆಗುತ್ತದೆ ಎಂದು ಹೇಳಿದ್ದಾರೆ.
ಬಸ್ ಸೇವೆ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ರಾಜ್ಯದ ಒಳಗೆ ಮಾತ್ರ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇರುತ್ತದೆ. ಎಕ್ಸ್ಪ್ರೆಸ್ ಬಸ್ ನಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಬಿಎಂಟಿಸಿ ಮತ್ತು ಕೆ ಎಸ್ ಆರ್ಟಿಸಿ ಬಸ್ನಲ್ಲಿ ಅವಕಾಶ ಇದೆ.
ಎಸಿ ಬಸ್ ಬಿಟ್ಟು ಎಲ್ಲದರಲ್ಲೂ ಉಚಿತವಾಗಿ ಪ್ರಯಾಣ ಮಾಡಬಹುದು. ಎಸಿ ಮತ್ತು ಐಷಾರಾಮಿ ಬಸ್ಗಳಲ್ಲಿ ಉಚಿತ ಪ್ರಯಾಣವಿಲ್ಲ. ರಾಜಹಂಸ ಬಸ್ನಲ್ಲಿಯೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಇರುವುದಿಲ್ಲ. ಅಂತಾರಾಜ್ಯ ಪ್ರಯಾಣಕ್ಕೆ ಉಚಿತ ಸೌಲಭ್ಯ ಇರುವುದಿಲ್ಲ.
ಗಂಡಸರಿಗೆ ೫೦% ಆಸನ ಮೀಸಲು:
ಈ ತಿಂಗಳ ೧೧ ರ ಬಳಿಕ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಇದ್ದು, ಗಂಡಸರಿಗೆ ೫೦% ಆಸನ ಮೀಸಲು ನೀಡುವ ಮೂಲಕವಾಗಿ ೫೦:೫೦ ಆಸನಕ್ಕೆ ಸರ್ಕಾರ ಅವಕಾಶ ನೀಡಿದೆ.