ಧೀರ ಭಗತ್​ ರಾಯ್​ ; ಭೂ ಸುಧಾರಣಾ ಕಾಯ್ದೆಯ ಹಿನ್ನೆಲೆಯಲ್ಲಿ ಸಾಗುವ ನೈಜ ಘಟನೆಯಾಧಾರಿತ ಚಿತ್ರ

zxcczc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಕರ್ಣನ್​ ಚೊಚ್ಚಲ ಬಾರಿಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್​-ಕಟ್​ ಹೇಳಿರುವ ಸಿನಿಮಾ "ಧೀರ ಭಗತ್​ ರಾಯ್​'. ರಾಕೇಶ್​ ದಳವಾಯಿ ಈ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿದ್ದು, ನಾಯಕಿ ಸುಚರಿತಾ ಅವರಿಗೂ ಇದು ಮೊದಲ ಪ್ರಯತ್ನ. ಭೂ ಸುಧಾರಣಾ ಕಾಯ್ದೆಯ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ನಡೆಯುವ ಟನೆಗಳ ಸುತ್ತ ಕಥೆ ಸಾಗುತ್ತದೆ.

ಇತ್ತೀಚೆಗಷ್ಟೆ ನಟ ದುನಿಯಾ ವಿಜಯ್​ ಚಿತ್ರದ ಟ್ರೇಲರ್​ ರಿಲೀಸ್​ ಮಾಡಿ, ""ಧೀರ ಭಗತ್​ ರಾಯ್​ ಸಮಾನತೆಗೆ ಒತ್ತು ಕೊಡುವ ಚಿತ್ರ. ಸಮಾನತೆ ಎಂಬುದು ನನಗೆ ಬಹಳ ಹೆಮ್ಮೆ ತರುವ ವಿಚಾರ. ಅದರಲ್ಲೂ ಹೋರಾಟಗಾರರ ಕುರಿತ, ಹೋರಾಟಗಳ ಕಥೆ ಎಂದರೆ ನನಗೆ ಪ್ರೀತಿ. ಅವುಗಳಲ್ಲಿ ಕಿಚ್ಚಿರುತ್ತದೆ. ನ್ಯಾಯ, ನೀತಿ ಇರುತ್ತದೆ. ಇವತ್ತಿನ ಕಾಲಟ್ಟದಲ್ಲಿ ಸಿನಿಮಾ ಮಾಡುವುದು ಅಂದರೆ ಏಳೆಂಟು ಜನ್ಮ ಎತ್ತಿದ ಹಾಗೆ. ಅಷ್ಟು ಕಷ್ಟದ ಕೆಲಸ. ಆ ಸಾಹಸವನ್ನು ಈ ಹೊಸ ತಂಡ ಮಾಡಿರುವುದು ಖುಷಿಯ ವಿಷಯ' ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು.

ರಾಕೇಶ್​ ಮತ್ತು ಸುಚರಿತಾ ಜತೆ ಶರತ್​ ಲೋಹಿತಾಶ್ವ, ನೀನಾಸಂ ಅಶ್ವತ್ಥ್​, ಪ್ರವಿಣ್​, ಹರಿರಾಮ್​, ಸಂದೇಶ್​, ಸುಧೀರ್​ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತವಿರಲಿದೆ. ಇದೇ ಡಿಸೆಂಬರ್​ನಲ್ಲಿ "ಧೀರ ಭಗತ್​ ರಾಯ್​'ನನ್ನು ತೆರೆಗೆ ತರುವ ಐಡಿಯಾ ಚಿತ್ರತಂಡದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net