ನಟ ಭಯಂಕರನ ಪೋಸ್ಟರ್ ಸಿಎಂ ಬೊಮ್ಮಾಯಿ ಅವರಿಂದ ಬಿಡುಗಡೆ

Nata Bhayankara
ನಟ ಭಯಂಕರ ಸಿನಿಮಾದ
Published on

ಬೆಂಗಳೂರು: ಪ್ರಥಮ್ ‘ನಟ ಭಯಂಕರ’ ಚಿತ್ರದ ಪೋಸ್ಟರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬಿಡುಗಡೆ ಮಾಡಿಸಬೇಕೆಂಬ ಆಸೆ ಇತ್ತಂತೆ. ಇನ್ನೇನು ಅವರನ್ನು ಭೇಟಿ ಮಾಡಬೇಕು ಎನ್ನುವಷ್ಟರಲ್ಲೇ ಮುಖ್ಯಮಂತ್ರಿಗಳಿಗೆ ಕರೊನಾ ಪಾಸಿಟಿವ್ ಎಂಬ ಸುದ್ದಿ ಬಂತು. ಅವರು ಅದರಿಂದ ಚೇತರಿಸಿಕೊಳ್ಳುತ್ತಲೇ, ಪ್ರಥಮ್ ತಮ್ಮ ತಂಡದವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ. ಅಲ್ಲಿಗೆ, ಪ್ರಥಮ್ ಅವರ ಒಂದು ಆಸೆ ಈಡೇರಿದಂತಾಗಿದೆ.

ಮುಖ್ಯಮಂತ್ರಿಗಳಿಗೆ ಚಿತ್ರವನ್ನು ತೋರಿಸಬೇಕೆಂಬ ಆಸೆ ಇದೆಯಂತೆ. ಆದರೆ, ಮುಖ್ಯಮಂತ್ರಿಗಳು ಸದ್ಯಕ್ಕೆ ಬಿಜಿಯಾಗಿರುವುದರಿಂದ, ವಾತಾವರಣ ಸ್ವಲ್ಪ ತಿಳಿಯಾದ ಮೇಲೆ ಅವರಿಗೆ ಸಿನಿಮಾ ನೋಡುವುದಕ್ಕೆ ವಿನಂತಿಸಿಕೊಳ್ಳುತ್ತಾರಂತೆ. ‘ನಟ ಭಯಂಕರ’ ಚಿತ್ರಕ್ಕೆ ಉದಯ್ ಮೆಹ್ತಾ ಕಥೆ ಬರೆದಿದ್ದು, ಪ್ರಥಮ್ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನ ಮಾಡಿ, ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ಅವರಿಗೆ ನಾಯಕಿಯಾಗಿ ಸುಶ್ಮಿತಾ ಜೋಷಿ ಮತ್ತು ನಿಹಾರಿಕಾ ಶೆಣೈ ನಟಿಸಿದ್ದು, ಸಾಯಿಕುಮಾರ್, ಓಂಪ್ರಕಾಶ್ ರಾವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಉಪೇಂದ್ರ ಒಂದು ಹಾಡು ಹಾಡಿದ್ದು, ಧ್ರುವ ಸರ್ಜಾ ಹಿನ್ನೆಲೆ ಧ್ವನಿ ಇದೆ.

06

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net