ಅಭಿಮಾನಿಗಳಿಗೆ ಚಿರಋಣಿ: ಚಿತ್ರರಂಗದಲ್ಲಿ 12 ವರ್ಷ ಪೂರೈಸಿದ ಸಮಂತಾ

Samantha
Published on

ಸಮಂತಾ ಶನಿವಾರ ಬೆಳಿಗ್ಗೆ ಏಳುತ್ತಿದ್ದಂತೆಯೇ ಒಂದು ವಿಷಯ ಗೊತ್ತಾಯಿತ್ತಂತೆ. ಚಿತ್ರರಂಗದಲ್ಲಿ 12 ವರ್ಷ ಪೂರೈಸಿದ್ದ ವಿಷಯ ಅರಿವಿಗೆ ಬಂದಿತಂತೆ. ಇದರಿಂದ ಖುಷಿಯಾದ ಅವರು, ತಕ್ಷಣವೇ ಇನ್​ಸ್ಟಾಗ್ರಾಂನಲ್ಲಿ ಒಂದು ಸಂದೇಶ ಹಾಕಿದ್ದಾರೆ. ತಮ್ಮ ವೃತ್ತೀಜಿವನದಲ್ಲಿ ಕೈ ಹಿಡಿದು ನಡೆಸಿದ ಎಲ್ಲರಿಗೂ, ಅದರಲ್ಲೂ ತಮ್ಮ ಪ್ರಾಮಾಣಿಕ ಅಭಿಮಾನಿಗಳಿಗೆ ಅವರು ಅನಂತಾನಂತ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸಮಂತಾ ಅಭಿನಯದ "ಯೇ ಮಾಯಾ ಚೇಸಾವೇ' ಎಂಬ ಮೊದಲ ತೆಲುಗು ಚಿತ್ರ 2010ರ ೆಬ್ರವರಿ 26ಕ್ಕೆ ಬಿಡುಗಡೆಯಾಗಿತ್ತು. ಈ ಚಿತ್ರ ಯಶಸ್ವಿಯಾಗಿ, ಆ ನಂತರ ಸಮಂತಾ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು. ಇತ್ತೀಚಿನ ವರ್ಷಗಳಲ್ಲಿ ಸಮಂತಾ ಸಾಕಷ್ಟು ಏರಿಳಿತಗಳನ್ನು ಕಂಡರೂ, ಇನ್ನೂ ಬೇಡಿಕೆ ಉಳಿಸಿಕೊಂಡಿದ್ದಾರೆ. "ಶಾಕುಂತಲಂ' ಸೇರಿದಂತೆ ಒಂದಿಷ್ಟು ಚಿತ್ರಗಳಲ್ಲಿ ಅವರು ನಟಿಸಿದು, ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿವೆ.

ಈ ಕುರಿತು ಬರೆದುಕೊಂಡಿರುವ ಸಮಂತಾ, "ಲೈಟ್ಸ್​, ಕ್ಯಾಮೆರಾ, ಆ್ಯಕ್ಷನ್​ ನಡುವೆ 12 ವರ್ಷ ಆಗಿದ್ದೇ ಗೊತ್ತಾಗಲಿಲ್ಲ. ಇಂಥದ್ದೊಂದು ಅನುಭವ ಸಿಕ್ಕಿದ್ದಕ್ಕೆ ನಾನು ಚಿರಋಣಿ. ಅದರಲ್ಲೂ ಪ್ರಾಮಾಣಿಕ ಅಭಿಮಾನಿಗಳು ಸಿಕ್ಕಿದ್ದಕ್ಕೆ ನಾನು ಆಭಾರಿ. ಸಿನಿಮಾ ಜತೆಗಿನ ನನ್ನ ಪ್ರೇಮಕಥೆ ನಿರಂತರವಾಗಿ ಮತ್ತು ಇನ್ನಷ್ಟು ಗಟ್ಟಿಯಾಗಿ ಮುಂದುವರೆಯುತ್ತದೆ ಎಂಬ ನಂಬಿಕೆ ಇದೆ' ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net