ಊಟ ಮಾಡಲು ಟಿಫಿನ್ ಬಾಕ್ಸ್‌ ತೆರೆದ ತಕ್ಷಣವೇ ಕುಸಿದು ಬಿದ್ದು 4ನೇ ತರಗತಿಯ ವಿದ್ಯಾರ್ಥಿನಿ ಸಾವು | Lunch Break

Lunch Break
Published on

Lunch Break: ಶಾಲೆಯಲ್ಲಿ 4 ನೇ ತರಗತಿಯ ವಿದ್ಯಾರ್ಥಿನಿ ಊಟದ ಸಮಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.

ಪ್ರಾಚಿ ಕುಮಾವತ್ ಎಂಬ ಒಂಬತ್ತು ವರ್ಷದ ವಿದ್ಯಾರ್ಥಿನಿ ಊಟದ ವಿರಾಮದ ಸಮಯದಲ್ಲಿ ಕುಸಿದು ಬಿದ್ದು ನಂತರ ಶಂಕಿತ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಲಾಗಿದೆ.

ವಿರಾಮದ ಸಮಯದಲ್ಲಿ ಪ್ರಾಚಿ ಊಟ ಮಾಡಲು ಕುಳಿತಿದ್ದಾಳೆ ನಂತರ ಟಿಫಿನ್ ತೆರೆದ ತಕ್ಷಣ ಕುಸಿದು ಬಿದ್ದಿದ್ದಾಳೆ. ಶಿಕ್ಷಕರು ಆಕೆಯ ಸಹಾಯಕ್ಕೆ ಧಾವಿಸಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.

"ಅವಳು ಪ್ರಜ್ಞಾಹೀನಳಾಗಿದ್ದಳು, ಉಸಿರುಗಟ್ಟಿಸುತ್ತಿದ್ದಳು, ನಾಡಿಮಿಡಿತ ಅಥವಾ ರಕ್ತದೊತ್ತಡವಿರಲಿಲ್ಲ. ಅವಳ ಹೃದಯ ಬಡಿತ ನಿಂತುಹೋಗಿತ್ತು" ಎಂದು ವೈದ್ಯರು ಹೇಳಿದರು.

ಪ್ರಾಚಿ ಶೀತದಿಂದಾಗಿ ಎರಡು ಮೂರು ದಿನಗಳ ಕಾಲ ಶಾಲೆಗೆ ಬರಲಿಲ್ಲ, ಆದರೆ ಸೋಮವಾರ ಆರೋಗ್ಯವಾಗಿ ಮರಳಿದರು. ಬೆಳಗಿನ ಪ್ರಾರ್ಥನೆ ಮತ್ತು ಸಭೆಗಳಲ್ಲಿ ಭಾಗವಹಿಸಿದ್ದಳು. ಯಾವುದೇ ಎಚ್ಚರಿಕೆಯ ಸೂಚನೆಗಳಿರಲಿಲ್ಲ ಎಂದು ಪ್ರಾಂಶುಪಾಲ ನಂದ ಕಿಶೋರ್ ತಿವಾರಿ ತಿಳಿಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net