More

    CM ಬೊಮ್ಮಾಯಿ ತಡವಾಗಿ ಬಂದಿದ್ದಕ್ಕೆ ಸನ್ಮಾನವನ್ನೇ ತಿರಸ್ಕರಿಸಿದ ಟೆನಿಸ್ ದಿಗ್ಗಜ ಬ್ಯೋನ್‌ ಬೋರ್ಗ್‌!

    ಬೆಂಗಳೂರು: ನಿಗದಿಯಾಗಿದ್ದ ಸನ್ಮಾನ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದೂವರೆ ಗಂಟೆ ತಡವಾಗಿ ಬಂದಿದ್ದಕ್ಕೆ, ಟೆನಿಸ್‌ ದಂತಕಥೆ ಬ್ಯೋನ್‌ ಬೋರ್ಗ್‌ ತಮ್ಮ ಸನ್ಮಾನವನ್ನೇ ತಿರಸ್ಕರಿಸಿದ ಘಟನೆಗೆ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ನಡೆದಿದೆ.

    ಬ್ಯೋನ್‌ ಬೋರ್ಗ್‌ ಪುತ್ರ ಲಿಯೊ ಬೋರ್ಗ್‌ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಂಡಿರುವುದರಿಂದ, ಮಗನ ಆಟವನ್ನು ನೋಡಲು ಅವರು ಬೆಂಗಳೂರಿಗೆ ಬಂದಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಲಾನ್ ಟೆನಿಸ್‌ ಸಂಸ್ಥೆಯು ಫೆಬ್ರವರಿ 21ರಂದು ಬೆಂಗಳೂರು ಓಪನ್ ಟೆನಿಸ್ ಟೂರ್ನಿ ಆರಂಭಕ್ಕೂ ಮುನ್ನ 11 ಬಾರಿ ಟೆನಿಸ್ ಗ್ರ್ಯಾನ್‌ ಸ್ಲಾಂ ವಿಜೇತ ಬ್ಯೋನ್‌ ಬೋರ್ಗ್‌ ಹಾಗೂ ಭಾರತದ ದಿಗ್ಗಜ ಟೆನಿಸಿಗ ವಿಜಯ್ ಅಮೃತ್‌ರಾಜ್‌ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

    ಇದನ್ನೂ ಓದಿ: ಕೋವಿಡ್​ಗೆ ಹೆದರಿದ ಮಹಿಳೆ; ಸತತ 3 ವರ್ಷ ಮನೆಯೊಳಗೆ ಲಾಕ್!

    ಸನ್ಮಾನ ಸಮಾರಂಭವು ಮಂಗಳವಾರ ಬೆಳಗ್ಗೆ 9.30ಕ್ಕೆ ನಿಗದಿಯಾಗಿತ್ತು. ಆ ನಂತರ ಮುಖ್ಯಮಂತ್ರಿಗಳು ಬರುವುದು ತಡವಾಗಿದ್ದರಿಂದ ಸನ್ಮಾನ ಕಾರ್ಯಕ್ರಮವನ್ನು 10.15ಕ್ಕೆ ಮುಂದೂಡಲಾಯಿತು. ಲಿಯೊ ಬೋರ್ಗ್ ಅವರ ಮೊದಲ ಸುತ್ತಿನ ಪಂದ್ಯ ಬೆಳಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ಆದರೆ 11 ಗಂಟೆಯಾದರೂ ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಬರದ ಹಿನ್ನೆಲೆಯಲ್ಲಿ ಅವರು ಮಗನ ಆಟವನ್ನು ನೋಡಲು ಗ್ಯಾಲರಿಗೆ ಬಂದು ಕುಳಿತುಕೊಂಡರು.

    ಬೊಮ್ಮಾಯಿಯವರು ಬೆಳಗ್ಗೆ 11.15ಕ್ಕೆ ಬಂದರು. ಮುಖ್ಯಮಂತ್ರಿ ಬಂದ ವಿಚಾರವನ್ನು ಬ್ಯೋನ್‌ ಬೋರ್ಗ್‌ ಅವರ ಗಮನಕ್ಕೆ ಆಯೋಜಕರು ತಂದರಾದರೂ, ಪಂದ್ಯ ಮುಗಿದ ಬಳಿಕವಷ್ಟೇ ತಾವು ಬರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಸನ್ಮಾನ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಯಿತು.

    ಆಯಿಲ್ ಲೀಕ್, ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts