

ಉಡುಪಿ: ಜನರಿಗೆ ಕಷ್ಟ ಎದುರಾದಾಗ ಅಥವಾ ಯಾರಾದರೂ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಮಾನವೀಯ ನೆಲೆಯಲ್ಲಿ ಸ್ಪಂದಿಸುತ್ತದೆ. ಸಮಿತಿ ಸಾಮಾಜಿಕ ಸೇವೆ ಅನನ್ಯ ಎಂದು ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ನಡೆಸಲ್ಪಡುವ ಉಚಿತ ಸೇವೆ ಆಂಬುಲೆನ್ಸ್ ವಾಹನದ ವಿಮಾ ಕಂತು ಭರಿಸಲು ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಶನಿವಾರ ಚೆಕ್ ಹಸ್ತಾಂತರಿಸಿ ಮಾತನಾಡಿದರು.
ಸಾಮಾಜಿಕ ಕಳಕಳಿ ಹೊಂದಿರುವ ಹಾಗೂ ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಅವರು ನೊಂದವರಿಗೆ ಹಾಗೂ ಅಸಹಾಯಕರಿಗೆ ತಕ್ಷಣದಲ್ಲೇ ಸಹಕರಿಸಲು ಮುಂದಾಗುತ್ತಾರೆ. ಅನಾಥ ಶವಗಳಿಗೆ ಅಂತಿಮ ಸಂಸ್ಕಾರ ನೀಡುವ ಮೂಲಕ ವಿಶಿಷ್ಟ ಸೇವೆ ಸಲ್ಲಿಸುತ್ತಾರೆ. ಅವರ ಈ ಕಾರ್ಯ ಮಾದರಿ ಎಂದರು.
ನಿತ್ಯಾನಂದ ಒಳಕಾಡು ಚೆಕ್ ಸ್ವೀಕರಿಸಿದರು. ಸೊಸೈಟಿ ಪ್ರಧಾನ ವ್ಯವಸ್ಥಾಪಕ ರಾಜೇಶ್ ಶೇರಿಗಾರ್, ಲೆಕ್ಕಿಗ ಅಶ್ವಿನ್ ಉಪಸ್ಥಿತರಿದ್ದರು.