ಆಗುಹೋಗುಗಳ ಕುರಿತು ಸಿಎಂ ಔತಣ ಕೂಟಕ್ಕೆ ಕರೆದಿದ್ದಾರೆ * ಎಂಎಲ್ಸಿ ಡಾ.ಯತೀಂದ್ರ ಸಿದ್ಧರಾಮಯ್ಯ ಹೇಳಿಕೆ

DR.YATINDRA
DR.YATINDRA
Published on

ರಾಯಚೂರು ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಸಮಸ್ಯೆ ಹಾಗೂ ಇಲಾಖೆಗಳ ಆಗುಹೋಗುಗಳ ಕುರಿತು ಎಂಎಲ್ಎ ಮತ್ತು ಸಚಿವರನ್ನು ಔತಣ ಕೂಟಕ್ಕೆ ಕರೆದಿರುತ್ತಾರೆಂದು ಎಂಎಲ್ಸಿ ಡಾ.ಯತೀಂದ್ರ ಸಿದ್ಧರಾಮಯ್ಯ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದಲ್ಲಿ ನಡೆಯುವ ವಿಚಾರ ಬೇರೆ ಪಕ್ಷದವರಿಗೆ ಎನುಗೊತ್ತು? ಅವರು ಏನೇನು ಹೇಳುತ್ತಾರೆ.ಅವರು ಹೇಳಿದ್ದೇಲ್ಲ ನಿಜ ಆಗುತ್ತಾ.. ಸಿಎಂ ಅವಾಗವಾಗ ಎಂಎಲ್ಎ ಮತ್ತು ಸಚಿವರನ್ನು ಔತಣ ಕೂಟ ಕರೀತಾ ಇರುತ್ತಾರೆ. ಕೂಟದಲ್ಲಿ ಬಿಹಾರ ಚುನಾವಣೆ ಚರ್ಚೆ ಮಾಡಬಹುದು. ಸರ್ಕಾರದ ಸಮಸ್ಯೆ ಇಲಾಖೆಗಳ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದರು.

ಮಾಜಿ ಸಂಸದ ಪ್ರತಾಪ ಸಿಂಹ ಪ್ರಸ್ತುತ ರಾಜಕೀಯದಲ್ಲಿ ಇಲ್ಲ. ನಾನು ಅಧಿಕಾರಿಗಳ ವರ್ಗಾವಣೆಗೆ ಕಮಿಷನ್ ತೆಗೆದುಕೊಳ್ಳುತ್ತಾರೆಂದು ಆರೋಪ ಮಾಡುತ್ತಾರೆ. ಸುಮ್ಮನೆ ಸಾಕ್ಷಿ ಇಲ್ಲದೆ, ಆಧಾರ ಇಲ್ಲದೆ ಬಾಯಿಗೆ ಬಂದಂಗೆ ಆರೋಪ ಮಾಡುತ್ತಿರುತ್ತಾರೆ. ಅವರು ಹೇಳುವುದೇಲ್ಲ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಅವರ ಪಕ್ಷವೇ ಅವರನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ, ನಾವ್ಯಾಕೆ ಗಂಭೀರ ತೆಗೆದುಕೊಳ್ಳಬೇಕೆಂದು ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು ನೀಡಿದರು.

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಕುರಿತು ನಾನು ಸಿಎಂ ಸ್ಥಾನದಲ್ಲಿ ಇರುವ ವರೆಗೆ ಡಾ.ಯತೀಂದ್ರರಿಗೆ ಸಚಿವ ಸ್ಥಾನ ನೀಡುವುದಿಲ್ಲವೆಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ ಸಿಎಂ ಅಗಬೇಕೆಂದು ಎಲ್ಲರೂ ಊಹಾಪೋಹದ ಆಧಾರದಡಿ ಮಾತನಾಡುತ್ತಾರೆ. ನನಗೆ ಗೊತ್ತಿರುವ ಹಾಗೆ ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ. ಆದರೆ ಸಿಎಂ ಪದವಿಗೆ ಬೇಕಾಗಿರುವ ಸಾಕಷ್ಟು ಜನ ನಮ್ಮಲ್ಲಿ ಅರ್ಹರಿದ್ದಾರೆ. ಕುರುಬರಿಗೆ ಎಸ್ಟಿ ಪ್ರಮಾಣ ಪತ್ರ ನೀಡುವ ಕುರಿತು ಕೊಪ್ಪಳ, ಯಾದಗಿರಿ, ಬೀದರ್ ಸೇರಿದಂತೆ ನಾಲ್ಕೈದು ಜಿಲ್ಲೆಗಳಲ್ಲಿ ಕುರುಬರಿಗೆ ನೀಡಬೇಕೆಂದು ರಾಜ್ಯ ಸರ್ಕಾರ ಶಿಫಾರಸು ಮಾಡಲಾಗಿದ್ದು, ಕೇಂದ್ರ ಸರ್ಕಾರ ತೀರ್ಮಾನ ಮಾಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net