ಮತ್ತೆ ಕಿರುತೆರೆಗೆ ಗಣೇಶ್; ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ...

Ganesh
Published on

ಬೆಂಗಳೂರು: ಗಣೇಶ್​ಗೆ ಕಿರುತೆರೆ ಹೊಸದೇನಲ್ಲ. ಹಾಗೆ ನೋಡಿದರೆ, ಕಿರುತೆರೆಯಿಂದ ಹಿರಿತೆರೆಗೆ ಬಂದು ಸ್ಟಾರ್​ಪಟ್ಟ ಅಲಂಕರಿಸಿದವರಲ್ಲಿ ಅವರು ಮೊದಲಿಗರು. ಎರಡು ವರ್ಷಗಳ ಹಿಂದೆ ಸಹ ಕಲರ್ಸ್ ಕನ್ನಡದ ‘ಸೂಪರ್ ಮಿನಿಟ್’ ನಡೆಸಿಕೊಡುತ್ತಿದ್ದ ಅವರು, ಆ ನಂತರ ಕಿರುತೆರೆಯಲ್ಲಿ ಕಂಡಿಲ್ಲ.

ಈಗ ಜೀ ಕನ್ನಡದ ಹೊಸ ರಿಯಾಲಿಟಿ ಶೋವೊಂದರಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಶನಿವಾರ. ಆ ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಮಾಡುವುದರ ಜತೆಗೆ, ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ವಿಷಯವನ್ನು ಅವರೇ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ.

ಹಾಗಾದರೆ, ಈ ಶೋ ಏನು? ಆ ವಿಷಯವನ್ನು ಗಣೇಶ್ ಎಲ್ಲೂ ಹೇಳಿಲ್ಲ. ‘ಬಹಳ ದಿನಗಳ ನಂತರ ಕಿರುತೆರೆಗೆ. ಜೀ ಕನ್ನಡದ ಮೂಲಕ ಒಂದು ಹೊಸ ರಿಯಾಲಿಟಿ ಶೋ ಜೊತೆ ಬರ್ತಿದ್ದೀನಿ. ಶೀಘ್ರದಲ್ಲಿ ... ನಿರೀಕ್ಷಿಸಿ’ ಎಂದಷ್ಟೇ ಬರೆದುಕೊಂಡಿದ್ದಾರೆ. ಪ್ರೋಮೋ ನೋಡಿದವರು, ಈ ಕಾರ್ಯಕ್ರಮ ಹಾಡಿಗೆ ಸಂಬಂಧಿಸಿದ್ದಾ ಅಥವಾ ನೃತ್ಯಕ್ಕೆ ಸಂಬಂಧಿಸಿದ್ದಾ ಎಂದು ಪ್ರಶ್ನಿಸುವುದು ಖರೆ. ಮೂಲಗಳ ಪ್ರಕಾರ, ಇದು ಹಾಡಿನ ಅಥವಾ ನೃತ್ಯದ ರಿಯಾಲಿಟಿ ಶೋ ಅಲ್ಲವಂತೆ. ಇದೊಂದು ಟಿಪಿಕಲ್ ಗಣೇಶ್ ಕಾರ್ಯಕ್ರಮವಾಗಿದ್ದು, ಪಕ್ಕಾ ಮನರಂಜನೆಯಿಂದ ಕೂಡಿರುತ್ತದಂತೆ. ಅಕ್ಟೋಬರ್​ನಿಂದ ಈ ಕಾರ್ಯಕ್ರಮ ಶುರುವಾಗಲಿದ್ದು, ತಯಾರಿ ಈಗಾಗಲೇ ಪ್ರಾರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net