

ಕಡಬ: ನೂಜಿಬಾಳ್ತಿಲ ಗ್ರಾಪಂನಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಭಾಭವನ, ಸಂಜೀವಿನಿ ತಂಡಕ್ಕೆ ಸ್ವಚ್ಛ ವಾಹನ ಹಸ್ತಾಂತರ ಹಾಗೂ ತ್ಯಾಜ್ಯ ಘಟಕ ಕಟ್ಟಡ ಉದ್ಘಾಟನೆ ನೆರವೇರಿತು.
ಅಟಲ್ ಬಿಹಾರಿ ವಾಜಪೇಯಿ ಸಭಾಭವನ ಉದ್ಘಾಟಿಸಿದ ಮಾಜಿ ಸಚಿವ ಎಸ್.ಅಂಗಾರ ಮಾತನಾಡಿ, ಸರ್ಕಾರದ ಅನುದಾನವನ್ನು ಉಪಯೋಗಿಸಿಕೊಂಡು ಯಾವುದೇ ಕಾಮಗಾರಿಗಳನ್ನು ಮಾಡುವಾಗ ನಾವು ಭವಿಷ್ಯದ ಚಿಂತನೆಗಳನ್ನು ಇಟ್ಟುಕೊಂಡು ಯೋಜನೆ ರೂಪಿಸಬೇಕು. ಗ್ರಾಮದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜತೆಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಸ್ವಚ್ಛ ವಾಹನವನ್ನು ಸಂಜೀವಿನಿ ತಂಡಕ್ಕೆ ಹಸ್ತಾಂತರಿಸಿದರು. ಕಲ್ಲುಗುಡ್ಡೆ ಪೇಟೆಯಲ್ಲಿ ನಿರ್ಮಿಸಲಾದ ಒಣ ಕಸ ಸಂಗ್ರಹಣಾ ಘಟಕವನ್ನು ನೂಜಿಬಾಳ್ತಿಲ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ಜಾಲು ಉದ್ಘಾಟಿಸಿದರು. ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್, ಗ್ರಾಪಂ ಉಪಾಧ್ಯಕ್ಷ ಚಂದ್ರಶೇಖರ ಹಳೆನೂಜಿ, ತಾಪಂ ಸಹಾಯಕ ನಿರ್ದೇಶಕ ಸಂದೇಶ್, ಗ್ರಾಪಂ ಸದಸ್ಯೆ ಗಂಗಮ್ಮ ಶುಭಹಾರೈಸಿದರು.
ಕಾಮಗಾರಿ ನಿರ್ಮಾಣದಲ್ಲಿ ಸಹಕರಿಸಿದವರು, ದಾನಿಗಳನ್ನು ಸನ್ಮಾನಿಸಲಾಯಿತು. ಗ್ರಾಪಂ ಸದಸ್ಯರಾದ ಶ್ರೀಧರ ಗೌಡ ಗೋಳ್ತಿಮಾರ್, ಪಿ.ಜೆ.ಜೋಸೆಫ್, ಉಮೇಶ್, ವಿಜಯಲಕ್ಷ್ಮೀ, ವಸಂತ ಕುಬಲಾಡಿ, ಭವಾನಿ, ಮೀನಾಕ್ಷಿ, ಕೆ.ಆರ್.ಡಿ.ಎ.ಎಲ್. ಇಂಜಿನಿಯರ್ ದೀಕ್ಷಿತ್, ಎನ್.ಆರ್.ಎಲ್.ಎಂ.ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಉಪಸ್ಥಿತರಿದ್ದರು. ಪಿಡಿಒ ಆನಂದ ಎ. ಸ್ವಾಗತಿಸಿದರು. ಇಮ್ಯಾನ್ಯುವೆಲ್ ಪಿ.ಜೆ. ವಂದಿಸಿದರು. ವಿನಯಚಂದ್ರ ಬಳಕ್ಕ ಕಾರ್ಯಕ್ರಮ ನಿರೂಪಿಸಿದರು.