ಜೀ ಮ್ಯೂಸಿಕಲ್ ಪಯಣ

Zee Kannada
Published on

ಬೆಂಗಳೂರು: ಹಲವು ವಿಶೇಷತೆಗಳನ್ನು ಕಿರುತೆರೆ ವೀಕ್ಷಕರಿಗೆ ನೀಡುತ್ತ ಬಂದಿರುವ ಜೀ ಕನ್ನಡ ಮನರಂಜನಾ ವಾಹಿನಿ, ಉಚಿತ ಮ್ಯೂಸಿಕಲ್ ಪಯಣ ಆರಂಭಿಸಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಜೀ ಕನ್ನಡ ವಾಹಿನಿಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪ ಸೀಸನ್ 17, ಕಡಿಮೆ ಅವಧಿಯಲ್ಲೇ ಹೆಚ್ಚು ಜನರಿಗೆ ತಲುಪಿದೆ.

ಹೀಗಾಗಿ ಆ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಸಣ್ಣ ಪ್ರಯತ್ನವಾಗಿ ಉಚಿತ ಸಂಗೀತಮಯ ಪ್ರಯಾಣವನ್ನು ವಾಹಿನಿ ಕಳೆದ ಭಾನುವಾರ ಆಯೋಜನೆ ಮಾಡಿತ್ತು. ಪ್ರಾಯೋಗಿಕವಾಗಿ ಬೆಂಗಳೂರಿನಿಂದ ಮಲೆಮಾದೇಶ್ವರ ಬೆಟ್ಟ, ಮೈಸೂರು, ಹುಬ್ಬಳ್ಳಿ ಧಾರವಾಡವರೆಗೂ ಬಸ್​ಗಳು ಸಂಚರಿಸಿ ಜನರ ಮನಗೆದ್ದವು. ಪ್ರಯಾಣಕ್ಕಾಗಿ ಮೂರು ಅಲಂಕೃತ ಬಸ್​ಗಳು ಸಿದ್ಧವಾಗಿದ್ದವು. ಸರಿಗಮಪ ಸೀಸನ್ 17ರ ಪೋಸ್ಟರ್​ಗಳಿಂದ ಅವು ಸಿಂಗಾರಗೊಂಡಿದ್ದವು. ಬಸ್​ನ ಒಳವಿನ್ಯಾಸ ಕೂಡ ಬದಲಾಗಿತ್ತು. ಈ ಮ್ಯೂಸಿಕಲ್ ಜರ್ನಿಯೂ ಜೀ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net