More

    ಸೀಟ್​ ಬೆಲ್ಟ್​ ಧರಿಸಿಲ್ಲ ಅಂತಾ 1000 ರೂ. ದಂಡ! ರೊಚ್ಚಿಗೆದ್ದ ಸ್ಕೂಟರ್​ ಸವಾರ ಹೇಳಿದ್ದಿಷ್ಟು….

    ಭುವನೇಶ್ವರ್​: ಹೆಲ್ಮೆಟ್​ ಧರಿಸಿಲ್ಲ ಅಂತಾ ನಾಲ್ಕು ಚಕ್ರದ ಚಾಲಕರಿಗೆ ದಂಡ ವಿಧಿಸಿರುವ ವಿಚಿತ್ರ ಸಂಗತಿಯನ್ನು ನಾವು ಇದುವರೆಗೂ ನೋಡಿದ್ದೆವು. ಆದರೀಗ ವರದಿಯಾಗಿರುವ ಘಟನೆಯೊಂದರಲ್ಲಿ ಸೀಟ್​ ಬೆಲ್ಟ್​ ಧರಿಸಿಲ್ಲ ಅಂತಾ ದ್ವಿಚಕ್ರ ವಾಹನ ಚಾಲಕನಿಗೆ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಕೇಳಲು ಚಿತ್ರವಿಚಿತ್ರ ಎನಿಸಿದರೂ ಇದು ಸತ್ಯ ಸಂಗತಿಯಾಗಿದೆ.

    ಪೊಲೀಸರ ಈ ಕ್ರಮವು ರಾಜ್‌ಗಂಗ್‌ಪುರ ಮೂಲದ ದ್ವಿಚಕ್ರ ವಾಹನ ಮಾಲೀಕ ಅಭಿಶೇಕ್​ ಕರ್​ ಅವರನ್ನು ಗೊಂದಲಕ್ಕೆ ದೂಡಿದೆ. ಮೂಲಗಳ ಪ್ರಕಾರ ಸ್ಕೂಟರ್​ ಮಾಲೀಕನಿಗೆ 1000 ರೂ. ದಂಡ ವಿಧಿಸಲಾಗಿದೆ.

    ಇದನ್ನೂ ಓದಿ: ನಟಿ ಶುಭಾ ಪೂಂಜಾ ಮನೆಯಲ್ಲಿ ನಡೆದ ಅತ್ಯಂತ ನೋವಿನ ಸಂಗತಿ ಬಿಚ್ಚಿಟ್ಟ ಆ್ಯಂಕರ್​ ಅನುಶ್ರೀ!

    ಈ ಬಗ್ಗೆ ಮಾತನಾಡಿರುವ ಅಭಿಶೇಕ್, ಇತ್ತೀಚೆಗೆ ನನ್ನ ಮೊಬೈಲ್​ಗೆ ಮೆಸೇಜ್​ ಒಂದು ಬಂದಿತು. ಕೆಲವು ಸಂಚಾರಿ ನಿಯಮ ಉಲ್ಲಂಘನೆಗಾಗಿ ದಂಡದ ಚಲನ್​ ವಿತರಿಸಲಾಗಿತ್ತು. ನಾನು ಆ ಕುರಿತು ವಿವರಣೆಯನ್ನು ಕಲೆ ಹಾಕಿದಾಗ, ಸೀಟ್​ ಬೆಲ್ಟ್​ ಧರಿಸಿಲ್ಲ ಅಂತಾ ನನಗೆ ದಂಡ ವಿಧಿಸಿರುವುದು ತಿಳಿಯಿತು ಎಂದರು.

