
ಚನ್ನಗಿರಿ: 14 ವರ್ಷ ತುಂಬದ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದು ಕಾನೂನು ಪ್ರಕಾರ ಅಪರಾಧವಾಗಿದೆ. ನಾವು ಜಾಗೃತರಾಗಿ ಬಾಲ ಕಾರ್ವಿುಕ ಪದ್ಧತಿಯನ್ನು ಹೋಗಲಾಡಿಸಬೇಕಿದೆ ಎಂದು ನ್ಯಾಯಾಲಯದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜಿ. ಮಹಾಲಕ್ಮೀ ತಿಳಿಸಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಗುರುವಾರ ತಾಲೂಕು ಕಾನೂನು ಮತ್ತು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಬಾಲ ಕಾರ್ವಿುಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಕ್ಕಳೇ ನಮ್ಮ ಆಸ್ತಿ, ಅವರನ್ನು ದುಡಿಮೆಗೆ ಹಚ್ಚದೆ, ವಿದ್ಯಾಭ್ಯಾಸ ಕೊಡಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗುವಂತೆ ಮಾಡಬೇಕು. ಬಾಲ ಕಾರ್ವಿುಕರು ಇತ್ತೀಚಿನ ದಿನದಲ್ಲಿ ಹೋಟೆಲ್, ಗ್ಯಾರೇಜ್ ಮತ್ತು ಅಂಗಡಿಗಳಲ್ಲಿ ಕಾಣುತ್ತಿದ್ದಾರೆ. ಇದಕ್ಕೆ ಬಡತನ ಕಾರಣವಾಗಿದೆ, ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳು ಸಂವಿಧಾನದ ಮೂಲ ಹಕ್ಕುಗಳಿಗೆ ಬದ್ಧರಾಗಿದ್ದು, ಎಲ್ಲರಿಗೂ ಸರ್ಕಾರದ ಪ್ರತಿಯೊಂದು ಸೌಲಭ್ಯ ಸಿಗುವಂತೆ ಆಗಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ರಾಜಪ್ಪ ಕಂಚಿಗನಾಳು ಮಾತನಾಡಿ, ಬಾಲ ಕಾರ್ವಿುಕ ಪದ್ಧತಿಯನ್ನು ದೇಶದಲ್ಲಿ ಹೋಗಲಾಡಿಸುವ ಜತೆಗೆ ಅದರಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಬೇಕಿದೆ. ಮನೆಯಲ್ಲಿರುವ ಯಜಮಾನ ಬುದ್ಧಿವಂತನಾಗಿ ಮಕ್ಕಳಿಗೆ ಅಕ್ಷರವನ್ನು ಕಲಿಸುವ ಗುರಿಯನ್ನು ಹೊಂದಿದಾಗ ಮಾತ್ರ ಇಂತಹ ಅನಿಷ್ಟ ಪದ್ಧ್ದಯನ್ನು ಹೋಗಲಾಡಿಸಲು ಸಾಧ್ಯ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಕಾರ್ಯದರ್ಶಿ ಮುದ್ದೇನಹಳ್ಳಿ ಜಗದೀಶ್, ಬಾಲ ಕಾರ್ವಿುಕ ಇಲಾಖೆಯ ಕಾರ್ವಿುಕ ನಿರೀಕ್ಷಕ ಟಿ.ರಾಜಪ್ಪ, ಪ್ರಾಚಾರ್ಯ ಲೋಹಿತಾಶ್ವ, ತಿಪ್ಪೇಶ್ ಇತರರು ಇದ್ದರು.