More

    ಆಯಿಲ್ ಲೀಕ್, ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

     

    ನವದೆಹಲಿ: ಸುಮಾರು 300 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಅಮೆರಿಕದ ನೆವಾರ್ಕ್​ಗೆ ತೆರಳುತ್ತಿದ್ದ ಏರ್​​ ಇಂಡಿಯಾ ವಿಮಾನ ಆಯಿಲ್​​ ಲೀಕ್​ ಆಗಿದ್ದು, ಸ್ವೀಡನ್​​ನಲ್ಲಿ ತುರ್ತು ಭೂಸ್ಫರ್ಶ ಮಾಡಿದೆ.

    ವಿಮಾನದ ಇಂಜಿನ್​​ನಲ್ಲಿ ಆಯಿಲ್​ ಲೀಕ್​ ಆಗಿತ್ತು. ಹೀಗಾಗಿ ಇಂಜಿನ್​ ಸ್ಥಗಿತಗೊಳಿಸಿ, ಮುಂಜಾಗೃತಾ ಕ್ರಮವಾಗಿ ಸುರಕ್ಷಿತವಾಗಿ ವಿಮಾನ ಲ್ಯಾಂಡ್​​ ಮಾಡಲಾಗಿದೆ. ಅದೃಷ್ಟವಶಾತ್​​ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಇಂದು BJP ಸೇರಲಿದ್ದಾರೆ ಹಿರಿಯ ನಟ ಅನಂತ್ ನಾಗ್

    ‘ಬೋಯಿಂಗ್ 777-300ER ವಿಮಾನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ವಿಮಾನದ ಎಂಜಿನ್ ಒಂದರಲ್ಲಿ ತೈಲ ಸೋರಿಕೆಯಾಗಿದೆ. ವಿಮಾನವನ್ನು ತಾಂತ್ರಿಕ ಸಮಸ್ಯೆಯಿಂದಾಗಿ ಲ್ಯಾಂಡ್​​ ಮಾಡಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸೀಟ್​ ಬೆಲ್ಟ್​ ಧರಿಸಿಲ್ಲ ಅಂತಾ 1000 ರೂ. ದಂಡ! ರೊಚ್ಚಿಗೆದ್ದ ಸ್ಕೂಟರ್​ ಸವಾರ ಹೇಳಿದ್ದಿಷ್ಟು….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts