ಗೋಪೂಜೆ ನೆರವೇರಿಸಿದ ಸಿಎಂ ಬಿಎಸ್​ ಯಡಿಯೂರಪ್ಪ

CM BSY Gau Pooja 11.12.2020
Published on

ಬೆಂಗಳೂರು: ಗೋಹತ್ಯಾ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಇಂದು ತಮ್ಮ ನಿವಾಸದಲ್ಲಿ ಗೋಪೂಜೆ ನೆರವೇರಿಸಿದರು. ಗೋವಿಗೆ ಶಾಲು ಹೊದೆಸಿ, ಅರಶಿನ ಕುಂಕುಮ ಹಚ್ಚಿ, ಹೂವುಗಳನ್ನು ಅರ್ಪಿಸಿ, ಗೋಗ್ರಾಸವನ್ನೂ ಸಮರ್ಪಿಸಿ ಗೋಪೂಜೆ ನಡೆಸಿದರು. ಸಿಎಂ ಅವರ ಪುತ್ರ ಬಿ.ವೈ ರಾಘವೇಂದ್ರ, ಬಿ.ವೈ.ವಿಜಯೇಂದ್ರ ಕೂಡ ಜತೆಗೆ ಇದ್ದು ಪೂಜೆಯಲ್ಲಿ ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಗೋವನ್ನು ನಾವು ಅತ್ಯಂತ ಭಕ್ತಿ ಭಾವದಿಂದ ಕಾಣುತ್ತೇವೆ. ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ದೇವರ ಸ್ಥಾನವಿದೆ. ಅವುಗಳಿಗೆ ಪೂಜೆ ಸಲ್ಲಿಸುತ್ತೇವೆ. ಒಳಿತಿಗಾಗಿ ಗೋವುಗಳಿಗೇ ಮೊರೆ ಹೋಗುತ್ತೇವೆ. ಇವೆಲ್ಲದರ ನಡುವೆಯೂ ಗೋಹತ್ಯೆಯಂತಹ ಕೆಲವು ಅಪಚಾರಗಳಾಗುತ್ತಿದ್ದು, ಅದನ್ನು ತಡೆಯಲು ಗೋಹತ್ಯೆ ನಿಷೇಧದ ಕಾಯ್ದೆ ಜಾರಿಗೆ ತಂದಿದ್ದೇವೆ. ಅಗತ್ಯ ಇರುವ ಕಡೆ ನಾವು ಗೋಶಾಲೆ ನಿರ್ಮಿಸುತ್ತೇವೆ. ಪಕ್ಷದ ಪ್ರಣಾಳಿಕೆಯಲ್ಲೂ ಈ ಬಗ್ಗೆ ಭರವಸೆ ನೀಡಿದ್ದೆವು. ನಮ್ಮ ಸರ್ಕಾರ ಗೋರಕ್ಷಣೆಗೆ ಬದ್ಧವಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ನಮಗೆ ಅತ್ಯಂತ ಸಂತೋಷವಾಗಿದೆ. ದೇಶದಲ್ಲಿ ಗೋವನ್ನ ದೇವರೆಂದು ಪ್ರಾರ್ಥಿಸುತ್ತೇವೆ. ನಾವು ಚುನಾವಣಾ ಗಿಮಿಕ್ ಗಾಗಿ ಮಾಡಿಲ್ಲ. ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದೆ ಎಂದು ಹೇಳಿದರು.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net