

ಬಂಟ್ವಾಳ: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ರಾಯಿ, ಶಿಕ್ಷಣ ಇಲಾಖೆ, ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರ ರಾಯಿ ಆಶ್ರಯದಲ್ಲಿ 2024-25ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ರಾಯಿ ಶಾಲೆಯಲ್ಲಿ ನಡೆಯಿತು.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಹರೀಶ್ ಆಚಾರ್ಯ ರಾಯಿ ಅಧ್ಯಕ್ಷತೆ ವಹಿಸಿದರು. ರಾಯಿ ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು, ಪಿಡಿಓ ಧರ್ಮರಾಜ ಪಿ.ದಡ್ಡು, ಕೇಂದ್ರ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ನಾಗರತ್ನ, ಸಿಆರ್‌ಪಿ ಪ್ರೇಮಲತಾ, ಉದ್ಯಮಿಗಳಾದ ರೂಪಾ ರಾಜೇಶ್ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ ರಾಯಿ, ರಾಜೇಶ್ ಜೈನ್ ಪಡ್ರಾಯಿಗುತ್ತು, ಪಂಚಾಯಿತಿ ಸದಸ್ಯರಾದ ಉಷಾ ಸಂತೋಷ್, ವಸಂತಗೌಡ ಮುದ್ದಾಜೆ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಸಮಿತ್ ಶಿವನಗರ, ನಮ್ಮ ಜವನೆರ್ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಮಿಯಾಲು, ರಮೇಶ್ ಗೌಡ ಮಿಯಾಲು ಚಂದ್ರಾವತಿ ಲೋಕೇಶ್, ಹೇಮಾ ಎಚ್.ರಾವ್, ಸುರೇಖಾ ಶೆಟ್ಟಿ, ತನುಜಾ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಜಾನೆಟ್ ಕೊನ್ಸೆಸೊ ಸ್ವಾಗತಿಸಿ, ಬೇಬಿ ನಿರೂಪಿಸಿದರು, ಸಿದ್ದಪ್ಪ ಕರಿಯಪ್ಪನವರ್ ವಂದಿಸಿದರು.