‘ಪುರ್ ಸೋತ್ ರಾಮ’ನಿಗೆ ಪೈರಸಿ ಕಾಟ

pur shoth rama
Published on

ಬೆಂಗಳೂರು : ನಟ ರವಿಶಂಕರ್ ಅಭಿನಯದ ‘ಪುರ್ ಸೋತ್ ರಾಮ’ ಕನ್ನಡ ಸಿನಿಮಾವನ್ನು ಯು ಟ್ಯೂಬ್ ಮತ್ತು ಟೆಲಿಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದವರ ವಿರುದ್ದ ಈಶಾನ್ಯ ವಿಭಾಗ ಸಿಇಎನ್ ಠಾಣೆಗೆ ದೂರು ದಾಖಲಾಗಿದೆ.

ಮಾನಸ ಕಂಬೈನ್ಸ್ ಸಂಸ್ಥೆ ಮಾಲೀಕ ಮಾನಸ ದೂರು ನೀಡಿದ್ದಾರೆ. ಲಕ್ಷಾಂತರ ರೂ. ಹೂಡಿಕೆ ಮಾಡಿ ೆ.19ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಗೆ ಸೆಂಟ್ರಲ್ ಬೋರ್ಡ್ ಆ್ ಸರ್ಟೀಫಿಕೇಷನ್ ಪಡೆಯಲಾಗಿತ್ತು. ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಿಡುಗಡೆಗೆ ಸಾಧ್ಯವಾಗಲಿಲ್ಲ.

ಡಿ.11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಕಿಡಿಗೇಡಿಗಳು ಪೈರಸಿ ಮಾಡಿ ಯು ಟ್ಯೂಬ್ ಮತ್ತು ಟೆಲಿಗ್ರಾಮ್‌ನಲ್ಲಿ ಸಿನಿಮಾದ ಲಿಂಕ್ ಅಪ್‌ಲೋಡ್ ಮಾಡಿದ್ದಾರೆ. ಬಂಡವಾಳ ಹೂಡಿಕೆ ಮಾಡಿರುವ ನಮಗೆ ಲಕ್ಷಾಂತರ ರೂ. ನಷ್ಟವಾಗಿದೆ. ಪೈರಸಿ ಮಾಡಿದ ಆರೋಪಿಗಳನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮಾನಸ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net