ಮಕ್ಕಳಿಗೆ ಸಿಹಿ ತಿನ್ನಿಸಿ ಪಾಠ ಮಾಡಿದ ಸಿಎಂ!

cm
Published on

ಕಲಬುರಗಿ: ತಾಲೂಕಿನ ಮದಿಹಾಳ ತಾಂಡಾದಲ್ಲಿನ ಸರ್ಕಾರಿ ಶಾಲೆಯಲ್ಲಿ ವಿವೇಕ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಕ್ಕಳ ದಿನಾಚರಣೆ ನಿಮಿತ್ತ ಮದಿಹಾಳಾ ಶಾಲೆ ಮಕ್ಕಳಿಗೆ ಸಿಹಿ ತಿನ್ನಿಸಿದರು.

ಮಕ್ಕಳೆಂದರೆ ನನಗೆ ಪ್ರೀತಿ. ನಾಡಿನ ಎಲ್ಲ ಮಕ್ಕಳೂ ನಮ್ಮ ಮಕ್ಕಳು ಎಂದ ಸಿಎಂ, ಸಾಧನೆ ಮಾಡುವ ಕನಸು ಕಾಣಿ ಅದನ್ನು ಸಾಧಿಸುವ ಕಡೆಗೆ ಗಮನ ಹರಿಸಿ ಎಂದು ಪಾಠ ಮಾಡಿದರು.

ತೇನ್‌ಸಿಂಗ್ ನೋರ್ಗೆ ಅವರಂತೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಕನಸು ಕಾಣಬೇಕು. ಅವರ ಹಾಗೆ ದೊಡ್ಡವರಾದ ಬಳಿಕ ಮೌಂಟ್​ ಎವರೆಸ್ಟ್ ಏರಿ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಮಕ್ಕಳಲ್ಲಿ‌ ಮುಗ್ಧತೆ ಮತ್ತು ಕುತೂಹಲ ಎರಡೂ ಇರುತ್ತವೆ. ಅವರಲ್ಲಿ ಆ ಎರಡೂ ಉಳಿಸಿಕೊಂಡು ಹೋಗುವಂತೆ ಪಾಠ ಮಾಡುವವರೇ ನಿಜವಾದ ಸಾಧಕ ಶ್ರೇಷ್ಠ ಶಿಕ್ಷಕರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net