ಸಿಎಂಗೆ ರಾಜ್ಯಪಾಲರ ಬುಲಾವ್, 10 ನಿಮಿಷ ಮಹತ್ವದ ಚರ್ಚೆ

bsy- vajubhayi
Published on

ಬೆಂಗಳೂರು: ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಶುಕ್ರವಾರ ಬೆಳಗ್ಗೆ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 10 ನಿಮಿಷ ಕಾಲ ಚರ್ಚಿಸಿದರು.

ರಾಜ್ಯಪಾಲರನ್ನು ಸಿಎಂ ಭೇಟಿ ಮಾಡಿದ ಬೆನ್ನಲ್ಲೇ ಇನ್ನು ಎರಡ್ಮೂರು ದಿನಗಳಲ್ಲಿ ಸಚಿವ ಸಂಪುಟ‌ ವಿಸ್ತರಣೆ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆಕಾಂಕ್ಷಿಗಳ ಲಾಬಿ ಚುರುಕಾಗಿದೆ.

ರಾಜ್ಯಪಾಲರ ಭೇಟಿ ವೇಳೆ ಸಿಎಂಗೆ ಸಾಥ್ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, 'ರಾಜ್ಯಪಾಲರು ನಮ್ಮನ್ನು ಕರೆದಿದ್ದರು. ಕೆಲ ವಿಷಯಗಳ ಬಗ್ಗೆ ಚರ್ಚಿಸಿದರು. ಕರೊನಾ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮತ್ತಷ್ಟು ಕ್ರಮವಹಿಸಲು ಸೂಚಿಸಿದರು. ಆಯುರ್ವೇದಕ್ಕೆ ಒತ್ತು ಕೊಡುವಂತೆ ಸಲಹೆ ನೀಡಿದರು' ಎಂದು ತಿಳಿಸಿದರು.

'ಡ್ರಗ್ಸ್ ವಿರುದ್ಧ ಸಾರಿರುವ ಸಮರಕ್ಕೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ದಂಧೆಕೋರರನ್ನು ಮಟ್ಟಹಾಕಲು ಸಲಹೆ ನೀಡಿದ್ದಾರೆ' ಎಂದರು.

ವಜುಭಾಯಿ ವಾಲಾ ಅವರಿಂದ ಬುಲಾವ್​ ಬಂದ ಹಿನ್ನೆಲೆಯಲ್ಲಿ ರಾಜಭವನಕ್ಕೆ ದಿಢೀರ್​ ಭೇಟಿ ನೀಡಿದ್ದ ಸಿಎಂ, ರಾಜ್ಯಪಾಲರಿಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ಕೋರಿ 10 ನಿಮಿಷಗಳ ಕಾಲ ಚರ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net