ಸದ್ದು ಮಾಡುತ್ತಿದೆ ಭೀಮ ಮೇಕಿಂಗ್; ಎರಡನೇ ಹಂತದ ಚಿತ್ರೀಕರಣ ಪ್ರಾರಂಭ

Bheema
Published on

‘ಸಲಗ’ ಚಿತ್ರದ ಯಶಸ್ಸಿನ ಬಳಿಕ ನಟ-ನಿರ್ದೇಶಕ ವಿಜಯ್ ಸದ್ಯ ‘ಭೀಮ’ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಏಪ್ರಿಲ್​ನಲ್ಲಿ ಪ್ರಾರಂಭವಾದ ‘ಭೀಮ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನ ಹಲವೆಡೆ ಕಳೆದ ವಾರವಷ್ಟೇ ಪೂರ್ಣಗೊಂಡಿದೆ. ಈಗ ಸಣ್ಣ ಬ್ರೇಕ್​ನ ನಂತರ ವಿಜಯ್ ನಿನ್ನೆ ಸೋಮವಾರ (ಮೇ 23)ದಿಂದಲೇ ಎರಡನೇ ಹಂತದ ಚಿತ್ರೀಕರಣ ಪ್ರಾರಂಭಿಸಿದ್ದಾರೆ.

ಮೊದಲ ಹಂತದ ಮೇಕಿಂಗ್ ವಿಡಿಯೋವೊಂದನ್ನು ಯೂಟ್ಯೂಬ್​ನಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ವೈರಲ್ ಆಗಿದೆ. ಯೆಜ್ಡಿ ಬೈಕ್ ಚಲಾಯಿಸಿಕೊಂಡು ಹೋಗುವ ನಟ ಅಚ್ಯುತ್ ಕುಮಾರ್, ‘ಬ್ಲಾ್ಯಕ್ ಡ್ರಾಗನ್’ ಖ್ಯಾತಿಯ ಖಳನಟ ಮಂಜು ಹಾಗೂ ಚಿತ್ರದಲ್ಲಿನ ಲೊಕೇಶನ್​ಗಳು ಗಮನಸೆಳೆಯುತ್ತವೆ.

ಇನ್ನು, ಎರರಡನೇ ಹಂತದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ವಿಜಯ್, ‘ಎರಡನೇ ಹಂತದ ಚಿತ್ರೀಕರಣವನ್ನು 20 ದಿನಗಳ ಕಾಲ ಪ್ಲಾನ್ ಮಾಡಿಕೊಂಡಿದ್ದೇನೆ. ಬೆಂಗಳೂರು, ಕೋಲಾರ, ತುಮಕೂರು, ಮಲೆಮಹದೇಶ್ವರ ಬೆಟ್ಟ, ಮೈಸೂರು ಮಾತ್ರವಲ್ಲ ಕೇರಳ ಹಾಗೂ ತಮಿಳುನಾಡಿನಲ್ಲೂ ಚಿತ್ರೀಕರಣ ಮಾಡಲಿದ್ದೇನೆ’ ಎನ್ನುತ್ತಾರೆ. ಒಟ್ಟಾರೆ, ‘ಭೀಮ’ ಚಿತ್ರದ ಚಿತ್ರೀಕರಣ ಸದ್ಯ ವೇಗವಾಗಿ ಸಾಗುತ್ತಿದ್ದು, ‘ಸಲಗ’ ಚಿತ್ರಕ್ಕಿಂತ ದೊಡ್ಡ ಮಟ್ಟದಲ್ಲಿ ಮೂಡಿಬರುವ ವಿಶ್ವಾಸ ಚಿತ್ರತಂಡದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net