'... ಸನಿಹಕೆ' ಬರಲಿದ್ದಾರೆ ಸಿಎಂ: ಡಾ.ರಾಜಕುಮಾರ್ ಮೊಮ್ಮಗಳ ಸಿನಿಮಾದ ಪ್ರೀಮಿಯರ್​ ಶೋ ವೀಕ್ಷಿಸಲಿದ್ದಾರೆ ಬೊಮ್ಮಾಯಿ

Saniha F
Published on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ '... ಸನಿಹಕೆ' ಬರಲಿದ್ದಾರೆ. ಅರ್ಥಾತ್​, 'ನಿನ್ನ ಸನಿಹಕೆ' ಸಿನಿಮಾದ ಪ್ರೀಮಿಯರ್​ ಶೋ ದಿನದಂದು ಚಿತ್ರರಂಗದ ಗಣ್ಯರೊಂದಿಗೆ ಅವರು ಇರಲಿದ್ದು, ಸಿಎಂ ಅವರೊಂದಿಗೆ ಸಿನಿಮಾ ನೋಡುವ ಅವಕಾಶ ಅಂದು ಹಲವರದ್ದಾಗಲಿದೆ.

ಡಾ. ರಾಜಕುಮಾರ್ ಅವರ ಮೊಮ್ಮಗಳು, ನಟ ರಾಮ್​ಕುಮಾರ್​ ಅವರ ಪುತ್ರಿಯೂ ಆಗಿರುವ ಧನ್ಯಾ ಹಾಗೂ ಸೂರಜ್​ ಗೌಡ ಅಭಿನಯದ 'ನಿನ್ನ ಸನಿಹಕೆ' ಸಿನಿಮಾದ ಪ್ರೀಮಿಯರ್ ಶೋ ಗುರುವಾರ ಸಂಜೆ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಪಿವಿಆರ್ ಒರಾಯನ್ ಮಾಲ್​ನಲ್ಲಿ ಇರಲಿದೆ.

ಇಂದು ಮುಖ್ಯಮಂತ್ರಿ ಅವರನ್ನು ಭೇಟಿಯಾದ ಚಿತ್ರತಂಡ ಸಿನಿಮಾದ ಮೊದಲ ಟಿಕೆಟ್​​ ಸಿಎಂ ಅವರಿಗೆ ನೀಡಿ ಅವರನ್ನು ಪ್ರೀಮಿಯರ್ ಶೋಗೆ ಆಹ್ವಾನಿಸಿತು. ಪ್ರೀಮಿಯರ್ ಶೋನಲ್ಲಿ ಸಿಎಂ ಮಾತ್ರವಲ್ಲದೆ ಡಾ. ರಾಜ್​ ಕುಟುಂಬಸ್ಥರು ಸೇರಿ ಚಿತ್ರರಂಗದ ಹಲವಾರು ಗಣ್ಯರು ಭಾಗಿಯಾಗಲಿದ್ದಾರೆ. ಸೂರಜ್ ಗೌಡ ನಿರ್ದೇಶನದ ಈ ಚಿತ್ರಕ್ಕೆ ಅಕ್ಷಯ್ ರಾಜಶೇಖರ್, ರಂಗನಾಥ್ ಕೂಡ್ಲಗಿ ಅವರು ಬಂಡವಾಳ ಹೂಡಿದ್ದಾರೆ. ಇದೇ ಶುಕ್ರವಾರ ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net