    ಆದರೆ, ಮತ್ತಷ್ಟು ಪರಿಶೀಲನೆ ನಡೆಸಿದಾಗ ಬೇರೆ ವ್ಯಕ್ತಿಯ ಚಿತ್ರವನ್ನು ತನ್ನ ಗಾಡಿಯ ಹೆಸರಲ್ಲಿ ಆ್ಯಪ್​ನಲ್ಲಿ ಅಪ್​ಲೋಡ್​ ಮಾಡಿರುವುದು ಬೆಳಕಿಗೆ ಬಂದಿದೆ. ಸೀಟ್​ ಬೆಲ್ಟ್​ ಧರಿಸಿಲ್ಲ ಅಂತಾ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಹೆಲ್ಮೆಟ್​ ಹಾಕಿಲ್ಲ ಅಂತಾ ನಾಲ್ಕು ಚಕ್ರದ ವಾಹನ ಸವಾರಿಗೆ ದಂಡ ವಿಧಿಸಲು ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಿರುವ ಅಭಿಶೇಕ್​, ಭಾರೀ ಹಣ ಖರ್ಚು ಮಾಡಿ ಸಾಫ್ಟ್​ವೇರ್​ ಡೆವೆಲಪ್​ ಮಾಡಿರುತ್ತೀರಿ, ಇಂತಹ ಸಮಸ್ಯೆಗಳ ಬಗ್ಗೆ ನಿಜಕ್ಕೂ ಚಿಂತಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಇದನ್ನೂ ಓದಿ: ಇಂಥವರೂ ಇರ್ತಾರಾ? ಮಗುವಿನ ಚಿಕಿತ್ಸೆಗೆ 11 ಕೋಟಿ ರೂ. ನೆರವು ನೀಡಿದ ಅಪರಿಚಿತ, ಮಗುವಿನ ತಂದೆ ಭಾವುಕ

    ಘಟನೆಯ ನಂತರ ಅಭಿಶೇಕ್​ ಅವರು ಜಾರ್ಸುಗುಡ ಮೋಟಾರು ವಾಹನ ಇಲಾಖೆ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದಿದ್ದಾರೆ.

    ಮಾನವ ದೋಷಗಳು ಸಂಭವಿಸಬಹುದು ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಅಧಿಕಾರಿಗಳು ಸಾಫ್ಟ್‌ವೇರ್‌ನಲ್ಲಿನ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಸುಗಮಗೊಳಿಸಬೇಕು. ನನಗೆ ರಶೀದಿಯನ್ನು ಫೆಬ್ರವರಿ 10ರಂದು ನೀಡಲಾಯಿತು ಮತ್ತು ಫೆಬ್ರವರಿ 17 ರಂದು ನನಗೆ ಮಾಹಿತಿ ಸಿಕ್ಕಿತು. ಆದರೆ, ಏಳು ದಿನಗಳಲ್ಲಿ ಚಲನ್ ಮೊತ್ತವನ್ನು ಠೇವಣಿ ಮಾಡಲು ನನಗೆ ತಿಳಿಸಲಾಗಿದೆ. ಈ ರೀತಿಯ ಎಡವಟ್ಟುಗಳು ಮುಂದೆ ಆಗದಂತೆ ಅಧಿಕಾರಿಗಳು ಗಮನವಹಿಸಬೇಕಿದೆ ಎಂದು ಅಭಿಶೇಕ್​ ಹೇಳಿದರು. (ಏಜೆನ್ಸೀಸ್​)

    ರಾಜ್ಯದಲ್ಲಿ ತ್ರಿಮೂರ್ತಿ ಸಂಚಲನ: ಮೋದಿ ಮ್ಯಾಜಿಕ್, ಷಾ ಕಾರ್ಯತಂತ್ರ, ನಡ್ಡಾ ಸಂಘಟನಾತ್ಮಕ ಗಮನ

    ಪ್ಯಾಕ್ಸ್ ನೌಕರರಿಗೆ ದೊರೆಯದ ಸೇವಾ ಭದ್ರತೆ: ಅಧಿವೇಶನದಲ್ಲಿ ಚರ್ಚೆಗೆ ಬಾರದ ಕಾನೂನು ತಿದ್ದುಪಡಿ ವಿಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts